ಕೂದಲ ಸೌಂದರ್ಯಕ್ಕೆ ಬೃಂಗರಾಜ

0
  • ರಕ್ಷಾ ಬಡಾಮನೆ

ಉದ್ದನೆಯ ಕೂದಲು ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲರೂ ಕೂದಲಿಗಾಗಿ ನಾ ನಾ ಬಗೆಯ ಶಾಂಪು, ಸೋಪ್ ಹಾಗೂ ಕಂಡಿಶ್ನರ್ ಗಳ ಮೊರೆ ಹೋಗ್ತಾರೆ. ಆದರೆ ಅವುಗಳ ಬಳಕೆ ಮಾಡಿ ಸೋತು ಸುಮ್ಮನೆ ಕೂತು ಮತ್ತೆ ಆಯುರ್ವೇದ ಕಡೆಗೆ ತಿರುಗಿ ನೋಡಿದಾಗ ತೋರುವ ಗಿಡವೆಂದರೆ ಅದುವೇ ಭೃಂಗರಾಜ.

ಪುರಾತನ ಕಾಲದಿಂದಲೂ ಕೂದಲ ಸಮಸ್ಯೆಗೆ ರಾಮಬಾಣವಾಗಿರುವ ಈ ಗಿಡವು ಒಂದು ಸಣ್ಣ ಸಸ್ಯ. ಕೂದಲಿಗೆ ಆರೈಕೆ ಕೊಡುವುದಷ್ಟೇ ಅಲ್ಲದೆ ತನ್ನದೇ ಆದ ಔಷದೀಯ ಗುಣ ಗಳನ್ನು ಹೊಂದಿದೆ.

ಭೃಂಗರಾಜ ಗಿಡಕ್ಕೆ ಕನ್ನಡದಲ್ಲಿ ಗರುಗ, ಗರುಗದ ಸೊಪ್ಪು ಎಂದು ಕರೆಯುತ್ತಾರೆ. ಇದು ಕಳೆಯಂತೆ ಎಲ್ಲೆಡೆ ಬೆಳೆಯುತ್ತದೆ. ಇದು ಎರಡು ಅಡಿ ಬೆಳೆಯುವ ಪುಟ್ಟ ಏಕವಾರ್ಷಿಕ ಸಸ್ಯ. ಕಾಂಡವು ತುಂಬಾ ಮೃದುವಾಗಿದ್ದು. ಆಚೆ ಈಚೆ ಕವಲುಗಳು ಆಕ್ರಮಿಸಿ ನೆಲದ ಮೇಲೆ ತೆವಳಿ ಬೆಳೆಯುತ್ತದೆ. ಹೂವು ಬಿಳಿಯದಾಗಿದ್ದು ಚಿಕ್ಕದಾಗಿರುತ್ತದೆ. ಒಣಗಿದಾಗ ಅದರೊಳಗಿರುವ ಕಪ್ಪು ಬಣ್ಣದ ಬೀಜಗಳು ಹೊರಗೆ ಬರುತ್ತದೆ.

ಭೃಂಗರಾಜ ಗಿಡಕ್ಕೆ ನಾನಾ ಬಗೆಯ ಹೆಸರುಗಳಿವೆ. ಕೇಶದ ರಕ್ಷಣೆಗೆ ಒಳ್ಳೆಯದು ಆದ್ದರಿಂದ ಇದನ್ನು ಕೇಶರಂಜನ, ಕೇಶರಾಜ ಎಂದು ಕರೆಯುತ್ತಾರೆ. ಅರ್ಧ ತಲೆನೋವಿಗೆ ಉತ್ತಮ ಔಷದಿ ಆದ್ದರಿಂದ ಇದನ್ನು ಸೂರ್ಯವರ್ತ ಎಂದು ಕರೆಯಲಾಗುತ್ತದೆ.

ಅಜೀರ್ಣದಿಂದಾಗಿ ಹೊಟ್ಟೆಯುಬ್ಬರ ಉಂಟಾಗಿದ್ದರೆ ಭೃಂಗರಾಜವನ್ನು ಸಣ್ಣಗೆ ಹೆಚ್ಚಿಕೊಂಡು ಸ್ವಲ್ಪ ಎಣ್ಣೆಯಲ್ಲಿ ಹುರಿದು ಮೊಸರಿನಲ್ಲಿ ಜೀರಿಗೆ ಪುಡಿಯೊಂದಿಗೆ ಬೆರೆಸಿ ತಿನ್ನಬೇಕು. ಚರ್ಮರೋಗಗಳಲ್ಲಿ ಭೃಂಗರಾಜದ ಬೇರನ್ನು ಕುಟ್ಟಿ ಪುಡಿ ಪುಡಿ ಮಾಡಿ ನೀರಿನಲ್ಲಿ ಬೆರೆಸಿ ಲೇಪಿಸಬೆಕು.

ತಲೆನೋವಿನಿಂದ ಬಳಲುವವರು ಭೃಂಗರಾಜದ ರಸವನ್ನು ಎಳ್ಳೆಣ್ಣೆಯೊಂದಿಗೆ ಬೆರೆಸಿ ಹಣೆಗೆ ಲೇಪಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ತಲೆ ನೋವು ಕಡಿಮೆಯಾಗುತ್ತದೆ. ಎಲ್ಲ ದೇಶೀಯ ಯಕೃತ್ತಿನ ಟಾನಿಕ್ಗಳು ಈ ಸಸ್ಯದ ಅಂಶ ಹೊಂದಿರುತ್ತದೆ. ಕೂದಲು ಉುದುರುವಿಕೆಯನ್ನು ತಡೆಯುತ್ತದೆ.

ತಲೆ ಹೊಟ್ಟಿನ ನಿವಾರಣೆಗೂ ಭೃಂಗರಾಜ ಗಿಡ ಸಹಕಾರಿಯಾಗಿದೆ. ‌ಸಣ್ಣ ಪ್ರಾಯದವರಲ್ಲಿ ಬಿಳಿ ಕೂದಲು ಸಮಸ್ಯೆ ಎದುರಾದಾಗ ಅದನ್ನು ನಿವಾರಣೆಗೆ ಮಾಡಲು ಕೂಡ ಇದೇ ಭೃಂಗರಾಜ ಗಿಡ ಸಹಕಾರಿಯಾಗಿದೆ.

ಭೃಂಗರಾಜ ಗಿಡದಿಂದ ತಯಾರಿಸುವ ಎಣ್ಣೆಯನ್ನು ಸ್ನಾನ ಮಾಡಿದ ಮೇಲೆ ಹಚ್ಚುವುದರಿಂದ ರಕ್ತ ಸಂಚಾರ ಸರಿಯಾಗಿ ಆಗುತ್ತದೆ. ತಲೆಗೆ ಹಚ್ಚುವ ಎಣ್ಣೆ ತಯಾರಿಸುವಾಗ ಇದನ್ನು ಬೆರೆಸಿ ತಲೆಗೆ ಹಚ್ಚಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.

Leave A Reply

Your email address will not be published.