ರಕ್ತ ಶುದ್ದೀಕರಣ ಮಾಡಲು ಮನೆಯಲ್ಲಿಯೇ ಇದೆ ಮದ್ದು..!

ರಕ್ಷಾ ಬಡಾಮನೆ

ಜೀವ ದ್ರವ ಎಂದು ಕರೆಯಲ್ಪಡುವ ರಕ್ತವು ನಮ್ಮ ದೇಹದ ಹಲವು ಕೆಲಸಗಳನ್ನು ಮಾಡಲು ಸಹಾಯ ಮಾಡುತ್ತದೆ. ರಕ್ತವು ಆಮ್ಲಜನಕ, ಹಾರ್ಮೋನ್, ದೇಹದ ಇತರೆ ಭಾಗಗಳಿಗೆ ಪೂರೈಕೆ ಮಾಡುತ್ತದೆ. ಕೆಲವೊಮ್ಮೆ ಒತ್ತಡದಿಂದಾಗಿ, ಮಾಲಿನ್ಯದಿಂದ ಮತ್ತು ಕೆಲವು ವಿಷಪೂರಿತ ಅಹಾರದಿಂದಾಗಿ ರಕ್ತವು ಕಲುಷಿತ ಗೊಳ್ಳುತ್ತದೆ.

ಇದರಿಂದ ಹಲವಾರು ಚರ್ಮ ಸಂಬಂಧಿ ಹಾಗೂ ಇತರೆ ಕಾಯಿಲೆ ಗಳು ಕಾಣಿಸಿ ಕೊಳ್ಳುತ್ತದೆ ಮತ್ತು ಹಲವು ದೇಹದ ಕೆಲಸಗಳು ಅಪೂರ್ಣ ವಾಗುತ್ತದೆ. ರಕ್ತ ಶುದ್ದಿಗೆ ಹಲವಾರು ಔಷಧಿಗಳು ಲಭ್ಯವಿದೆ. ಆದರೆ ನೀವು ತಿನ್ನುವ ಆಹಾರದೊಂದಿಗೆ ಕೆಲವು ಅಂಶಗಳನ್ನು ಸೇರಿಸುವುದರಿಂದ ನಿಮ್ಮ ರಕ್ತವನ್ನು ಶುದ್ದೀಕರಿಸಬಹುದು.

ಬೆಲ್ಲ
ಬೆಲ್ಲದಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುವುದರಿಂದ ಕಡಿಮೆ ರಕ್ತದಿಂದ ಬಳಲುವವರು ಪ್ರತಿದಿನ ಬೆಲ್ಲ ಸೇವಿಸುದರಿಂದ ರಕ್ತದ ಪ್ರಮಾಣ ದೇಹದಲ್ಲಿ ಹೆಚ್ಚಾಗುತ್ತದೆ. ಬೆಲ್ಲವು ರಕ್ತದಲ್ಲಿನ ಕಲ್ಮಶ ವನ್ನು ತೊಡೆದು ಹಾಕಿ ರಕ್ತ ಶುದ್ಧೀಕರಣ ದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಬ್ಲಾಕ್ ಕಾಫೀ
ಬ್ಲಾಕ್ ಕಾಫೀಯು ಯಕೃತ್ತಿನಲ್ಲಿ ಇರುವ ರಕ್ತವನ್ನು ಶುದ್ಧೀಕರಿಸುತ್ತದೆ. ಯಕೃತ್ತು ನಾವು ತಿನ್ನುವ ಆಹಾರ ವನ್ನ ಶಕ್ತಿಯಾಗಿ ಪರಿವರ್ತಿಸುತ್ತದೆ ಮತ್ತು ದೇಹದ ಕಲ್ಮಶ ವನ್ನೂ ಹೊರಗೆ ಹಾಕುತ್ತದೆ.

ಲಿಂಬೆ ಹಣ್ಣು
ಲಿಂಬೆ ಹಣ್ಣಿನ ರಸವನ್ನು ಹಿಂಡಿ ನೀರಿನಲ್ಲಿ ಬೆರಸಿ ಕುಡಿಯುದರಿಂದ ರಕ್ತವು ಶುದ್ಧಿಯಾಗುತ್ತದೆ.

ತುಳಸಿ
ತುಳಸಿಯು ಕೂಡ ರಕ್ತ ಶುದ್ಧೀಕರಣ ಕೆಲಸದಲ್ಲಿ ಸಹಾಯ ಮಾಡುತ್ತದೆ.

ಶುಂಠಿ
ದಿನನಿತ್ಯ ಜೀವನದಲ್ಲಿ ಶುಂಠಿ ಯನ್ನು ಬಳಸುವುದರಿಂದ ಕೂಡ ರಕ್ತ ಶುದ್ಧವಾಗುತ್ತದೆ.

ಬೇವು
ಬೇವಿನಲ್ಲಿ ಇರುವ ಆಂಟಿ – ವೈರಲ್, ಆಂಟಿ – ಫಂಗಲ್ ಅಂಶಗಳು ಕೂಡ ರಕ್ತ ಶುದ್ಧೀಕರಣದಲ್ಲಿ ಸಹಾಯ ಮಾಡುತ್ತದೆ.

ಬೆಳ್ಳುಳ್ಳಿ
ಬೆಳ್ಳುಳ್ಳಿಯು ಆಹಾರದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುವುದರಿಂದ ರಕ್ತ ಶುದ್ಧವಾಗುತ್ತದೆ.

ದ್ರಾಕ್ಷಿ ಹಣ್ಣು
ದ್ರಾಕ್ಷಿ ಯಲ್ಲಿ ಆಂಟಿ ಆಕ್ಸಿಡೆಂಟ್ ಗಳು ಇದ್ದು ಇವ್ವುಗಳು ರಕ್ತವನ್ನು ಶುದವಾಗಿರಿಸಲು ಸಹಾಯ ಮಾಡುತ್ತದೆ.

ಮೀನು
ಕೆಲವು ಜಾತಿಯ ಮೀನುಗಳಲ್ಲಿ ಒಮೆಗಾ 3 ಇರುವುದರಿಂದ ಅವ್ವುಗಳ ಸೇವನೆಯಿಂದ ರಕ್ತ ವು ಶುದ್ಧಿಯಾಗುತ್ತದೆ.

Comments are closed.