Sore Throat : ಚಳಿಗಾಲದಲ್ಲಿ ಉಂಟಾಗುವ ಸಾಮಾನ್ಯ ಗಂಟಲು ನೋವಿಗೆ ಈ ಮನೆಮದ್ದುಗಳೇ ಉತ್ತಮ ಪರಿಹಾರ

ಚಳಿಗಾಲ (Winter) ತಂಪಾದ ವಾತವಾರಣವಿರು (Chilled Weather) ಋತು. ಇದು ಅನೇಕ ಋತುಮಾನದ ಕಾಯಿಲೆಗಳನ್ನು (Seasonal Diseases) ಹೊತ್ತು ತರುತ್ತದೆ. ಕಿವಿ, ಕಣ್ಣು, ಮೂಗು ಮತ್ತು ಗಂಟಲಿನ ಸೋಂಕು (Sore Throat ) ಮುಂತಾದವುಗಳು. ಕೆಲವೊಮ್ಮೆ ಇದು ಒಂದೆರಡು ದಿನಗಳಲ್ಲಿ ಕಡಿಮೆಯಾದರೆ, ಇನ್ನು ಕೆಲವೊಮ್ಮೆ ಗಂಭೀರ ಸಮಸ್ಯೆಯನ್ನು ಉಂಟುಮಾಡುತ್ತದೆ. ಇಂತಹ ಕಾಯಿಲೆಗಳನ್ನು ಸರಿಯಾಗಿ ಕಾಳಜಿ ವಹಿಸದಿದ್ದರೆ, ಮುಂದೆ ಅವು ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು ಎದೆ ಮತ್ತು ಶ್ವಾಸಕೋಶದ ಮೇಲೆ ಗಂಭೀರ ಪರಿಣಾಮವನ್ನು ಬೀರಬಹುದು. ಅಂತಹ ಸಂದರ್ಭಗಳಲ್ಲಿ ಸೂಕ್ತ ವೈದ್ಯರ ಮೊರೆ ಹೋಗುವುದು ಅವಶ್ಯಕ.

ಋತುಗಳ ಬದಲಾಣೆಯಲ್ಲಿ ಸಂಭವಿಸುವ ಸಾಮಾನ್ಯ ಕಾಯಿಲೆಗಳು ದಿನನಿತ್ಯದ ಕೆಲಸಗಳನ್ನು ಮಾಡಲು ಅಡ್ಡಿಪಡಿಸುತ್ತವೆ. ದೇಹಕ್ಕೆ ಕಿರಿಕಿರಿಯ ಅನುಭವ ನೀಡುತ್ತದೆ. ಚಳಿಗಾಲದ ಸಾಮಾನ್ಯ ಕಾಯಿಲೆಗಳಲ್ಲಿ ಗಂಟಲು ನೋವು ಅಥವಾ ಸೋರ್‌ ಥ್ರೋಟ್‌ ಪ್ರಮುಖ. ಚಳಿಯಿಂದಾಗಿ ಗಂಟಲು ಕಟ್ಟಿ ನೋವು ಉಂಟಾಗುತ್ತದೆ. ಆಯುರ್ವೇದ ತಜ್ಞೆ ಡಿಂಪಲ್‌ ಜಂಗ್ಡಾ ಅವರು ಗಂಟಲು ನೋವನ್ನು ಗುಣಪಡಿಸಲು ಸಹಾಯ ಮಾಡುವ ಕೆಲವು ಮನೆಮದ್ದುಗಳನ್ನು ಹೇಳಿದ್ದಾರೆ.

  • ಒಂದು ಕಪ್‌ ಬಿಸಿ ನೀರಿಗೆ ಅರ್ಧ ಚಮಚ ಅರಿಶಿಣ ಪುಡಿ ಮತ್ತು ಅರ್ಧ ಚಮಚ ಉಪ್ಪನ್ನು ಮಿಶ್ರಣ ಮಾಡಿ, ಗಾರ್ಗಲ್‌ ಮಾಡಿ.
  • ಮಲಗುವ ಮೊದಲು ಹಾಲಿಗೆ ಅರಿಶಿಣ ಪುಡಿ ಸೇರಿಸಿ ಕುಡಿಯಬಹುದು. ನಮಗೆಲ್ಲರಿಗೂ ತಿಳಿದಿರುವಂತೆ ಅರಿಶಿಣದಲ್ಲಿ ರೋಗನಿರೋಧಕ ಶಕ್ತಿಯಿದೆ.
  • ಒಂದು ಕಪ್‌ ಬಿಸಿನೀರಿಗೆ ಅರ್ಧ ಚಮಚ ಕಲ್ಲುಪ್ಪು ಅನ್ನು ಸೇರಿಸಿ, ಗಾರ್ಗಲ್‌ ಮಾಡಿ. ಇದು ಗಂಟಲಿನಲ್ಲಿ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಕಫವನ್ನು ಸಡಿಲಗೊಳಿಸಿ, ದೇಹದಿಂದ ಹೊರಹೋಗುವಂತೆ ಮಾಡುತ್ತದೆ.
  • ತುಳಸಿ ಒಂದು ಔಷಧೀಯ ಸಸ್ಯ. ಇದು ಸಾಮಾನ್ಯ ಶೀತ, ಕೆಮ್ಮು ಮತ್ತು ಜ್ವರವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಏಕೆಂದರೆ ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತುಳಸಿಯು ಆ್ಯಂಟಿ–ಮೈಕ್ರೋಬಿಯಲ್‌, ಆ್ಯಂಟಿ–ಇನ್ಫಾಮೆಟರಿ ಮತ್ತು ಆ್ಯಂಟಿ–ಅಲರ್ಜಿಕ್‌ ಗುಣಗಳನ್ನು ಹೊಂದಿದೆ.
  • ಆಗಾಗ ಬಿಸಿ ನೀರಿನ್ನು ಕುಡಿಯುವುದರಿಂದರಲೂ ಗಂಟಲು ನೋವು ಶಮನವಾಗುವುದು.
  • ಗಂಟಲನ್ನು ಹೈಡ್ರೇಟ್‌ ಆಗಿ ಇರಿಸಿಕೊಳ್ಳುವುದು ಅವಶ್ಯಕ. ಏಕಂದರೆ ಕಫ ನೀರಾದಾಗ ಅದು ದೇಹದಿಂದ ಸುಲಭವಾಗಿ ಹೊರ ಹೋಗುತ್ತದೆ. ಅದಕ್ಕಾಗಿ ಸಾಕಷ್ಟು ಪ್ರಮಾಣದ ನೀರಿನಂಶವನ್ನು ಪೂರೈಸುವುದು ಅಗತ್ಯವಾಗಿದೆ. ತುಳಸಿಯ ಚಹಾ ಕುಡಿಯುವುದರಿಂದ ಗಂಟಲನ್ನು ಹೈಡ್ರೇಟ್‌ ಆಗಿರಿಸಬಹುದು ಮತ್ತು ಅದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ಇದನ್ನೂ ಓದಿ : Pradhan Mantri Vaya Vandana Yojana : ಒಮ್ಮೆ ಹಣ ಹೂಡಿಕೆ ಮಾಡಿ, ಪ್ರತಿ ತಿಂಗಳು 10,000 ರೂ. ಪಡೆಯಿರಿ

ಇದನ್ನೂ ಓದಿ : Jewelries : ಹಬ್ಬಗಳಲ್ಲಿ ವಿಶೇಷವಾಗಿ ಕಾಣಿಸಲು ಒಕ್ಸಿಡೈಸ್ಡ್‌ ಆಭರಣಗಳೇ ಬೆಸ್ಟ್‌..

(Home remedies for sore throat in this winter season)

Comments are closed.