ಮುಖದ ಕೂದಲಿನ ನಿವಾರಣೆಗೆ ಮನೆಯಲ್ಲಿಯೇ ಫೇಸ್ ಪ್ಯಾಕ್

0
  • ಅಂಚನ್ ಗೀತಾ

ಅದ್ಯಾವಾಗ ದೇಶದಲ್ಲಿ ಲಾಕ್ ಡೌನ್ ಆದೇಶ ಜಾರಿಯಾಯಿತೋ ಅವತ್ತಿಂದ ಹೆಚ್ಚಿನ‌ ಮಹಿಳೆಯರಿಗೆ ಸಮಸ್ಯೆಯಾಗಿದ್ದು ಮುಖದಲ್ಲಿ ಬೆಳೆಯೋ ಅನಾವಶ್ಯಕ ಕೂದಲುಗಳು. ಆದ್ರೆ ಕೆಲವರಿಗೆ ದೇಹದಲ್ಲಿ ಹಾರ್ಮೋನುಗಳು ಏರುಪೇರಾದಾಗ ಕೂಡ ಹಲವೆಡೆ ಕೂದಲು ಹೆಚ್ಚಾಗಿ ಬೆಳೆಯುತ್ತದೆ. ಅದ್ರಲ್ಲೂ ತುಟಿ ಮೇಲೆ ಬೆಳೆಯೋ ಕೂದಲಂತೂ ಕೆಲವರಿಗೆ ಗಾಢವಾಗಿದ್ರೆ, ಇನ್ನು ಕೆಲವರಿಗೆ ತೆಳುವಾಗಿರುತ್ತೆ.

ಹಾಗಾದ್ರೆ ಮನೆಯಲ್ಲಿದ್ದುಕೊಂಡೆ‌ ಅಪ್ಪರ್ ಲಿಪ್ ನ ಹೇರ್ಸ್ ರಿಮೂವ್ ಮಾಡೋದು ಹೇಗೆ ಗೊತ್ತಾ.. ? ತುಂಬಾ ನ್ಯಾಚುರಲ್ ಆಗಿ ರಿಮೂ ಮಾಡೋ ವಿಧಾನವನ್ನು ನಾನು ನಿಮಗೆ ತಿಳಿಸಿಕೊಡ್ತಿನಿ. ಅದ್ರೆ ಇದು ಕ್ರಮೇಣ ಮುಖದಲ್ಲಿನ ಕೂದಲನ್ನು ಕಮ್ಮಿ ಮಾಡುತ್ತೆ… ಆದ್ರೆ ನೀವೂ ಈ ಫೇಸ್ ಪ್ಯಾಕ್ ನ ಅವಾಗವಾಗ ಬಳಸ್ತಾ ಇರ್ಬೆಕು..

ಹೀಗೆ ತಯಾರಿಸಿ ಫೇಸ್ ಪ್ಯಾಕ್ ?

1 spoon ಕಡಲೆ ಹಿಟ್ಟು,
1 spoon ಅಕ್ಕಿ ಹಿಟ್ಟು,
1/4 spoon ಅರಿಶಿನ,
2spoonಹಾಲು ( ಡ್ರೈ ಸ್ಕಿನ್ ಇರೋರು ಮಾತ್ರ),
2spoon ರೋಸ್ ವಾಟರ್ ( ಒಯ್ಲಿ ಸ್ಕೀನ್ ಇರೋರಿಗೆ ಮಾತ್ರ),
5 ಹನಿ ತೆಂಗಿನ ಎಣ್ಣೆ

ಇವೆರಡು option. ಇದ್ರಲ್ಲಿ ಅರಿಶಿನ ಕೆಲವರ ಚರ್ಮಕ್ಕೆ ಆಗಲ್ಲ‌ ಅಂತವರು ಅದನ್ನ ಸ್ಕಿಪ್ ಮಾಡಬಹುದು.

ಜೊತೆಗೆ ಡ್ರೈ ಸ್ಕಿನ್ ಇರೋರು ಹಾಲನ್ನ ಬಳಸಿ. ಆಯಿಲಿ ಸ್ಕಿನ್ ಇರೋರು ಹಾಲನ್ನು ಸ್ಕಿಪ್ ಮಾಡಿ ರೋಸ್ ವಾಟರ್ ಬಳಸಿ.

ಹೀಗೆ ಎಲ್ಲಾ ವಸ್ತುಗಳನ್ನ ಬಳಸಿ ಪೇಸ್ಟ್ ಮಾಡಿ ಯಾವ ಭಾಗದಲ್ಲಿ ಹೆಚ್ಚಿನ ಕೂದಲಿದಿಯೋ ಅಲ್ಲಿಗೆ ಈ ಪೇಸ್ಟ್ ಅನ್ನು ಹಚ್ಚಿ. 15 ನಿಮಿಷಗಳ ಬಳಿಕ ಒಂದು ಕಪ್ ನೀರಿನಲ್ಲಿ ಟಿಷ್ಯು or ಕಾಟನ್ ಬಟ್ಟೆ ಹಿಡಿದು circular motion ಅಲ್ಲಿ ರಿಮೂವ್ ಮಾಡ್ತಾ ಬನ್ನಿ. ರಿಮೂವ್ ಆದಾ ಬಳಿಕ ಆಲೋವಿರಾ ಜೆಲ್ ಅಪ್ಲೈ ಮಾಡಿ ಹಾಗೆ ಬಿಡಿ.

ಹೀಗೆ ಮಾಡ್ತಾ ಬರೋದ್ರಿಂದ ಕ್ರಮೇಣ ಕೂದಲು ಕಮ್ಮಿ ಆಗುತ್ತೆ. ಮುಖದ ಅಂದ ಕೂಡ ಹೆಚ್ಚಾಗುತ್ತೆ.
( ವಿ.ಸೂ‌: ಇದು ನನ್ನ ಮುಖಕ್ಕೆ ಅಪ್ಲೈ ಮಾಡಿದ ಬಳಿಕ ಒಳ್ಳೆ ರಿಸಲ್ಟ್ ಬಂದಿರೋದ್ರಿಂದ ಆರ್ಟಿಕಲ್ ಬರಿತಾ ಇದ್ದಿನಿ)

Leave A Reply

Your email address will not be published.