Leaves to Lose Weight : ನಿಮಗಿದು ಗೊತ್ತಾ; ಈ ಎಲೆಗಳನ್ನು ಸೇವಿಸುವುದರಿಂದಲೂ ತೂಕ ಕಡಿಮೆ ಮಾಡಿಕೊಳ್ಳಬಹುದು

ಬೊಜ್ಜು (Obesity) ಒಂದು ಗಂಭೀರ ಸಮಸ್ಯೆ. ಅದು ನಿಮ್ಮ ಸೌಂದರ್ಯ (Beauty) ವನ್ನಷ್ಟೇ ಅಲ್ಲ, ಅನೇಕ ಆರೋಗ್ಯದ ಸಮಸ್ಯೆಗಳನ್ನು (Health problems) ತರುತ್ತದೆ. ಮಧುಮೇಹ, ಕ್ಯಾನ್ಸರ್‌, ಅಧಿಕ ರಕ್ತದೊತ್ತಡಗಳಂತಹ ಗಂಭೀರ ಮತ್ತು ದೀರ್ಘಕಾಲಿನ ರೋಗಗಳಿಗೆ ಎಡೆಮಾಡಿ ಕೊಡುತ್ತದೆ. ಬೊಜ್ಜಿನ ಸಮಸ್ಯೆ ಇರುವವರಿಗೆ ತೂಕ ಇಳಿಸುವುದು (Weight loss) ದೊಡ್ಡ ಸವಾಲಾಗಿದೆ. ತೂಕವನ್ನು ಹೇಗೆ ಇಳಿಸುವುದು ಎನ್ನುವುದೇ ಅವರ ಪ್ರಶ್ನೆ ಆಗಿರುತ್ತದೆ. ನಾವು ಬಹಳಷ್ಟು ಸಲ ನೋಡುತ್ತೇವೆ ಕೆಲವರು ತೂಕ ಇಳಿಸಲು ಹರಸಾಹಸ ಪಡುತ್ತಿರುತ್ತಾರೆ. ಕಠಿಣ ವ್ಯಾಯಾಮಗಳು, ಕ್ಯಾಲೋರಿಯಲ್ಲಿ ಕಡಿತ, ಡಯಟ್‌ ಇವೆಲ್ಲವುಗಳನ್ನು ಮಾಡಿಯು ಪರಿಣಾಮ ಮಾತ್ರ ಶೂನ್ಯ ಎನ್ನುವವರು ಇದ್ದಾರೆ. ನೀವು ಅಂತಹವರಲ್ಲಿ ಒಬ್ಬರಾಗಿದ್ದರೆ ತೂಕ ಇಳಿಸಲು ಈ ಮನೆಮದ್ದನ್ನು (Leaves to lose weight) ಬಳಸಿ.

ಪಟಿಯಾಲದ ಮಣಿಪಾಲ್‌ ಆಸ್ಪತ್ರೆಯ ಡಾ. ಭಾವನಾ ಶರ್ಮಾ ಹೇಳುವಂತೆ, ನಿಮ್ಮ ಸುತ್ತಲಿನಲ್ಲಿರುವ ಕೆಲವು ಎಲೆಗಳು ತೂಕ ಇಳಿಕೆಯಲ್ಲಿ ನಿಮಗೆ ಸಹಾಯಮಾಡಬಲ್ಲದು. ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಕೆಲವು ಎಲೆಗಳಲ್ಲಿರುವ ಅದ್ಭುತ ಗುಣಗಳು ತೂಕ ಇಳಿಕೆಯ ಮಾರ್ಗದಲ್ಲಿ ಸಹಾಯ ಮಾಡುತ್ತವೆ.

ಪಾಲಕ್‌ :
ಪಾಲಕ್‌ ಒಂದು ಆರೋಗ್ಯಕ್ಕೆ ಉತ್ತಮವಾದ ಹಸಿರು ತರಕಾರಿ. ಇದು ಐರನ್‌ ಮತ್ತು ಫೈಬರ್‌ಗಳ ಆಗರ. ಪಾಲಕ್‌ನಿಂದ ಅನೇಕ ಆರೋಗ್ಯ ಪ್ರಯೋಜಗಳಿವೆ. ಇದು ಹೃದಯ, ಕಣ್ಣು, ಕೂದಲು ಮತ್ತು ಮೂಳೆಗಳ ಆರೋಗ್ಯ ಸುಧಾರಿಸುತ್ತದೆ. ಒಂದು ಕಪ್‌ ಪಾಲಕ್‌ ಸೊಪ್ಪ ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ತೂಕವನ್ನು ಇಳಿಸಿಕೊಳ್ಳಬಹುದು. ಇದರಲ್ಲಿರುವ ಕಡಿಮೆ ಕೊಬ್ಬು ಮತ್ತು ಕೊಲೆಸ್ಟ್ರಾಲ್‌ ತೂಕ ಇಳಿಸಲು ನಿಮಗೆ ಸಹಾಯ ಮಾಡುವುದು.

ತುಳಸಿ :
ಭಾರತೀಯರು ತುಳಸಿಯನ್ನು ಪ್ರವಿತ್ರ ಎಂದು ಪರಿಗಣಿಸುತ್ತಾರೆ. ಪ್ರತಿ ಮನೆಗಳಲ್ಲಿಯೂ ಕಾಣಸಿಗುವ ತುಳಸಿಯಿಂದ ಅನೇಕ ಅದ್ಭುತ ಆರೋಗ್ಯ ಪ್ರಯೋಜನಗಳಿವೆ. ಪ್ರತಿದಿನ ಬೆಳಿಗ್ಗೆ 5 ರಿಂದ 6 ಎಲೆಗಳನ್ನು ನೀರಿನಲ್ಲಿ ಕುದಿಸಿ ಅಥವಾ ಹಾಗೆಯೇ ಅಗಿದು ತಿನ್ನುವುದರಿಂದ ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೆಗೆದು ಹಾಕುತ್ತದೆ. ಇದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗಿ ಕ್ಯಾಲೋರಿಗಳನ್ನು ಸುಲಭವಾಗಿ ಕರಗಿಸುತ್ತದೆ. ತುಳಸಿಯ ಎಲೆಗಳನ್ನು ಬೆಳಗಿನ ಚಹಾದಲ್ಲಿ ಸೇರಿಸಿಯೂ ಕುಡಿಯಬಹುದು.

ಕೊತ್ತಂಬರಿ ಸೊಪ್ಪು :
ಇದು ನಮ್ಮ ಅಡುಗೆಯಲ್ಲಿ ಪ್ರಮುಖವಾಗಿ ಉಪಯೋಗಿಸುವ ಸೊಪ್ಪಾಗಿದೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಅನೇಕ ಜೀವಸತ್ವಗಳನ್ನು ದೇಹಕ್ಕೆ ಪೂರೈಸುತ್ತವೆ. ಇದು ಚಯಾಪಚಯ ಕ್ರಿಯೆ ಹೆಚ್ಚಿಸಿ, ತೂಕ ನಿಯಂತ್ರಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಇದು ಫೋಲಿಕ್‌ ಆಮ್ಲ, ಮೆಗ್ನಿಸಿಯಂ ಮತ್ತು ವಿಟಮಿನ್‌ ಬಿ ಸಮೃದ್ಧವಾಗಿದೆ. ಇದರಲ್ಲಿರುವ ಕ್ವುರ್ಸೆಟಿನ್‌ ಎಂಬ ವಸ್ತುವು ತೂಕ ಇಳಿಸಲು ಬಹಳ ಪರಿಣಾಮಕಾರಿಯಾಗಿದೆ. ಕೊತ್ತಂಬರಿ ಸೊಪ್ಪ ಅನ್ನು ದಿನನಿತ್ಯದ ಹಸಿರು ಚಟ್ನಿ ರೂಪದಲ್ಲಿ ಸೇವಿಸಿಬಹುದು.

ಕರಿಬೇವಿನ ಎಲೆಗಳು :
ದಕ್ಷಿಣ ಭಾರತದ ಅಡುಗೆಗಳಲ್ಲಿ ಹೆಚ್ಚಾಗಿ ಬಳಸುವ ಕರಿಬೇವು ತೂಕ ಇಳಿಸಲು ಬಹಳ ಸಹಾಯಕವಾಗಿದೆ. ಕರಿಬೇವಿನ ಸೊಪ್ಪಿನಲ್ಲಿರುವ ಸಸ್ಯಾಧಾರಿತ ಅಲ್ಕಲಾಯ್ಡ್‌ ಗಳು ಬೊಜ್ಜು ಮತ್ತು ಲಿಪಿಡ್‌ ಕಡಿಮೆ ಮಾಡುವ ಗುಣ ಹೊಂದಿದೆ. ಇದು ದೇಹವನ್ನು ಶುದ್ಧೀಕರಿಸುತ್ತದೆ. ಮಧುಮೇಹ ತಡೆಯಲು ಉತ್ತಮವಾಗಿದೆ. ಕರಿಬೇವಿನ ಎಲೆಯನ್ನು ಅಡುಗೆಗಳಲ್ಲಿ ಉಪಯೋಗಿಸುವುದರಿಂದ ತೂಕ ಇಳಿಸಿಕೊಳ್ಳಬಹುದಾಗಿದೆ.

ಬೇವಿನ ಎಲೆಗಳು :
ಬೇವಿನ ಎಲೆಯ ರಸವು ವಿವಿಧ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಬೇವಿನ ರಸವನ್ನು ನಿಯಮಿತವಾಗಿ ಕುಡಿಯುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಾಜಿಸಿ, ಹೊಟ್ಟೆಯನ್ನು ಸ್ವಚ್ಛವಾಗಿರಿಸುತ್ತದೆ. ಇದು ದೇಹದ ಕೊಬ್ಬನ್ನು ನಿಯಂತ್ರಿಸುತ್ತದೆ.

ಇದನ್ನೂ ಓದಿ : Capsicum Benefits : ಕ್ಯಾಪ್ಸಿಕಮ್‌ನ ಈ ಪ್ರಯೋಜನಗಳು ಗೊತ್ತಾದ್ರೆ ನೀವು ಅದನ್ನು ತಿನ್ನದೇ ಇರಲು ಸಾಧ್ಯನೇ ಇಲ್ಲ

ಇದನ್ನೂ ಓದಿ : Hop OXO : ಭಾರತದಲ್ಲಿ ಬಿಡುಗಡೆಯಾದ ಹಾಪ್‌OXO ಎಲೆಕ್ಟ್ರಿಕಲ್‌ ಮೋಟಾರ್‌ಸೈಕಲ್‌ : ಫುಲ್‌ ಚಾರ್ಜ್‌ ಮಾಡಲು ಸಾಕು ಕೇವಲ 4 ಗಂಟೆ

(Leaves to Lose Weight add these 5 types of leaves to lose weight)

Comments are closed.