Home Remedies For Heartburn : ಊಟವಾದ ತಕ್ಷಣ ಕಾಣಿಸಿಕೊಳ್ಳುವ ಎದೆಯುರಿಗೆ ಇಲ್ಲಿದೆ ಮನೆಮದ್ದುಗಳು

ಅನೇಕ ಜನರು ಊಟದ ಅಥವಾ ತಿಂಡಿಯ (After Having Food) ನಂತರ ಎದೆಯುರಿಯ (Heartburn) ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಇದಕ್ಕೆ ಹಲವಾರು ಕಾರಣಗಳಿವೆ. ಸಮಯಕ್ಕೆ ಸರಿಯಾಗಿ ತಿನ್ನದಿರುವುದು, ಅತಿಯಾಗಿ ತಿನ್ನುವುದು, ಅನಾರೋಗ್ಯಕರ ಆಹಾರ ಮತ್ತು ತಪ್ಪು ಅಭ್ಯಾಸಗಳನ್ನು ರೂಢಿಸಿಕೊಂಡಿರುವುದು ಮುಂತಾದವುಗಳಿಂದ ಎದೆಯುರಿ ಉಂಟಾಗುತ್ತದೆ. ನೀವು ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸಿದ ಕಾರಣ ಕೆಲವೊಮ್ಮೆ ಉರಿ ಸಂಭವಿಸುತ್ತದೆ. ಹಾಗೆ ಉಲ್ಭಣವಾಗಿ ಎದೆ ಅಂದರೆ ಹೊಟ್ಟೆಯ ಮೇಲ್ಭಾಗದಲ್ಲಿ ಉರಿ ಸಮಸ್ಯೆ ಪ್ರಾರಂಭವಾಗುತ್ತದೆ. ಅನೇಕ ಬಾರಿ ಜನರು ಔಷಧಿಗಳನ್ನು ಸೇವಿಸುತ್ತಾರೆ. ಆದರೆ, ಕೆಲವೊಮ್ಮೆ ಎದೆಯುರಿ ಸಮಸ್ಯೆಗೆ ಔಷಧಿಗಳನ್ನು ತೆಗೆದುಕೊಳ್ಳುವ ಅಗತ್ಯವಿರುವುದಿಲ್ಲ. ಅದಕ್ಕೆ ಕೆಲವು ಮನೆಮದ್ದುಗಳನ್ನು (Home Remedies For Heartburn) ಪ್ರಯತ್ನಿಸಿ ನೊಡಿ. ಏಕೆಂದರೆ ಅತಿಯಾದ ಔಷಧವು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು.

ಊಟವಾದ ತಕ್ಷಣ ಕಾಣಿಸಿಕೊಳ್ಳುವ ಎದೆಯುರಿ ಸಮಸ್ಯೆಗೆ ಮನೆಮದ್ದುಗಳು :

ಬೇಕಿಂಗ್‌ ಸೋಡಾ :

ಎದೆಯುರಿಯನ್ನು ಕಡಿಮೆ ಮಾಡಲು ಬೇಕಿಂಗ್ ಸೋಡಾ ಬಹಳ ಪರಿಣಾಮಕಾರಿಯಾಗಿದೆ. ಅದಕ್ಕಾಗಿ, ಒಂದು ಲೋಟ ನೀರಿಗೆ ಕಾಲು ಚಮಚ ಅಡಿಗೆ ಸೋಡಾವನ್ನು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ನಂತರ ಆ ಮಿಶ್ರಣವನ್ನು ಕುಡಿಯಿರಿ. ಇದು ನಿಮಗೆ 15 ನಿಮಿಷಗಳಲ್ಲಿ ಪರಿಹಾರವನ್ನು ನೀಡುತ್ತದೆ. ಅಡುಗೆ ಸೋಡಾ ಕುಡಿದ ನಂತರ ಚಡಪಡಿಕೆ, ವಾಂತಿ, ಹೊಟ್ಟೆ ಉರಿ ಸಮಸ್ಯೆ ಕಡಿಮೆಯಾಗುತ್ತದೆ.

ಕ್ಯಾಮೊಮೈಲ್ ಚಹಾ :
ಎದೆಯುರಿ ಕಡಿಮೆ ಮಾಡಲು ಕ್ಯಾಮೊಮೈಲ್ ಚಹಾವನ್ನು ಸಹ ಕುಡಿಯಬಹುದು. ಇದರಲ್ಲಿರುವ ಹಲವು ಔಷಧೀಯ ಗುಣಗಳು ಹೊಟ್ಟೆಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಬಾದಾಮಿ:
ಬಾದಾಮಿ ಕೂಡ ಎದೆಯುರಿ ಸಮಸ್ಯೆಯನ್ನು ತಕ್ಷಣವೇ ಗುಣಪಡಿಸುತ್ತದೆ. 7–8 ಬಾದಾಮಿಯನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ಎದೆಯುರಿ ಸಮಸ್ಯೆಯಿಂದ ಪಾರಾಗಬಹುದು.

ಅಲೋವೆರಾ:
ಅಲೋವೆರಾ ಕೂಡ ಊಟದ ನಂತರ ಕಾಣಿಸುವ ಎದೆಯುರಿ ಗುಣಪಡಿಸುತ್ತದೆ. ಇದೊಂದು ನೈಸರ್ಗಿಕ ಮೂಲಿಕೆ. ಇದು ದೇಹವನ್ನು ತಂಪಾಗಿರಿಸುತ್ತದೆ. ಎದೆಯುರಿ ಸಮಸ್ಯೆ ಇದ್ದರೆ ಅಲೋವೆರಾವನ್ನು ಬಳಸಬಹುದು.

ಆಪಲ್:
ಪ್ರತಿದಿನ ಸೇಬನ್ನು ತಿಂದರೆ ಹೊಟ್ಟೆಯಲ್ಲಿರುವ ಎಲ್ಲಾ ಆಮ್ಲಗಳು ತಕ್ಷಣವೇ ಗುಣವಾಗುತ್ತವೆ. ಏಕೆಂದರೆ ಆಮ್ಲವು ಎದೆಯುರಿಯನ್ನು ಉಂಟುಮಾಡುತ್ತದೆ.

ಶುಂಠಿ:
ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಶುಂಠಿಯ ತುಂಡನ್ನು ಜಗಿಯುವುದು ಅಥವಾ ಶುಂಠಿ ಚಹಾವನ್ನು ಕುಡಿಯುವುದು ಸಹ ಎದೆಯುರಿ ಸಮಸ್ಯೆಗೆ ಪರಿಹಾರವಾಗಿದೆ.

ಇದನ್ನೂ ಓದಿ : MahaShivratri Fasting : ಮಹಾಶಿವರಾತ್ರಿಯ ಉಪವಾಸಕ್ಕೆ ಸುಲಭ ಉಪಹಾರಗಳು

ಇದನ್ನೂ ಓದಿ : Obesity: ಒಬೆಸಿಟಿಯಿಂದ ಕ್ಯಾನ್ಸರ್‌ ಬರತ್ತಾ; ದೇಹದ ತೂಕ ಹೆಚ್ಚಾದರೆ ಆಗುವುದಾದರೂ ಏನು…

(ಈ ಲೇಖನದಲ್ಲಿ ಉಲ್ಲೇಖಿಸಲಾದ ವಿಷಯ ಮತ್ತು ವಿಧಾನಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಯಾವುದೇ ಚಿಕಿತ್ಸೆ/ಔಷಧಿ/ಆಹಾರ ಮತ್ತು ಸಲಹೆಯನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ತಜ್ಞ ವೈದ್ಯರನ್ನು ಸಂಪರ್ಕಿಸಿ.)

(Home Remedies For Heartburn. Here are some tips for heartburn after having food)

Comments are closed.