Knee Pain : ಕಾಡುತ್ತಿರುವ ಮಂಡಿ ನೋವಿಗೆ ಮನೆಯಲ್ಲೇ ಔಷಧ : ಈ ಜೆಲ್‌ ಒಮ್ಮೆ ಟ್ರೈ ಮಾಡಿ

ನಲ್ವತ್ತು ವರ್ಷ ದಾಟಿದ್ರೆ ಸಾಕು ಮಂಡಿನೋವು (Knee Pain) ಸಾಮಾನ್ಯವಾಗಿದೆ. ನಮ್ಮ ಕಾಲಿನ ಜಾಯಿಂಟ್‌ ಭಾಗದಲ್ಲಿರುವ ಜೆಲ್‌ ಪ್ರಮಾಣವು ಕ್ರಮೇಣ ಡ್ರೈ ಆಗುವುದ್ದರಿಂದ ಆ ಭಾಗದ ಮೂಳೆಯು ಒಂದಕ್ಕೊಂದು ತಿಕ್ಕುವುದರಿಂದ ಸವೆತಕ್ಕೆ ಒಳಗಾಗುತ್ತದೆ. ಹೀಗೆ ಮಂಡಿಯ ಮೂಳೆಯು ಸವೆತಕ್ಕೊಳಗಾದ ಅತೀವ ನೋವು ಕಾಣಿಸಿಕೊಳ್ಳುತ್ತದೆ. ಇದ್ದರಿಂದ ಹೆಚ್ಚು ನಡೆದಾಡಲು ಕಷ್ಟವಾಗುತ್ತದೆ. ಹಾಗೆ ಕೆಳಗಡೆ ಕೂತು ಕೆಲಸ ಮಾಡಲು ತುಂಬಾ ಕಷ್ಟವಾಗುತ್ತದೆ. ಎತ್ತರದ ಮಹಡಿಯನ್ನು ಹತ್ತಿ ಇಳಿಯಲು ತುಂಬಾ ಕಷ್ಟವೆನ್ನಿಸುತ್ತದೆ. ಆದರೆ ಈಗ ಮಂಡಿನೋವಿಗೆ ಮನೆಯಲ್ಲಿಯೇ ಸುಲಭ ರೀತಿಯಲ್ಲಿ ಔಷಧವನ್ನು ಮಾಡಿಕೊಳ್ಳಬಹುದಾಗಿದೆ. (Knee Pain)ಮಂಡಿನೋವಿಗೆ ಅರಶಿನ ಪುಡಿ ಬಿಳಿ ಎಕ್ಕೆಎಲೆ ಹಾಗೂ ಅಲವೇರಾದಿಂದ ನೋವನ್ನು ಶಮನಗೊಳಿಸಬಹುದಾಗಿದೆ.

ಬೇಕಾಗುವ ಸಾಮಗ್ರಿ:

  • ಅರಶಿನ ಪುಡಿ
  • ಬಿಳಿ ಎಕ್ಕೆಎಲೆ
  • ಅಲವೇರಾ
  • ಎಳ್ಳೆಣ್ಣೆ

ತಯಾರಿಸುವ ವಿಧಾನ:

ಒಂದು ಬಟ್ಟಲಿನಲ್ಲಿ ಅಲವೇರಾ ಲೋಳೆಯನ್ನು ತೆಗೆದುಕೊಂಡು ಅದರ ಹದಕ್ಕೆ ಸರಿಯಾಗಿ ಅರಶಿನ ಪುಡಿ ಮತ್ತು ಎಳ್ಳೆಣ್ಣೆಯನ್ನು ಮಿಕ್ಸ್‌ ಮಾಡಿಕೊಳ್ಳಬೇಕು. ಮನೆಯಲ್ಲೇ ಬೆಳೆಸಿದ ಅಲವೇರಾದ ಪೇಸ್ಟ್‌ ಮಾಡುವ ಮೊದಲು ಅಲವೇರಾವನ್ನು ಒಂದು ಬಾರಿ ಮಿಕ್ಸಿಯಲ್ಲಿ ರುಬ್ಬಿಕೊಂಡರೆ ಹದ ಚೆನ್ನಾಗಿ ಬರುತ್ತದೆ. ಪೇಸ್ಟ್‌ ರೆಡಿಯಾದ ಮೇಲೆ ಅದನ್ನು ಬದಿಯಲ್ಲಿ ಇಟ್ಟುಕೊಳ್ಳಬೇಕು. ನಂತರ ಒಂದು ತವಾವನ್ನು ಗ್ಯಾಸ್‌ ಮೇಲೆ ಇಟ್ಟುಕೊಂಡು ಅದು ಬಿಸಿಯಾದ ಮೇಲೆ ಅದರ ಮೇಲೆ ಎಳ್ಳೆಣ್ಣೆಯನ್ನು ಹರಡಬೇಕು. ನಂತರ ಮೊದಲೇ ಸ್ವಚ್ಛ ಮಾಡಿ ಇಟ್ಟುಕೊಂಡ ಎಕ್ಕೆ ಎಲೆಯನ್ನು( ಮಂಡಿ ಸುತ್ತ ಕಟ್ಟಲು ಬೇಕಾಗುವಷ್ಟು) ಬೆಚ್ಚಗೆ ಮಾಡಿಕೊಳ್ಳಬೇಕು. ರೆಡಿ ಮಾಡಿ ಇಟ್ಟುಕೊಂಡ ಪೇಸ್ಟ್‌ನ್ನು ನೋವಿರುವ ಮಂಡಿ ಸುತ್ತ ಹಚ್ಚಿ ನಿಧಾನಕ್ಕೆ ಮಸಾಜ್‌ ಮಾಡಿ ಆಮೇಲೆ ಬೆಚ್ಚಗಿರುವ ಎಕ್ಕೆ ಎಲೆಯನ್ನು ಮಂಡಿ ಸುತ್ತ ಇಟ್ಟು ಸಣ್ಣ ನೂಲಿನಿಂದ ಕಟ್ಟಿ ಸ್ವಲ್ಪ ಸಮಯ(ಅರ್ಧ ಗಂಟೆಯಿಂದ ಒಂದು ಗಂಟೆ) ಹಾಗೆ ಬಿಡಬೇಕು. ಆಮೇಲೆ ಸ್ವಚ್ಛ ಮಾಡಿಕೊಳ್ಳಬೇಕು. ಇದೇ ರೀತಿ (ತುಂಬಾ ನೋವಿದ್ದರೆ 15 ದಿನಗಳವರೆಗೆ) ಮಾಡುವುದರಿಂದ ಮೂರು ನಾಲ್ಕು ದಿನಗಳಲ್ಲಿ ನೋವು ಕಡಿಮೆಯಾಗಿರುವ ಅನುಭವ ಸಿಗುತ್ತದೆ.

ಬಿಳಿಎಕ್ಕೆಎಲೆಯ ಉಪಯೋಗ:

ಬಿಳಿಎಕ್ಕೆಎಲೆಯು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಸಾಮಾನ್ಯವಾಗಿ ಉಷ್ಣಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಮೂಲವ್ಯಾಧಿ ಖಾಯಿಲೆಯು ಹೆಚ್ಚಾಗಿ ಕಂಡುಬರುತ್ತದೆ. ಕೆಲವೊಂದು ಆಹಾರ ಪದ್ಧತಿಗಳಿಂದ ಮಲಬದ್ಧತೆಯು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಮೂಲವ್ಯಾಧಿ ಖಾಯಿಲೆಯು ಹೆಚ್ಚಿನ ಜನರ ದೇಹದಲ್ಲಿ ಕಾಣಿಸಿಕೊಳ್ಳುತ್ತದೆ. ಆಗ ಗುದದ್ವಾರಕ್ಕೆ ಬಿಳಿಎಕ್ಕೆದ ಹಾಲನ್ನು ಹಚ್ಚುವುದರಿಂದ ಮೂಲವ್ಯಾಧಿಯನ್ನು ಗುಣಪಡಿಸಿಕೊಳ್ಳಬಹುದಾಗಿದೆ.

ಅಲವೇರಾದ ಉಪಯೋಗ:

ಅಲವೇರಾವು ಔಷಧ ಸತ್ವವುಳ್ಳ ಸೌಂದರ್ಯವರ್ಧಕವು ಹೌದು. ಇದನ್ನು ಮುಖಕ್ಕೆ ಸತತವಾಗಿ ಹಚ್ಚುವುದ್ದರಿಂದ ಮುಖದ ಕಾಂತಿ ಜೊತೆಗೆ ಮುಖದಲ್ಲಿರು ಮೊಡವೆ ಹಾಗೂ ಕಲೆಗಳನ್ನು ನಿವಾರಿಸುತ್ತದೆ. ಹಾಗೆ ತಲೆ ಕೂದಲಿಗೆ ಹಚ್ಚುವುದರಿಂದ ತಲೆ ಹೊಟ್ಟನ್ನು ನಿವಾರಿಸುತ್ತದೆ. ಹಾಗೆ ತಲೆಕೂದಲು ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತದೆ. ಅಲವೇರಾವನ್ನು ಸಕ್ಕರೆ ಖಾಯಿಲೆ ಇರುವವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಶುಗರ್‌ ಮಟ್ಟವನ್ನು ಸರಿದೂಗಿಸಬಹುದಾಗಿದೆ.

ಎಳ್ಳೆಣ್ಣೆಯ ಉಪಯೋಗ :

ಎಳ್ಳೆಣ್ಣೆಯನ್ನು ಹೆಚ್ಚಿನ ಜನರು ಅಡುಗೆಯಲ್ಲೂ ಉಪಯೋಗಿಸುತ್ತಾರೆ. ಹಾಗೆ ಹಳ್ಳಿಕಡೆಯಲ್ಲಿ ಚಿಕ್ಕಮಕ್ಕಳಿಗೆ ಎಳ್ಳೆಣ್ಣೆಯನ್ನು ಮೈ ಕೈಗೆ ಹಂಚಿ ಸ್ನಾನ ಕೂಡ ಮಾಡಿಸುತ್ತಾರೆ. ಹೆಚ್ಚಿನ ಆರ್ಯುವೇದ ಔಷಧಗಳನ್ನು ತಯಾರಿಸುವಲ್ಲಿ ಎಳ್ಳೆಣ್ಣೆಯನ್ನು ಬಳಸುತ್ತಾರೆ. ಇದರಲ್ಲಿ ಸೆಸಮೋಲ್‌ ಮತ್ತು ಸೆಸಮಿನ್‌ ಸತ್ವವಿರುವುದರಿಂದ ದೇಹದಲ್ಲಿನ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ : ಗ್ಯಾಸ್ಟ್ರಿಕ್‌ ಸಮಸ್ಯೆಗೆ ಪುದೀನ ಲೆಮೆನ್‌ ಜ್ಯೂಸ್‌ ಟ್ರೈ ಮಾಡಿ

ಇದನ್ನೂ ಓದಿ : ಹೃದಯಾಘಾತದ ಹಿಂದೆ ಇರುವ ಅಪಾಯಕಾರಿ ಅಂಶಗಳ ಬಗ್ಗೆ ನಿಮಗೆ ಗೊತ್ತಾ

ಇದನ್ನೂ ಓದಿ : ಮಕ್ಕಳಲ್ಲಿ ಕಾಡುವ ಜೆಂತು ಹುಳು, ಕ್ರಿಮಿಹುಳುಗಳಿಗೆ ಮನೆಯಲ್ಲೇ ಇದೆ ಔಷಧ

ಅರಶಿನ ಪುಡಿ ಉಪಯೋಗ :

ಅರಶಿನ ಪುಡಿಯು ಅಡುಗೆ ಮನೆಯ ಸಂಗಾತಿ ಎಂದೆ ಹೆಚ್ಚಾಗಿ ಕರೆಯುತ್ತಾರೆ. ದಕ್ಷಿಣ ಭಾರತದ ಮಾಡುವ ಅಡುಗೆಗಳಲ್ಲಿ ಹೆಚ್ಚಾಗಿ ಅರಶಿನ ಪುಡಿಯನ್ನು ಬಳಸುತ್ತಾರೆ. ಹಾಗೆ ಸೌಂದರ್ಯವರ್ಧಕವಾಗಿ ಮುಖದ ಕಾಂತಿಯನ್ನು ಹೆಚ್ಚಿಸಲು ಬಳಸುತ್ತಾರೆ. ಕತ್ತರಿಸಿದ ಗಾಯಕ್ಕೆ ತಕ್ಷಣಕ್ಕೆ ಹಾಕುವುದರಿಂದ ಗಾಯದಿಂದ ರಕ್ತ ಬರುವುದನ್ನು ನಿಲ್ಲಿಸುತ್ತದೆ. ಹಾಗಾಗಿ ಅರಶಿನ ಪುಡಿ ಆರೋಗ್ಯವೃದ್ಧಿಯು ಹೌದು.

Home remedy for nagging knee pain: Try this gel once

Comments are closed.