ಶೀಗೆಲ್ಲಾ ಅಟ್ಟಹಾಸಕ್ಕೆ ಕೇರಳ ನಡುಕ: ಸೋಂಕಿಗೆ ಮತ್ತೊಬ್ಬರು ಸಾವು, ದಿನೇ ದಿನೇ ಹೆಚ್ಚುತ್ತಿದೆ ಭೀತಿ!

ಪ್ರಸ್ತುತ ಶಿಗೆಲ್ಲಾ ಬ್ಯಾಕ್ಟೀರಿಯಾ ಸೋಂಕು ಸಾರ್ವಜನಿಕರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಇತ್ತೀಚಿನ ವರದಿಗಳ ಪ್ರಕಾರ, ಈ ಭೀಕರ ಸೋಂಕಿಗೆ ತುತ್ತಾಗಿ ಮತ್ತೊಬ್ಬರು ಸಾವನ್ನಪ್ಪಿದ್ದು, ಇವರೊಂದಿಗೆ ಏಳು ಹೊಸ ಶಿಗೆಲ್ಲಾ ಪ್ರಕರಣಗಳು ಪತ್ತೆಯಾಗಿವೆ

ಕೇರಳ ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಸ್ತುತ ಶಿಗೆಲ್ಲಾ ಬ್ಯಾಕ್ಟೀರಿಯಾ ಸೋಂಕು ಸಾರ್ವಜನಿಕರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಇತ್ತೀಚಿನ ವರದಿಗಳ ಪ್ರಕಾರ, ಈ ಭೀಕರ ಸೋಂಕಿಗೆ ತುತ್ತಾಗಿ ಮತ್ತೊಬ್ಬರು ಸಾವನ್ನಪ್ಪಿದ್ದು, ಇವರೊಂದಿಗೆ ಏಳು ಹೊಸ ಶಿಗೆಲ್ಲಾ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ಕಲುಷಿತ ನೀರು ಮತ್ತು ಆಹಾರದ ಮೂಲಕ ಹರಡುವ ಈ ಬ್ಯಾಕ್ಟೀರಿಯಾ ಸೋಂಕು ಪ್ರಸ್ತುತ ರಾಜ್ಯದ ಆರೋಗ್ಯ ರಕ್ಷಣಾ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಮಳೆಗಾಲದ ಆರಂಭದ ಅವಧಿಯಲ್ಲಿ ಇಂತಹ ಸಾಂಕ್ರಾಮಿಕ ರೋಗಗಳು ವೇಗವಾಗಿ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಕಲುಷಿತಗೊಂಡ ಕುಡಿಯುವ ನೀರು, ಸರಿಯಾಗಿ ಬೇಯಿಸದ ಆಹಾರ ಮತ್ತು ವೈಯಕ್ತಿಕ ನೈರ್ಮಲ್ಯದ ಕೊರತೆಯು ಈ ರೋಗದ ಹರಡುವಿಕೆಗೆ ಪ್ರಮುಖ ಕಾರಣಗಳಾಗಿವೆ. ನೆರೆರಾಜ್ಯದಲ್ಲಿ ಈ ಸೋಂಕು ಉಲ್ಬಣಗೊಳ್ಳುತ್ತಿರುವುದರಿಂದ, ಕರ್ನಾಟಕದ ಗಡಿ ಜಿಲ್ಲೆಗಳಲ್ಲೂ ಹೈ-ಅಲರ್ಟ್ ಘೋಷಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಹೊರಗಿನ ತೆರೆದಿಟ್ಟ ಆಹಾರ ಪದಾರ್ಥಗಳನ್ನು ಸೇವಿಸದಂತೆ ಹಾಗೂ ಕಡ್ಡಾಯವಾಗಿ ನೀರನ್ನು ಕಾಯಿಸಿ ಆರಿಸಿ ಕುಡಿಯುವಂತೆ ಆರೋಗ್ಯ ತಜ್ಞರು ಸೂಚಿಸಿದ್ದಾರೆ.

ಇದನ್ನೂ ಓದಿ : ಸಿಂಗಾಪುರದಲ್ಲಿ ಮತ್ತೆ ಕೋವಿಡ್ ಸೋಂಕು! ವಾರದಲ್ಲೇ 12,700 ಪ್ರಕರಣ

ಇನ್ನು ಶೀಗೆಲ್ಲಾ ಬ್ಯಾಕ್ಟೀರಿಯಾ ದೇಹವನ್ನು ಪ್ರವೇಶಿಸಿದ ಸಾಮಾನ್ಯ 1ರಿಂದ 3 ದಿನಗಳ ಒಳಗಾಗಿ, ರಕ್ರಮಿಶ್ರಿತ ಬೇದಿ ಕಾಣಿಸಿಕೊಳ್ಳುತ್ತದೆ. ಇದಾದ ಬಳಿಕ ಸಹಿಸಲು ಸಾಧ್ಯವಾಗದಷ್ಟು ಹೊಟ್ಟೆನೋವು ಕಂಡುಬರುತ್ತದೆ. ಸೋಂಕಿನ ತೀವ್ರತೆಯಿಂದ ಅತಿಯಾದ ಜ್ವರ ಆರಂಭಗೊಳ್ಳುತ್ತದೆ. ಆಹಾರ ಸೇವಿಸಲು ಸಾಧ್ಯವಾಗದಂತೆ ನಿರಂತರವಾಗಿ ವಾಂತಿ ಉಂಟಾಗಲೂಬಹುದು.ನಿರಂತರ ಭೇದಿಯಿಂದಾಗಿ ದೇಹದಲ್ಲಿನ ನೀರಿನಂಶ ಮತ್ತು ಲವಣಾಂಶಗಳು ಸಂಪೂರ್ಣವಾಗಿ ಕಡಿಮೆಯಾಗಿ ಸೋಂಕಿತರು ತೀವ್ರ ನಿಶ್ಯಕ್ತಿಗೆ ಒಳಗಾಗುತ್ತಾನೆ.ಹೀಗಾಗಿ ಈ ರೀತಿಯ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡುವಂತೆ ಆರೋಗ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

 

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories