ಬಾಯಲ್ಲಿ ನೀರು ತರಿಸುತ್ತೆ ಸಿಹಿ ಸಿಹಿ ಜಿಲೇಬಿ : ಮನೆಯಲ್ಲಿ ಒಮ್ಮೆ ಟ್ರೈಮಾಡಿ

ಸಿಹಿ ತಿಂಡಿಗಳೆಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ ? ಅದರಲ್ಲೂ ಜಿಲೇಬಿ ತನ್ನ ಆಕರ್ಷಕ ಹಳದಿ ಬಣ್ಣ ಮತ್ತು ಅದರಲ್ಲಿ ತೇಲುವ ಸಕ್ಕರೆ ಪಾಕದಿಂದ ಬಾಯಿಯ ರುಚಿಯನ್ನು ದುಪ್ಪಟ್ಟು ಹೆಚ್ಚಿಸುತ್ತದೆ. ಹೇಳಿ ಕೇಳಿ ಇವಾಗಂತು ಮನೆಮಂದಿಯೆಲ್ಲಾ ಮನೆಯಲ್ಲೇ ಇರ್ತ್ತೀವಿ ಊಟ ಆದಮೇಲೆ ಸಿಹಿ ತಿನ್ನಲು ಮನಸು ಬಯಸುತ್ತೆ.

ಸಿಹಿ ತಿಂಡಿ ಹೊರಗಡೆ ಸುಲಭದಲ್ಲಿ ಸಿಗುತ್ತೆ ಆದರು ಕೊರೋನಾದ ಭಯದಿಂದ ನಮ್ಮ ಆಸೆಯನ್ನು ತಡೆಡುಕೊಂಡು ಸುಮ್ಮನೇ ಇರಬೇಕಾದ ಸ್ಥಿತಿ. ನಿಮ್ಮ ಆಸೆಯನ್ನು ನೀವೆ ಪೂರೈಸಿ ಕೊಳ್ಳ ಬಹುದು . ಮನೆಯಲ್ಲೇ ಗರಿಗರಿಯಾದ ಜಿಲೇಬಿ ತಯಾರಿಸಬಹುದು ? ರೆಸಿಪಿ ಗೊತ್ತಿಲ್ವಾ ? ನಾವು ಹೇಳಿಕೊಡ್ತೀವಿ. ಬರೀ 20 ನಿಮಿಷಗಳಲ್ಲಿ ಜಿಲೇಬಿಯನ್ನು ತಯಾರಿಸಬಹುದು. ಬನ್ನಿ ಹೆಚ್ಚು ಸಮಯವನ್ನು ತೆಗೆದುಕೊಳ್ಳದೇ ರುಚಿಯಾದ ಕುರುಮ್ ಕುರುಮ್ ರುಚಿಯುಳ್ಳ ಬಿಸಿ ಬಿಸಿ ಜಿಲೇಬಿ ಸಿಹಿಯನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಬೇಕಾಗುವ ಸಾಮಗ್ರಿಗಳು : ಶುದ್ಧಿಕರಿಸಿದ ಮೈದಾ ಹಿಟ್ಟು (ರಿಫೈಂಡ್ ಫ್ಲೋರ್) – 1 ಕಪ್, ಮೊಸರು – 1/2 ಕಪ್, ಆರೆಂಜ್ ಫುಡ್ ಕಲರ್ – 1/4 ನೇ ಚಮಚ ಸಕ್ಕರೆ – 1 ಕಪ್, ನೀರು – 1 ಕಪ್ , ಕೇಸರಿ ದಳಗಳು – 5 ರಿಂದ 6 ರಾಬ್ರಿ ಮತ್ತು ಪಿಸ್ತಾ ಅಲಂಕಾರಕ್ಕಾಗಿ.

ಮಾಡುವ ವಿಧಾನ : ಮೊದಲಿಗೆ ದೊಡ್ಡ ಪಾತ್ರೆಯಲ್ಲಿ ರಿಫೈಂಡ್ ಫ್ಲೋರ್, ಆರೆಂಜ್ ಫುಡ್ ಕಲರ್ ಮತ್ತು ಸಾಕಷ್ಟು ನೀರನ್ನು ತೆಗೆದುಕೊಂಡು ಮೃದುವಾದ ನೀರು ನೀರಾಗಿರುವ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ. ಬೆಚ್ಚಗಿನ ಸ್ಥಳದಲ್ಲಿ ಇದನ್ನು 8 ರಿಂದ 9 ಗಂಟೆಗಳ ಕಾಲ ಇರಿಸಿ. ನಂತರ ನೀರಿನಲ್ಲಿ ಸಕ್ಕರೆ ಮತ್ತು ಕೇಸರಿ ದಳವನ್ನು ಕರಗಿಸಿಕೊಂಡು ಸಕ್ಕರೆ ದ್ರಾವಣವನ್ನು ಸಿದ್ಧಮಾಡಿ. ಆದಷ್ಟು ಉರಿ ಕಡಿಮೆಯಲ್ಲಿರಲಿ ನಂತರ ಉರಿಯನ್ನು ಜಾಸ್ತಿಮಾಡುತ್ತಾ ದ್ರಾವಣವನ್ನು ದಪ್ಪಗಾಗಿಸಿ

ನಂತರ ಜಲೇಬಿ ಬಟ್ಟೆಗೆ ಸ್ವಲ್ಪ ಹಿಟ್ಟನ್ನು ಹಾಕಿಕೊಳ್ಳಿ, ಮೂಲೆಗಳನ್ನು ಮಡಚಿ ಗಂಟುಕಟ್ಟಿಕೊಳ್ಳಿ ಆಮೇಲೆ ಎಣ್ಣೆ ಅಥವ ತುಪ್ಪದಲ್ಲಿ ವೃತ್ತಾಕಾರದ ಜಿಲೇಬಿಗಳನ್ನು ತಯಾರಿಸಿ. ಹೀಗೆ ತಾರಿಸಿದ ಜಿಲೇಬಿ ಚಿನ್ನದ ಬಣ್ಣಕ್ಕೆ ಬರುವವರೆಗೆ ಎಣ್ಣೆಯಲ್ಲಿ ಕರಿದುಕೊಳ್ಳಿ ನಂತರ ಅದನ್ನು ಸಕ್ಕರೆ ದ್ರಾವಣದಲ್ಲಿ 2-3 ನಿಮಿಷಗಳ ಕಾಲ ಅದ್ದಿ ತೆಗೆಯಿರಿ. ಸಕ್ಕರೆ ದ್ರಾವಣ ದಿಂದ ಅದನ್ನು ಹೊರತೆಗೆದು ತಟ್ಟೆಯಲ್ಲಿರಿಸಿ. ನಂತರ ರಾಬ್ರಿ ಅಥವಾ ಪಿಸ್ತಾದಿಂದ ಜಿಲೇಬಿಯನ್ನು ಅಲಂಕರಿಸಿ. ಇಷ್ಟು ಮಾಡಿದ್ರೇ ಸಾಕು ನೀವು ನಿಮ್ಮ ಮನೆಯಲ್ಲೇ ಕೂತು ಸಿಹಿಯಾದ ರುಚಿಕರವಾದ ಜಿಲೇಬಿಯನ್ನ ಸವೀಯ ಬಹುದು. ಒಮ್ಮೇ ಈ ಜಿಲೇಬಿಯನ್ನು ತಿಂದವರು ಮತ್ತೆ ಮತ್ತೆ ತಿನ್ನಲು ಇಚ್ಚಿಸುತ್ತಾರೆ. ಮಕ್ಕಳು ಕೂಡ ಇದನ್ನು ತುಂಬ ಇಷ್ಟಪಟ್ಟು ತಿನ್ನುತ್ತಾರೆ.

Comments are closed.