Drinking water:ಬೆಳಗಿನ ಜಾವ ನೀರು ಕುಡಿಯುವಾಗ ಹೀಗೆ ಮಾಡಿದ್ರೆ ಅರಳುತ್ತೆ ನಿಮ್ಮ ಮುಖದ ಕಾಂತಿ

(Drinking water face glow )ಮುಖದ ಕಾಂತಿ ಹೆಚ್ಚಿಸುವುದಕ್ಕೆ ನೀರು ಪ್ರಮುಖ ಪಾತ್ರವನ್ನು ವಹಿಸುತ್ತದೆ.ಇತ್ತೀಚಿನ ದಿನಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ದಿನಕ್ಕೆ ಇಂತಿಷ್ಟು ನೀರನ್ನು ಕುಡಿಯಬೇಕೆನ್ನುವ ಟಾರ್ಗೆಟ್‌ ಇಟ್ಟುಕೊಂಡಿರುತ್ತಾರೆ. ಹಲವು ಸೆಲಬ್ರಿಟಿಗಳ ಮುಂದೆ ಬ್ಯುಟಿ ಟಿಪ್ಸ್‌ ನ ಬಗ್ಗೆ ಪ್ರಶ್ನೆ ಇಟ್ಟಾಗ ಮೊದಲ ಉತ್ತರ ನೀರನ್ನು ಅತಿಯಾಗಿ ಕುಡಿಯಿರಿ ಎಂದು ಹೇಳುತ್ತಾರೆ. ಕೆಲವರಿಗೆ ಬೆಳಿಗ್ಗೆ ಎದ್ದು ನೀರು ಕುಡಿಯುವ ಹವ್ಯಾಸವಿರುತ್ತದೆ. ಬರಿ ನೀರನ್ನು ಕುಡಿಯುವ ಬದಲು ಅದಕ್ಕೆ ಮನೆಯಲ್ಲಿರುವ ಪದಾರ್ಥವನ್ನು ಬೆರೆಸಿ ಕುಡಿದರೆ ಆರೋಗ್ಯ ಉತ್ತಮವಾಗಿರುತ್ತದೆ. ಇದರ ಜೊತೆಗೆ ಮುಖದ ಕಾಂತಿ ಹೆಚ್ಚಿಸಲು ಸಹಕಾರಿಯಾಗಿದೆ. ನೀರಿಗೆ ಬೇರೆಸಿ (Drinking water)ಕುಡಿಯುವ ಪದಾರ್ಥಗಳನ್ನು ಈ ಕೆಳಗೆ ಕೊಡಲಾಗಿದೆ.

Drinking water face glow : ಬೇಕಾಗುವ ಸಾಮಾಗ್ರಿ:

  • ನೀರು
  • ತಂಪಿನ ಬೀಜ( ಕಾಮ ಕಸ್ತೂರಿ)
  • ನಿಂಬೆಹಣ್ಣಿನ ರಸ
  • ಜೇನುತುಪ್ಪ

ಮಾಡುವ ವಿಧಾನ:
ಒಂದು ಗ್ಲಾಸ್‌ ನೀರಿಗೆ ತಂಪಿನ ಬೀಜ ಹಾಕಿ, ಅರ್ಧ ನಿಂಬೆಹಣ್ಣಿನ ರಸವನ್ನು ಹಾಕಬೇಕು ನಂತರದಲ್ಲಿ ಜೇನುತುಪ್ಪವನ್ನು ಬೆರೆಸಿ ಕರಡಿ ಕುಡಿಯುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಖಾಲಿ ನೀರನ್ನು ಕುಡಿಯಲು ಇಷ್ಟವಾಗದವರು ಈ ಜ್ಯೂಸ್‌ ನ್ನು ಒಂದು ಬಾಟಲ್ ನಲ್ಲಿ ತುಂಬಿಕೊಂಡು ಆಗಾಗ ಕುಡಿಯುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ತಂಪಿನ ಬೀಜ( ಕಾಮ ಕಸ್ತೂರಿ)
ಕಾಮಕಸ್ತೂರಿಯಲ್ಲಿ ಮಿಟಮಿನ್‌ ಎ,ಬಿ,ಇ ಮತ್ತು ಕ್ಯಾಲ್ಸಿಯಂ, ರಂಜಕ ,ಮೆಗ್ನೀಸಿಯಮ್‌ ,ಕಬ್ಬಿಣದಂತಹ ಪೋಷಕಾಂಶಗಳನ್ನು ಸಮೃದ್ದವಾಗಿ ಹೊಂದಿರುವುದರಿಂದ ತೂಕವನ್ನು ಇಳಿಕೆ ಮಾಡಿಕೊಳ್ಳಲು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಪ್ರಯೋಜನಕಾರಿಯಾಗಿದೆ. ರಾತ್ರಿ ಕಾಮಕಸ್ತೂರಿಯನ್ನು ನೀರಿನಲ್ಲಿ ನೆನಸಿಟ್ಟು , ಬೆಳಿಗ್ಗೆಯ ಸಮಯಕ್ಕೆ ನಿಂಬೆ ರಸವನ್ನು ಬೇರೆಸಿ ಕುಡಿದರೆ ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ.

ನಿಂಬೆ ರಸ
ನಿಂಬೆರಸಗಳಿಂದ ಕೂಡ ಸಾಕಷ್ಟು ಪ್ರಯೋಜನಗಳಿವೆ, ಒಂದು ಲೋಟ ನೀರಿಗೆ ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಾಯಕಾರಿಯಾದೆ. ಅಷ್ಟೇ ಅಲ್ಲದೆ ರೋಗನಿರೋಧಕ ಶಕ್ತಿ ಹೆಚ್ಚಾಗುವಂತೆ ಮಾಡುತ್ತದೆ. ಎಣ್ಣೆಗೆ ಒಂದು ಹನಿ ನಿಂಬೆರಸವನ್ನು ಬೆರೆಸಿ ತಲೆಗೆ ಹಚ್ಚುವುದರಿಂದ ತಲೆಯ ಹೊಟ್ಟನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ:Good Mental Health : ನಿಮ್ಮ ಮಕ್ಕಳ ಮನಸ್ಸು ಅರಿತುಕೊಳ್ಳಿ; ಮಕ್ಕಳ ಮಾನಸಿಕ ವಿಕಸನದಲ್ಲಿ ಪೋಷಕರ ಪಾತ್ರ…

ಇದನ್ನೂ ಓದಿ:Caffeine Cause Acne : ಕೆಫಿನ್‌ ನಿಂದ ಮೊಡವೆ ಹೆಚ್ಚಾಗುತ್ತದೆಯೇ; ತಜ್ಞರು ಹೇಳುವುದಾದರೂ ಏನು….

ಇದನ್ನೂ ಓದಿ:weight gain :ದೇಹದ ತೂಕ ಹೆಚ್ಚಿಸಬೇಕೆ ? ಹಾಗಾದ್ರೆ ಇಲ್ಲಿದೆ ಆರೋಗ್ಯಕರ ಸಲಹೆ

ಜೇನುತುಪ್ಪ
ಜೇನುತುಪ್ಪಕ್ಕೆ ಕಾಳು ಮೆಣಸಿನ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ಕೆಮ್ಮು ಕಡಿಮೆಮಾಡುತ್ತದೆ. ಜೇನುತುಪ್ಪದಿಂದ ಮುಖದ ಮೇಲಿನ ಕಲೆಗಳನ್ನು ನಿವಾರಣೆ ಮಾಡಬಹುದು. ರಾತ್ರಿ ಮಲಗುವ ಮುನ್ನ ಮುಖದ ಕಲೆಗಳ ಮೇಲೆ ಹಚ್ಚಿ, ಮಾರನೆಯ ದಿನ ಮುಖವನ್ನು ತೊಳೆದರೆ ಕಾಲಕ್ರಮೇಣ ಮುಖದ ಕಲೆಯನ್ನು ಕಡಿಮೆ ಮಾಡಬಹುದು

If you do this while drinking water in the morning, your face will glow

Comments are closed.