Mosquito-Free Tips : ಈ ಮಳೆಗಾಲದಲ್ಲಿ ನಿಮ್ಮ ಮನೆಯನ್ನು ಸೊಳ್ಳೆಗಳಿಂದ ನೈಸರ್ಗಿಕವಾಗಿ ರಕ್ಷಿಸುವುದು ಹೇಗೆ ಗೊತ್ತಾ?

ಬಿಸಿಲಿನಿಂದ ದಣಿದ ದೇಹಗಳಿಗೆ ಮಳೆಗಾಲ(Monsoon) ಆರಾಮವನ್ನು ನೀಡುತ್ತದೆ. ಆದರೆ ಅದರ ಜೊತೆಗೆ ಸೊಳ್ಳೆ(Mosquito)ಗಳಿಂದ ಹರಡುವ ಅನೇಕ ರೋಗಗಳನ್ನು ತರುತ್ತದೆ. ಸೊಳ್ಳೆಗಳಿಂದ ರಕ್ಷಣೆ(Mosquito-Free Tips) ಪಡೆಯಲು ಮಾರುಕಟ್ಟೆಯಲ್ಲಿ ಹಲವಾರು ಸೊಳ್ಳೆಬತ್ತಿಗಳು, ಸ್ಪ್ರೇಗಳು, ರಾಸಾಯನಿಕ ದ್ರವಗಳು ಸಿಗುತ್ತವೆ. ಆದರೆ ಅವುಗಳ ಅತಿಯಾದ ಬಳಕೆಯಿಂದ ದೇಹಕ್ಕೆ ಹಾನಿಯುಂಟಾಗುತ್ತದೆ. ಉಸಿರಾಟದ ಸಮಸ್ಯೆಗಳು ತಲೆದೂರುತ್ತವೆ. ಇದಲ್ಲದೆ, ಕೆಲವರಿಗೆ ಸೊಳ್ಳೆ ಕಚ್ಚುವುದರಿಂದ ತ್ವಚೆಯ ತೊಂದರೆಗಳು ಎದುರಾಗುತ್ತವೆ. ಇಷ್ಟೆಲ್ಲಾ ತೊಂದರೆಗಳು ಇದ್ದರೂ, ಸರಿಯಾಗಿ ಸ್ವಚ್ಛತೆ ಮತ್ತು ರಕ್ಷಣೆ ಮಾಡುವುದಾದರೂ ಹೇಗೆ ಎಂದು ತಿಳಿದಿಲ್ಲ.

ನಿಮ್ಮ ಮನೆಯನ್ನು ಸೊಳ್ಳೆಗಳಿಂದ ನೈಸರ್ಗಿಕವಾಗಿ ರಕ್ಷಿಸಲು, ಸ್ವಚ್ಛ ಮತ್ತು ಸೋಂಕು ರಹಿತಗೊಳಿಸಲು ಕೆಲವು ಸುಲಭ ಉಪಾಯಗಳಿವೆ. ಇಲ್ಲಿ ಹೇಳಿರುವ ಕೆಲವು ಟಿಪ್ಸ್‌ ಮತ್ತು ಟ್ರಿಕ್ಸ್‌ಗಳು ನಿಮಗೆ ಬಹಳ ಸಹಾಯವಾಗಬಲ್ಲದು.

ಸೊಳ್ಳೆ ನಿವಾರಕ ಸಸ್ಯಗಳನ್ನು ಬೆಳೆಸಿ :

ಸೊಳ್ಳೆಗಳ ಸಂತಾನ್ಪೋತ್ತಿಯನ್ನು ತಡೆಗಟ್ಟಲು ನೈಸರ್ಗಿಕ ಮತ್ತು ಪರಿಣಾಮಕಾರಿ ಮಾರ್ಗವೆಂದರೆ ಔಷಧೀಯ ಸಸ್ಯಗಳನ್ನು ಮನೆಯಲ್ಲಿ ಬೆಳೆಸುವುದು. ತುಳಸಿಯಂತಹ ಗಿಡಮೂಲಿಕೆಗಳು ಕೀಟಗಳಿಗೆ ವಿಷಕಾರಿಯಾಗಿದೆ. ಮತ್ತು ಅದರ ಎಲೆಗಳು ಸೊಳ್ಳೆಗಳನ್ನು ಸಹ ಕೊಲ್ಲುತ್ತದೆ. ಪೂರ್ಣ ಪ್ರಮಾಣದಲ್ಲಿ ಇದರ ಲಾಭ ಪಡೆಯಬೇಕೆಂದರೆ ಮನೆಯ ಮುಂದೆ ಅಥವಾ ಕಿಟಕಿಗಳ ಬಳಿ ತುಳಸಿ ಗಿಡ ಇಡಬಹುದು. ಇದರ ಎಲೆಗಳ ಪುಡಿಯನ್ನು ನೈಸರ್ಗಿಕ ನಿವಾರಕವಾಗಿ ಬಳಸಬಹುದು. ಸೊಳ್ಳೆಗಳಿಂದ ರಕ್ಷಣೆ ಪಡೆಯುವ ಸಲುವಾಗಿ ಮನೆಯ ಸುತ್ತ ಅಥವಾ ಒಳಗಡೆ ಸಿಟ್ರೊನೆಲ್ಲಾ, ಲೆಮನ್‌ಗ್ರಾಸ್‌, ರೋಸ್ಮರಿ ಮತ್ತು ಲ್ಯಾವೆಂಡರ್‌ ಸಸ್ಯಗಳನ್ನು ಬೆಳೆಸಬಹುದು.

ಕರ್ಪೂರವನ್ನು ಉಪಯೋಗಿಸಿ :
ಮನೆಯಲ್ಲು ಸೊಳ್ಳೆಗಳನ್ನು ಹೋಗಲಾಡಿಸಲು ಹಳೆಯ ಸಾಂಪ್ರದಾಯಿಕ ರೀತಿ ಎಂದರೆ ಕರ್ಪೂರ ಉಪಯೋಗಿಸುವುದು. ಇದು ಸೊಳ್ಳೆಗಳನ್ನು ಪರಿಣಾಮಕಾರಿಯಾಗಿ ದೂರಮಾಡುವುದು. ಕರ್ಪೂರದಲ್ಲಿ ಬಳಸುವು ವಿವಿಧ ಗಿಡಮೂಲಿಕೆಗಳು ಬಹಳ ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ಸೊಳ್ಳೆಗಳ ಕಾಟದಿಂದ ರಕ್ಷಣೆ ಒದಗಿಸುವುದು. ಇದನ್ನು ಬಳಸುವ ವಿಧಾನವೆಂದರೆ ಒಂದು ಮಡಿಕೆಯಲ್ಲಿ ಕರ್ಪೂರವನ್ನು ಹಚ್ಚಿ 30 ನಿಮಿಷಗಳ ಕಾಲ ಬಾಗಿಲು ಮುಚ್ಚಿ ಕೋಣೆಯಲ್ಲಿ ಇರಿಸಿ. ಮತ್ತೊಂದು ವಿಧಾನವೆಂದರೆ, ಒಂದು ನೀರಿನ ಬಟ್ಟಲಿನಲ್ಲಿ ಕರ್ಪೂರವನ್ನು ಹಾಕಿ ಇಡಬಹುದು. ಇದೂ ಕೂಡ ಉತ್ತಮ ಪರಿಣಾಮ ಬೀರುವುದು.

ಎಸ್ಸೆನ್ಶಿಯಲ್‌ ಎಣ್ಣೆಗಳ ಪ್ರಯೋಗ:
ಕೆಲವು ಪರಿಮಳಗಳಿಂದ ಸೊಳ್ಳೆಗಳು ಓಡಿಹೋಗುತ್ತವೆ. ಅಂತಹ ಪರಿಮಳಭರಿತ ಎಸ್ಸೆನ್ಶಿಯಲ್‌ ಎಣ್ಣೆಗಳೆಂದರೆ ಲ್ಯಾವೆಂಡರ್‌ ಮತ್ತು ಟೀ ಟ್ರೀ ಆಯಲ್‌ಗಳು. ಮಳೆಗಾಲದಲ್ಲಿ ಹೊರಬರುವು ಇತರ ಕೀಟಗಳಿಗೂ ಉತ್ತಮ ಚಿಕಿತ್ಸೆಯಾಗಿದೆ. ನೀವು ಒಳಾಂಗಣ ಸಸ್ಯಗಳನ್ನು ಬೆಳೆಸಿದ್ದರೆ ಅದರ ಸುತ್ತ ಈ ಎಸ್ಸೆನ್ಶಿಯಲ್‌ ಎಣ್ಣೆಗಳನ್ನು ಸಿಂಪಡಿಸಿ. ಸೊಳ್ಳೆಗಳ ಕಡಿತವನ್ನು ತಪ್ಪಿಸಿಕೊಳ್ಳಲು ಇವುಗಳನ್ನು ನಿಮ್ಮ ದೇಹಕ್ಕೂ ಅನ್ವಯಿಸಬಹುದು.

ಮನೆಯ ಸುತ್ತ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ :
ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ ಎಂದು ಹೇಳುತ್ತಾರೆ. ಅದಕ್ಕಾಗಿ ಸರಿಯಾದ ನೈರ್ಮಲ್ಯ ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳುವುದರ ಮೂಲಕ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು. ನಿಮ್ಮ ತೋಟದಲ್ಲಿ ಅಥವಾ ಬಾಲ್ಕನಿಯಲ್ಲಿ ಇರುವ ಕುಂಡದಲ್ಲಿ ಶೇಖರಣೆಗೊಂಡ ನೀರನ್ನು ಸ್ವಚ್ಛಗೊಳಿಸಿ. ಉತ್ತಮ ಒಳಚರಂಡಿಗಳನ್ನು ನಿರ್ಮಿಸಿಕೊಳ್ಳಿ. ಏಕೆಂದರೆ ಸಂಗ್ರಹವಾದ ನೀರು ಸೊಳ್ಳೆಗಳ ಸಂತಾನೋತ್ಪತ್ತಿಯ ನೆಚ್ಚಿನ ಸ್ಥಳವಾಗಿದೆ.

ಇದನ್ನೂ ಓದಿ : Indoor Plants : ಮನೆಯ ಒಳಗೆ ಗಿಡ ಬೆಳೆಸಿ; ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ!!

ಇದನ್ನೂ ಓದಿ : Air Fryer Cleaning: ನೀವು ಏರ್‌ ಫ್ರೈಯರ್ ಸ್ವಚ್ಛಗೊಳಿಸಲು ಕಷ್ಟಪಡುತ್ತಿದ್ದೀರಾ? ಹಾಗಾದರೆ ಈ ಟಿಪ್ಸ್‌ ಅನುಸರಿಸಿ!!

(Mosquito-Free Tips to keep your home mosquito-free in a natural way)

Comments are closed.