Soya Chunks Dosa : ಹೈ ಪ್ರೊಟೀನ್ ಇರುವ ಸೋಯಾ ಚಂಕ್ಸ್ ದೋಸೆ ರೆಸಿಪಿ

Soya Chunks Dosa : ಸಾಮಾನ್ಯವಾಗಿ ಸೋಯಾ ಚಂಕ್ಸ್ ಅಥವಾ ಸೋಯಾ ಬೀನ್‌ ಗಳಿಂದ ಕರಿ ,ಸೋಯಾ ಪಲಾವ್‌ ಅಥವಾ ಡ್ರೈ ಪದಾರ್ಥಗಳನ್ನು ಮಾಡುವುದು ರೂಢಿ. ಇದರಲ್ಲಿ ಅಧಿಕ ಪ್ರಮಾಣದ ಪ್ರೊಟೀನ್ ಇದ್ದು, ಕಟ್ಟು ಮಸ್ತಾದ ದೇಹ ಬಯಸುವ ಯುವಕರಿಗೆ ಇದು ಬಹಳ ಒಳ್ಳೆಯದು. ಇದರಲ್ಲಿ ಪ್ರೋಟಿನ್‌ ಹೆಚ್ಚಾಗಿ ಇರುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ .

ಸೋಯಾಬಿನ್ ನ ಡ್ರೈ ರೆಸಿಪಿಯನ್ನೇ ತಿಂದು ನಿಮಗೆಲ್ಲಾ ಬೇಜಾರಾಗಿರುತ್ತದೆ. ಹಾಗಿದ್ದರೆ ಇದನ್ನ ಒಮ್ಮೆ ಟ್ರೈ ಮಾಡಿ.
ಇಲ್ಲಿ ನಾವು ಹೈ ಪ್ರೊಟೀನ್ ಇರುವ ಸೋಯಾ ಚಂಕ್ಸ್ ದೋಸೆ(Soya Chunks Dosa) ಮಾಡುವ ವಿಧಾನವನ್ನ ತಿಳಿಸಿದ್ದೇವೆ. ಇದನ್ನು ಬಹಳ ಸುಲಭವಾಗಿ ತಯಾರಿಸಬಹುದು.ಹಾಗಿದ್ದರೆ ಸೋಯಾ ಚಂಕ್ಸ್ ದೋಸೆ ರೆಸಿಪಿ(Soya Chunks Dosa) ತಯಾರಿಸುವ ವಿಧಾನ ಹೇಗೆ ಎಂಬುದನ್ನು ನೋಡೋಣ.

ಇದನ್ನೂ ಓದಿ : Fizza Recipe : ಓವನ್‌ ಇಲ್ಲದೆ ಮನೆಯಲ್ಲೇ ಮಾಡಿ ರುಚಿಯಾದ ಪಿಜ್ಜಾ

ಇದನ್ನೂ ಓದಿ : Banana Biscuits : ಮನೆಯಲ್ಲೇ ಮಾಡಿ ಬಾಳೆಹಣ್ಣಿನ ಬಿಸ್ಕೆಟ್

ಬೇಕಾಗುವ ಪದಾರ್ಥಗಳು :
1 ಕಪ್ ಸೋಯಾ ಚಂಕ್ಸ್
1 ಟೊಮೆಟೊ
2 ಒಣ ಮೆಣಸಿನಕಾಯಿ
1 ಇಂಚಿನ ಶುಂಠಿ
2 ಕಪ್ ನೀರು
1 ಟೀಸ್ಪೂನ್ ಉಪ್ಪು
1 ಕಪ್ ಗೋಧಿ ಹಿಟ್ಟು
¾ ಕಪ್ ಅಕ್ಕಿ ಹಿಟ್ಟು
½ ಈರುಳ್ಳಿ
1ತುರಿದ ಕ್ಯಾರೆಟ್
ಕೊತ್ತಂಬರಿ ಸೊಪ್ಪು

ಇದನ್ನೂ ಓದಿ : Oil Free Chicken Sukka:ಎಣ್ಣೆ ಇಲ್ಲದೆ ಚಿಕನ್ ಸುಕ್ಕ ತಯಾರಿಸುವುದು ಹೇಗೆ ?

ತಯಾರಿಸುವ ವಿಧಾನ :
ಮೊದಲನೆಯದಾಗಿ, ಬಾಣಲೆಯಲ್ಲಿ 1 ಕಪ್ ಸೋಯಾ, 1 ಟೊಮೆಟೊ, 2 ಒಣಮೆಣಸಿನಕಾಯಿ, 1 ಇಂಚಿನ ಶುಂಠಿ, 2 ಕಪ್ ನೀರು ಮತ್ತು 1 ಟೀಸ್ಪೂನ್ ಉಪ್ಪನ್ನು ಹಾಕಿ, 10 ನಿಮಿಷಗಳ ಕಾಲ ಮುಚ್ಚಿ ಬೇಯಿಸಿಕೊಳ್ಳಿ . ಬೇಯಿಸಿದ ಪದಾರ್ಥಗಳು ತಣ್ಣಗಾದ ನಂತರ ಟೊಮೆಟೊ ಸಿಪ್ಪೆಯನ್ನು ತೆಗೆದು ಜೊತೆಗೆ ಬೇಯಿಸಿದ ಪದಾರ್ಥಗಳನ್ನು ತೆಗೆದು ಮಿಕ್ಸಿಗೆ ಹಾಕಿ ನುಣ್ಣಗೆ ಪೇಸ್ಟ್‌ ಮಾಡಿಕೊಳ್ಳಿ. ಸೋಯಾ ಪೇಸ್ಟ್ ಅನ್ನು ದೊಡ್ಡ ಬಟ್ಟಲಿಗೆ ಹಾಕಿ, ಅದಕ್ಕೆ 1 ಕಪ್ ಗೋಧಿ ಹಿಟ್ಟು, ¾ ಕಪ್ ಅಕ್ಕಿ ಹಿಟ್ಟು, ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ, ಅಗತ್ಯವಿರುವಷ್ಟು ನೀರು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಈಗ ½ ಹೆಚ್ಚಿದ ಈರುಳ್ಳಿ, 1 ತುರಿದ ಕ್ಯಾರೆಟ್ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ದೋಸೆಯ ಹದಕ್ಕೆ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ . ನಂತರ ತವಾವನ್ನು ತೆಗೆದುಕೊಂಡು ಒಲೆಯ ಮೇಲೆ ಕಾಯಲು ಇಡಿ . ತವಾ ಬಿಸಿಯಾದ ನಂತರ ಎಣ್ಣೆ ಹಚ್ಚಿ, ತಯಾರಿಸಿಟ್ಟ ಮಿಶ್ರಣವನ್ನು ತವಾದ ಮೇಲೆ ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿ. ಅಂತಿಮವಾಗಿ, ದೋಸೆ ತಯಾರಾದ ನಂತರ ಚಟ್ನಿ ಅಥವಾ ಸಾಸ್‌ನೊಂದಿಗೆ ಪ್ರೊಟೀನ್ ಭರಿತ ದೋಸೆಯನ್ನು ಸೇವಿಸಿ

Soya Chunks Dosa : It is customary to make curry, soya palav or dry ingredients from soya chunks or soya beans. It has a high amount of protein and is very good for young people who want a toned body. It has the ability to reduce cholesterol levels in the body due to its high protein content.

Comments are closed.