Home Remedies for Hemorrhoids : ಮೂಲವ್ಯಾಧಿಗೆ ಶಾಶ್ವತ ಪರಿಹಾರ ಬೇಕಾ : ಹಾಗಾದ್ರೆ ಎಳನೀರನ್ನು ಹೀಗೆ ಕುಡಿಯಿರಿ

ಮೂಲವ್ಯಾಧಿಯಂತಹ (Home Remedies for Hemorrhoids) ಸಮಸ್ಯೆ ಉಷ್ಣ ದೇಹದವರಿಗೆ ಹೆಚ್ಚಾಗಿ ಬರುವ ಕಾಯಿಲೆಯಾಗಿದೆ. ಇವರಿಗೆ ಮಲವಿಸರ್ಜನೆಯಾದರೂ ಇನ್ನೂ ಮಲ ತುಂಬಿರುವ ಅನುಭವಾಗುತ್ತದೆ. ಗುದದ್ವಾರದ ಸುತ್ತಲೂ ತುರಿಕೆ ಮತ್ತು ಕೆಂಪಾಗಿರುತ್ತದೆ. ಮಲವಿಸರ್ಜನೆ ಸಮಯದಲ್ಲಿ ತುಂಬಾ ನೋವಿನಿಂದ ಕೂಡಿರುತ್ತದೆ. ಕೆಲವರಿಗೆ ಮಲವಿಸರ್ಜನೆ ಸಮಯದಲ್ಲಿ ರಕ್ತ ಕೂಡ ಹೋಗುತ್ತದೆ. ಮೂಲವ್ಯಾಧಿ ಇರುವವರಿಗೆ ರಕ್ತ ಸೋರಿಕೆ ಆಗುವುದರಿಂದ ವಿಪರೀತ ಸುಸ್ತು ಇರುತ್ತದೆ. ಹಾಗಾಗಿ ಇಂತವರು ಎಳ್ಳುನೀರನ್ನು ಹೀಗೆ ಮಾಡಿ ಕುಡಿಯುವುದರಿಂದ ಸಂಪೂರ್ಣವಾಗಿ ಗುಣಮುಖರಾಗುತ್ತಾರೆ. ಇದನ್ನು ತಯಾರಿಸುವ ವಿಧಾನವನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿ :
ಎಳನೀರು
ಜೀರಿಗೆ

ತಯಾರಿಸುವ ವಿಧಾನ :
ಹಿಂದಿನ ದಿನ ರಾತ್ರಿ ಒಂದು ಎಳನೀರಿನ ಮೇಲಿನ ಭಾಗವನ್ನು ಸಣ್ಣಕ್ಕೆ ತುತ್ತು ಮಾಡಿ ಅದಕ್ಕೆ ಒಂದು ಚಮಚ ಜೀರಿಗೆಯನ್ನು ಹಾಕಿ ಮಿಕ್ಸ್‌ ಮಾಡಬೇಕು. ಈ ಎಳನೀರನ್ನು ಒಂದು ಪಾತ್ರೆಯ ಮೇಲೆ ಇಟ್ಟು ತುತ್ತು ಮಾಡಿರುವ ಭಾಗವನ್ನು ಸರಿಯಾಗಿ ಮುಚ್ಚಿ ಇಡಬೇಕು. ಮರುದಿನ ಬೆಳಗ್ಗೆ ಮುಚ್ಚಿ ಇಟ್ಟ ಎಳನೀರನ್ನು ಓಪನ್‌ ಮಾಡಿ ನೀರನ್ನು ಒಂದು ಲೋಟಕ್ಕೆ ಸೊಸಿಕೊಳ್ಳಬೇಕು. ರಾತ್ರಿ ಪೂರ್ತಿ ಎಳನೀರಿನಲ್ಲಿ ನೆನೆದ ಜೀರಿಗೆಯ ಬಣ್ಣ ಬದಲಾಗಿರುತ್ತದೆ. ಇದನ್ನು ಒಂದು ವಾರದಿಂದ ಹಿಡಿದು ಒಂದು ತಿಂಗಳಿನವರೆಗೂ ಸತತವಾಗಿ ಮಾಡಿ ಕುಡಿಯುವುದರಿಂದ ಯಾವುದೇ ತರಹದ ಮೂಲವ್ಯಾಧಿ ಇದ್ದರೂ ಕೂಡ ಸಂಪೂರ್ಣವಾಗಿ ಗುಣವಾಗುತ್ತದೆ. ಮೂಲವ್ಯಾಧಿ ಹೆಚ್ಚಾಗಿ ಉಷ್ಣ ದೇಹದವರಿಗೆ ಬರುವುದರಿಂದ ಎಳನೀರು ಮತ್ತು ಜೀರಿಗೆ ನಮ್ಮ ದೇಹಕ್ಕೆ ಹೆಚ್ಚಿನ ತಂಪನ್ನು ನೀಡುತ್ತದೆ.

ಇದನ್ನೂ ಓದಿ : Home Remedies for Fever : ಜ್ವರ ಬಂದಾಗ ಈ ನಾಲ್ಕು ಮನೆಮದ್ದನ್ನು ತಪ್ಪದೇ ಬಳಸಿ

ಇದನ್ನೂ ಓದಿ : Curry Leaves Benefits: ಬಹುಪಯೋಗಿ ಕರಿಬೇವಿನ ಪ್ರಯೋಜನಗಳು ನಿಮಗೆ ಗೊತ್ತಾ…

ಇದನ್ನೂ ಓದಿ : Myositis: ಏನಿದು ಮಯೋಸಿಟಿಸ್‌ ಕಾಯಿಲೆ; ಲಕ್ಷಣ ಮತ್ತು ಕಾರಣಗಳೇನು…

ಹಾಗೆ ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದಿನ ಪೂರ್ತಿ ನಮ್ಮ ದೇಹದ ಉಷ್ಣತೆಯನ್ನು ತಂಪಾಗಿ ಇಡಲು ಸಹಾಯಕಾರಿಯಾಗಿರುತ್ತದೆ. ಎಳನೀರು ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೇ ಮೂತ್ರಕೋಶದ ಹಾದಿಯನ್ನು ಸ್ವಚ್ಚಗೊಳಿಸಿ ಉರಿಮೂತ್ರವನ್ನು ಕೂಡ ನಿವಾರಣೆ ಮಾಡುತ್ತದೆ. ಎಳನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನಾಂಶದಿಂದ ಕೂಡಿದ್ದು, ಕಡಿಮೆ ಕೊಬ್ಬಿನಾಂಶವನ್ನು ಹೊಂದಿರುವುದರಿಂದ ನಮ್ಮ ದೇಹಕ್ಕೆ ಪೌಷ್ಟಿಕಾಂಶವನ್ನು ಪೂರೈಸುತ್ತದೆ. ಎಳನೀರನ್ನು ಕುಡಿಯುವುದರಿಂದ ಕಿಡ್ನಿ ಸ್ಟೋನ್‌, ಮೂತ್ರಕೋಶದಲ್ಲಿ ಕಲ್ಲು ಉಂಟಾಗದಂತೆ ತಡೆಯುತ್ತದೆ. ಇದು ರಕ್ತದೊತ್ತಡವನ್ನು ಕೂಡ ನಿಯಂತ್ರಿಸುತ್ತದೆ. ಹಾಗೆ ಬೇಸಿಗೆ ಕಾಲದಲ್ಲಿ ದೇಹಾಯಾಸ ಮತ್ತು ದಾಹವನ್ನು ನೀಗಿಸುತ್ತದೆ. ಹಾಗಾಗಿ ಒಂದು ಎಳನೀರಿನ ಸೇವನೆಯಿಂದ ದೇಹಕ್ಕೆ ಹಲವಾರು ಪೌಷ್ಟಿಕಾಂಶವನ್ನು ಲಭಿಸುತ್ತದೆ.

Home Remedies for Hemorrhoids : Need a permanent solution to hemorrhoids : Then drink fresh water like this

Comments are closed.