Morning Habits: ಮುಂಜಾನೆಯ ಈ ಹವ್ಯಾಸಗಳು ನಿಮ್ಮ ಇಡೀ ದಿನವನ್ನು ಸುಖವಾಗಿರಿಸಬಹುದು!

ಜನವರಿ ತಿಂಗಳಲ್ಲಿ ಬಹುತೇಕರು ಹೊಸ ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಆಸೆ ಹೊಂದಿರುತ್ತಾರೆ. ಅದರಲ್ಲಿ ಮುಖ್ಯವಾದದ್ದು ಆರೋಗ್ಯಕರ ಲೈಫ್ ಸ್ಟೈಲ್ ಹೊಂದುವುದಾಗಿದೆ. ಈ ಕೊರೊನ ಬಂದ ಮೇಲಂತೂ ಬಹಳಷ್ಟು ಜನರು ಖಿನ್ನತೆಗೆ ಒಳಗಾಗಿದ್ದಾರೆ. ಇದರಿಂದ ಹೊರ ಬರಲು, ಉತ್ತಮ ಮುಂಜಾನೆಯ ಹವ್ಯಾಸ (Morning Habits) ಪ್ರಾರಂಭಿಸಬೇಕು. ಸಾಧ್ಯವಾದಷ್ಟು ಧನಾತ್ಮಕವಾಗಿ ಆಗಿ ದಿನವನ್ನು ಪ್ರಾರಂಭಿಸಿ. ಉತ್ತಮ ಸಂಗೀತ, ಆಹಾರವನ್ನು ದಿನಚರಿಯಲ್ಲಿ ಸೇರಿಸಿ. ಮಾನಸಿಕ ಆರೋಗ್ಯ ತಜ್ಞರ ಪ್ರಕಾರ ಈ 10 ಹವ್ಯಾಸಗಳನ್ನು ಬೆಳೆಸಿ, ಉತ್ತಮ ಲೈಫ್ ಸ್ಟೈಲ್ ಹೊಂದಬಹುದು.

  1. ನೀವು ಯಾವುದಕ್ಕೆ ಕೃತಜ್ಞರಾಗಿದ್ದೀರೋ ಅದರ ಕುರಿತು ಬರೆದಿಡಿ.
    ಇದು ಯಾವುದರ ಬಗ್ಗೆಯೂ ಆಗಿರಬಹುದು. ಕೆಲವೊಮ್ಮೆ ನೀವು ಅನುಭವಿಸಿದ ಒಳ್ಳೆಯ ನಿದ್ರೆಗಾಗಿ, ನಿಮ್ಮಿಷ್ಟದ ಹಾಡು, ಉತ್ತಮ ವಾತಾವರಣ ಈಗಷ್ಟೇ ಓದಿದ ಪುಸ್ತಕಕ್ಕಾಗಿ ಕೃತಜ್ಞತೆ ಸಲ್ಲಿಸಿ.
    ಹೀಗೆ ಬರೆದಿಡುವುದರಿಂದ ಮನಸ್ಸು ಖುಷಿಯಾಗುತ್ತದೆ.
  2. ನೀರು ಕುಡಿಯಿರಿ
    ಬೆಳಗ್ಗೆ ಎದ್ದ ತಕ್ಷಣ 1-2 ಗ್ಲಾಸ್ ನೀರು ಕುಡಿಯಿರಿ. ಮಲಗಿದಾಗ ದೇಹವು ಡಿ ಹೈಡ್ರೇಟ್ ಆಗಿರುತ್ತದೆ. ಇದು ಹಲವು ಸಮಸ್ಯೆಗಳಿಗೆ ಕಾರಣ ಆಗಬಹುದು. ಹಾಗಾಗಿ ಸಾಧ್ಯವಾದಷ್ಟು ನೀರು ಕುಡಿಯಿರಿ. ಇದು ದೇಹದಲ್ಲಿರುವ ಕೊಬ್ಬಿನ ಅಂಶ ಕಡಿಮೆ ಮಾಡಲು ಸಹಕಾರಿ.
  3. ಧ್ಯಾನ ಮಾಡಿ.
    ಮುಂಜಾನೆಯ 10 ನಿಮಿಷ ಧ್ಯಾನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಇದು ಸ್ಟ್ರೆಸ್, ಡಿಪ್ರೆಷನ್ ಕಡಿಮೆ ಮಾಡಿ ಪಾಸಿಟಿವ್ ಆಗಿರುವಂತೆ ಮಾಡುತ್ತದೆ.
  4. ಬೆಡ್ ಸರಿಯಾಗಿ ಜೋಡಿಸಿ
    ಎದ್ದ ಕೂಡಲೇ ಮಲಗಿದಂತಹ ಬೆಡ್ ಜೋಡಿಸಿಡುವುದು, ಒಂದು ಉತ್ತಮ ಹವ್ಯಾಸ ಆಗಿದೆ. ಇದು ನಮ್ಮನ್ನು ಖುಷಿ ಹಾಗೂ ಪಾಸಿಟಿವ್ ಆಗಿರುವಂತೆ ಮಾಡುತ್ತದೆ.
  5. ಬಿಸಿಲಿಗೆ ಮೈಯೊಡ್ಡಿ
    ಬೆಳಗ್ಗೆ 10 ಗಂಟೆ ಮೊದಲಿನ ಬಿಸಿಲು ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಬಿಸಿಲಿಗೆ ವಾಕಿಂಗ್ ಮಾಡುವುದು ಒಳ್ಳೆಯದು. ಇದು ಪ್ರಕೃತಿ ದತ್ತವಾಗಿ ವಿಟಮಿನ್ ಡಿ ನೀಡುತ್ತದೆ.
  6. ಸಣ್ಣ ಪುಟ್ಟ ವ್ಯಾಯಾಮ ಮಾಡಿ
    ಸ್ಟ್ರೇಚಿಂಗ್ ನಂತಹ ಸಣ್ಣ ಸಣ್ಣ 10 ನಿಮಿಷಗಳ ವ್ಯಾಯಾಮ ಮಾಡಿ. ಇದು ಖಿನ್ನತೆ ಹಾಗೂ ಇತರ ಮಾನಸಿಕ ನೆಮ್ಮದಿಗೆ ಅತೀ ಒಳ್ಳೆಯದು.
  7. ಸ್ಟ್ರೇಚಿಂಗ್
    ಕೈ, ಕಾಲು, ಕುತ್ತಿಗೆ ಸ್ಟ್ರೆಚ್ ಮಾಡುವುದರಿಂದ ಕೆಲವು ನೋವುಗಳನ್ನು ಕಡಿಮೆ ಮಾಡಬಹುದು.
  8. ವಾಕ್ ಮಾಡಿ
    ಬೆಳಗಿನ ಉಪಹಾರದ ಮೊದಲು ವಾಕಿಂಗ್ ಮಾಡಿ. ಇದು ಹಸಿವನ್ನು ಹೆಚ್ಚಿಸುತ್ತದೆ. ಹಾಗೆಯೇ, ಮನಸ್ಸು ಉಲ್ಲಾಸದಿಂದ ಇರುವಂತೆ ಮಾಡುತ್ತದೆ.
  9. ನಿಮ್ಮ ಇಷ್ಟದ ಕೆಲಸವನ್ನು ಮಾಡಿ
    ಉತ್ತಮ ಹಾಡು, ಪಾಡ್ ಕಾಸ್ಟ್ ಕೇಳುವುದು, ಅಥವಾ ಯಾವುದಾದರೂ ಕಾರ್ಯಕ್ರಮ ನೋಡುವುದು, ಪುಸ್ತಕ ಓದುವುದು ಇಲ್ಲವೇ ಗಾರ್ಡನಿಂಗ್ ಹೀಗೆ ನೀವು ಇಷ್ಟಪಡುವ ಕೆಲಸ ಮಾಡಿ.
  10. ಉತ್ತಮ ರೀತಿಯಲ್ಲಿ ಡ್ರೆಸ್ ಮಾಡಿ
    ನಿಮಗೆ ಇಷ್ಟವಿರುವ ಹಾಗೂ ಕಂಫರ್ಟಬಲ್ ಅನಿಸುವ ಬಟ್ಟೆ ಧರಿಸಿ. ಇದು ಆತ್ಮವಿಶ್ವಾಸ ಹೆಚ್ಚಿಸುತ್ತದೆ.

    ಇದನ್ನೂ ಓದಿ: Millets Health Benefits: ರಾಗಿ ತಿಂದವ ನಿರೋಗಿ; ಮಕ್ಕಳ ಬೆಳವಣಿಗೆಗೆ ರಾಗಿ ಹೆಚ್ಚು ಪ್ರಯೋಜನಕಾರಿ ಎಂದ ಅಧ್ಯಯನ

    (Morning habits can lead your day recomonded by doctors)

Comments are closed.