Increase Immunity : ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮನೆಯಲ್ಲಿಯೇ ಇದೆ ಮದ್ದು

(Increase Immunity)ಕೆಲವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಬೇಗ ಕಾಯಿಲೆಗೆ ತುತ್ತಾಗುತ್ತಾರೆ. ಹವಾಮಾನದಲ್ಲಿ ಸ್ವಲ್ಪ ಬದಲಾವಣೆ ಆದರು ಕೂಡ ಬೇಗ ಹುಷಾರು ತಪ್ಪುತ್ತಾರೆ. ಇದರಿಂದ ದೇಹದಲ್ಲಿ ಇನ್ನು ಹೆಚ್ಚು ರೋಗ ನಿರೋಧಕ ಶಕ್ತಿ ಕುಂದುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಕ್ಕೆ ಇಲ್ಲಿದೆ ಸುಲಭ ಪರಿಹಾರ. ಇದರ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Increase Immunity : ಬೇಕಾಗುವ ಸಾಮಗ್ರಿಗಳು:

  • ಅರಿಶಿಣ
  • ಶುಂಠಿ ಪೌಡರ್
  • ದಾಲ್ಚಿನ್ನಿ ಪೌಡರ್
  • ಜೇನುತುಪ್ಪ

ಮಾಡುವ ವಿಧಾನ:
ಒಂದು ಬೌಲ್ ನಲ್ಲಿ ಕಾಲು ಚಮಚ ಅರಿಶಿಣ, ಅರ್ಧ ಚಮಚ ಶುಂಠಿ ಪೌಡರ್, ಒಂದು ಪಿಂಚ್ ದಾಲ್ಚಿನ್ನಿ ಪೌಡರ್, ಒಂದು ಚಮಚ ಜೇನುತುಪ್ಪವನ್ನು ಹಾಕಿ ಕಲಸಿಕೊಳ್ಳಬೇಕು. ಇದನ್ನು ಒಂದು ಡಬ್ಬಿಯಲ್ಲಿ ಶೇಖರಿಸಿ ಇಟ್ಟು ಕೊಳ್ಳಬೇಕು. ಪ್ರತಿನಿತ್ಯ ಒಂದು ಚಮಚ ಅಥವಾ ಇದನ್ನು ನೀರಿನೊಂದಿಗೆ ಬೆರೆಸಿ ಕುಡಿಯ ಬಹುದು. ಹೀಗೆ ಪ್ರತಿನಿತ್ಯ ಸೇವನೆ ಮಾಡುತ್ತಾ ಬಂದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ಶೀತ ಮತ್ತು ಕೆಮ್ಮನ್ನು ಗುಣಪಡಿಸುತ್ತದೆ.

ಅರಿಶಿಣ:
ಅರಿಶಿಣ ಅಡುಗೆಗೆ ಅಷ್ಟೇ ಸೀಮಿತವಾಗಿಲ್ಲ ಇದರಿಂದ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ಇದನ್ನು ಪ್ರಾಚೀನ ಕಾಲದಿಂದಲೂ ಕೂಡ ಬಳಸುತ್ತಾ ಬಂದಿದ್ದಾರೆ. ಆಯುರ್ವೇಧದಲ್ಲಿ ಇದಕ್ಕೆ ಪ್ರಮುಖ ಸ್ಥಾನವಿದೆ. ಅರಿಶಿಣದಲ್ಲಿ ನೈಸರ್ಗಿಕ ಅಂಶವಿರುವುದರಿಂದ ಇದನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಚರ್ಮದ ಹಲವು ಕಾಯಿಲೆಯನ್ನು ಗುಣಪಡಿಸುತ್ತದೆ. ಅರಿಶಿಣವನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ತೂಕವನ್ನು ಇಳಿಕೆ ಮಾಡುವುದಕ್ಕೂ ಕೂಡ ಸಹಕಾರಿಯಾಗಿದೆ.

ಇದನ್ನೂ ಓದಿ:Dark Circles :ಡಾರ್ಕ್ ಸರ್ಕಲ್ಸ್ ನಿಂದ ಮುಕ್ತಿ ಪಡೆಯಬೇಕಾ : ಹಾಗಾದ್ರೆ ಈ ಟಿಫ್ಸ್ ಫಾಲೋ ಮಾಡಿ

ಇದನ್ನೂ ಓದಿ:Gooseberry Health Tips:ಕಹಿ “ನೆಲ್ಲಿಕಾಯಿಯ” ಆರೋಗ್ಯಕ್ಕೆ ಸಂಜೀವಿನಿ

ಶುಂಠಿ ಪೌಡರ್:
ಪೊಶಕಾಂಶಗಳ ಉಗ್ರಾಣ ವಾಗಿರುವ ಶುಂಠಿಯಿಂದ ಹಲವು ಪ್ರಯೋಜನವಿದೆ. ನಮ್ಮ ಆಹಾರದಲ್ಲಿ ಶುಂಠಿಯ ಬಳಕೆಯನ್ನು ಅತಿ ಹೆಚ್ಚಾಗಿ ಮಾಡುತ್ತೇವೆ. ಇದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನ ವಿದೆ. ಶುಂಠಿ ಯನ್ನು ಸೇವನೆ ಮಾಡುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕೆಮ್ಮು ಮತ್ತು ಶೀತವಿದ್ದಾಗ ಶುಂಠಿಯಿಂದ ಮಾಡಿದ ಕಶಾಯ ಕುಡಿದರೆ ಕೆಮ್ಮು ಮತ್ತು ಶೀತವನ್ನು ಕಡಿಮೆ ಮಾಡುತ್ತದೆ.ಕರುಳಿನ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.

information about home remedy to increase immunity

Comments are closed.