ತೂಕ ಇಳಿಕೆಗೆ ರಾಮಬಾಣ ಜೇನುತುಪ್ಪ : ಸೇವಿಸುವ ಸರಿಯಾದ ವಿಧಾನ ತಿಳಿಯಿರಿ
ಜೇನುತುಪ್ಪದಲ್ಲಿರುವ ಜೀವಸತ್ವ ಮತ್ತು ಖನಿಜಗಳು ದೈನಂದಿನ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುತ್ತದೆ. ಅಷ್ಟೇ ಅಲ್ಲದೇ ಬಾಹ್ಯ ಸೋಂಕುಗಳಿಂದಲೂ ರಕ್ಷಿಸುತ್ತದೆ.
ಬಹಳ ಹಿಂದಿನ ಕಾಲದಿಂದಲೂ ಜೇನುತುಪ್ಪವು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಗುರುತಿಸಲ್ಪಟ್ಟಿದೆ. ಹಾಗಾಗಿ ನಮ್ಮ ಹಿರಿಯರು ದೈನಂದಿನ ಆಹಾರದಲ್ಲಿ ಒಂದಲ್ಲಾ ಒಂದು ರೂಪದಲ್ಲಿ ಅದನ್ನು ಸೇರಿಸಿಕೊಳ್ಳುತ್ತಿದ್ದರು. ಸಕ್ಕರೆಗೆ ಪರ್ಯಾಯವಾದ ಈ ನೈಸರ್ಗಿಕ ಸಿಹಿ ದೇಹಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿರುವ ಫೀನಾಲಿಕ್ ಸಂಯಕ್ತಗಳು ದೇಹವನ್ನು ಆಂತರಿಕವಾಗಿ ಬಲಪಡಿಸುತ್ತದೆ. ಜೇನುತುಪ್ಪದಲ್ಲಿರುವ ಜೀವಸತ್ವ ಮತ್ತು ಖನಿಜಗಳು ದೈನಂದಿನ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುತ್ತದೆ. ಅಷ್ಟೇ ಅಲ್ಲದೇ ಬಾಹ್ಯ ಸೋಂಕುಗಳಿಂದಲೂ ರಕ್ಷಿಸುತ್ತದೆ. ಇಂದಿನ ಬದಲಾಗುತ್ತಿರುವ ಜೀವನಶೈಲಿ ಮತ್ತು ಅನಿಯಮಿತ ಆಹಾರ ಪದ್ಧತಿ ಮುಂತಾದ ಬದಲಾವಣೆಗಳ ಈ ಸಮಯದಲ್ಲಿ ಜೇನುತುಪ್ಪ ಆರೋಗ್ಯ ಕಾಪಾಡಿಕೊಳ್ಳಲು ರಾಮಬಾಣದಂತಿದೆ. ಜೇನುತುಪ್ಪವನ್ನು ಸರಿಯಾದ ರೀತಿಯಲ್ಲಿ ಸೇವಿಸುವುದರಿಂದ ತೂಕ ಇಳಿಕೆಗೂ ಸಹಕಾರಿಯಾಗಿದೆ. ಇತ್ತೀಚಿನ ದಿನಗಳ ಬಹು ದೊಡ್ಡ ಸಮಸ್ಯೆಯಾದ ಬೊಜ್ಜು ನಿಯಂತ್ರಣ ಮತ್ತು ಬೊಜ್ಜು ಕರಗುವಿಕೆಗೂ ಜೇನುತುಪ್ಪ ಸಹಕಾರಿ. ಜೇನುತುಪ್ಪವನ್ನು ಹೇಗೆ ಸೇವಿಸುವುದರಿಂದ ತೂಕ ಇಳಿಸಿಕೊಳ್ಳಬಹುದು ಎಂದು ನೋಡೋಣ.
ತೂಕ ಇಳಿಕೆಗೆ ಜೇನುತುಪ್ಪ
ತೂಕ ಅಥವಾ ಕೊಬ್ಬು ಹೆಚ್ಚಾಗಿದೆಯೆಂದು ಅದನ್ನು ಇಳಿಸಿಕೊಳ್ಳಲೇಬೇಕು ಎಂಬ ನಿಟ್ಟಿನಿಂದ ಪ್ರಯತ್ನ ಪಡುತ್ತಿದ್ದರೆ ಜೇನುತುಪ್ಪವನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೇನುತುಪ್ಪವನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕ ಇಳಿಕೆಯನ್ನು ವೇಗಗೊಳಿಸುತ್ತದೆ.
ಇದನ್ನೂ ಓದಿ : ಮಾವು ತಿಂದರೆ ದಪ್ಪವಾಗುತ್ತೀರಾ? ತೂಕ ಹೆಚ್ಚಳ ಸಾಧ್ಯತೆ ಇದಿಯಾ? ತಜ್ಞರು ಹೇಳಿದ ನಿಜಾಂಶ!
ಜೇನುತುಪ್ಪ ಮತ್ತು ನಿಂಬೆ ರಸ
ತೂಕ ಇಳಿಸಿಕೊಳ್ಳಲು ಜೇನುತುಪ್ಪ ಮತ್ತು ನಿಂಬೆ ರಸ ಬಹಳ ಪ್ರಯೋಜನಕಾರಿಯಾಗಿದೆ. ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಟೀಚಮಚ ಜೇನುತುಪ್ಪ ಮತ್ತು ಅರ್ಧ ನಿಂಬೆಹಣ್ಣಿನ ರಸವನ್ನು ಬೆರೆಸಿ ಕುಡಿಯಿರಿ. ಈ ಪಾನೀಯವು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುವುದರ ಜೊತೆಗೆ ಕೊಬ್ಬನ್ನು ಕರಗಿಸುತ್ತದೆ.
ಜೇನುತುಪ್ಪ ಮತ್ತು ದಾಲ್ಚಿನ್ನಿ ಪುಡಿ
ಜೇನುತುಪ್ಪ ಮತ್ತು ದಾಲ್ಚಿನ್ನಿ ಎರಡೂ ದೇಹಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ತೂಕ ಇಳಿಸಿಕೊಳ್ಳಲು ಅವುಗಳಿಂದ ತಯಾರಿಸಿದ ಚಹಾವನ್ನು ಸೇವಿಸಬಹುದು. ಒಂದು ಕಪ್ ಗ್ರೀನ್‌ಟೀಗೆ ಒಂದು ಟೀ ಚಮಚ ಜೇನುತುಪ್ಪ ಮತ್ತು ಅರ್ಧ ಟೀ ಚಮಚ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ದೇಹಕ್ಕೆ ಶಕ್ತಿಯನ್ನು ಸಹ ಒದಗಿಸುತ್ತದೆ.



