Mouth Ulcer : ಬಾಯಿ ಹುಣ್ಣಿನಿಂದ ನೋವು ಅನುಭವಿಸುತ್ತಿದ್ದೀರಾ? ಈ ಮನೆಮದ್ದುಗಳನ್ನು ಒಮ್ಮೆ ಟ್ರೈ ಮಾಡಿ!!

ಬಾಯಿ ಹುಣ್ಣು (Mouth Ulcer) ನಾವೆಲ್ಲರೂ ಸಾಮಾನ್ಯವಾಗಿ ಎದುರಿಸುವ ಸಮಸ್ಯೆಯಾಗಿದೆ. ಬಾಯಿಯ ಒಳಗಿನ ಹೊರಪದರದಲ್ಲಿ ಕಾಣಿಸುವು ಹುಣ್ಣು ಇದಾಗಿದೆ. ದುಂಡಾಗಿರುವ ಅಥವಾ ಮೊಟ್ಟೆಯಾಕಾರದ ಅತಿ ನೋವಿನ ಹುಣ್ಣು ಇದು. ಬಿಳಿ, ಕೆಂಪು, ಹಳದಿ ಅಥವಾ ಬೂದು ಬಣ್ಣದಿಂದ ಕೂಡಿದ ಮತ್ತು ಸಾಮಾನ್ಯವಾಗಿ ಉಬ್ಬಿರುತ್ತದೆ. ಇದಕ್ಕೆ ಕಾರಣಗಳು ಹಲವು. ಗಾಯ, ಖಾರದ ಆಹಾರಗಳು, ಎಸಿಡಿಟಿ, ವಿಟಮಿನ್‌ ಕೊರತೆ, ಅಥವಾ ಜೋರಾಗಿ ಹಲ್ಲುಗಳನ್ನು ಬ್ರೆಷ್‌ ಮಾಡುವುದು ಇವೇ ಮೊದಲಾದವುದಗಳು. ಇದು ಕಡಿಮೆಯಾಗಲು ಬಹಳ ಸಮಯ ತೆಗೆದುಕೊಳ್ಳುವುದು. ಕೆಲವು ಒಳ್ಳೆಯ ಮನೆಮದ್ದುಗಳು ಕೂಡಾ ಉತ್ತಮ ಫಲಿತಾಂಶವನ್ನು ನೀಡುವುದು.

ಇಲ್ಲಿ ಬಾಯಿ ಹುಣ್ಣಿಗೆ (Mouth Ulcer) ಕೆಲವು ಮನೆಮದ್ದುಗಳನ್ನು ಹೇಳುತ್ತಿದ್ದೇವೆ. ನೀವೂ ಅದನ್ನು ಟ್ರೈ ಮಾಡಿ.

  • ಅಲಮ್‌ (ಪಟಕ) :
    ಇದು ಮನೆಬಳಕೆಯ ವಸ್ತು. ಇದನ್ನು ಬಾಯಿಹುಣ್ಣುವಿಗೆ ಉಪಯೋಗಿಸಬಹುದು. ಅಲಮ್‌ ಆಂಟಿಬ್ಯಾಕ್ಟೀರಿಯಲ್‌ ಮತ್ತು ಆಂಟಿಇನ್‌ಫ್ಲಮೆಟರಿ ಗುಣ ಹೊಂದಿದ್ದು, ಬಾಯಿ ಹುಣ್ಣಿಗೆ ಪ್ರಯೋಜನಕಾರಿಯಾಗಿದೆ. ಒಂದು ಚಿಟಿಕೆ ಅಲಮ್‌ ಅನ್ನು ನೀರಿನಲ್ಲಿ ಕರಗಿಸಿ. ಆ ನೀರನಿಂದ ಕೆಲವು ನಿಮಿಷಗಳವರೆಗೆ ಗಾರ್ಗಲ್‌ ಮಾಡಿ. ನಂತರ ಸಾದಾ ನೀರಿನಿಂದ ಬಾಯಿ ತೊಳೆದುಕೊಳ್ಳಿ.
  • ಜೇನುತುಪ್ಪ :
    ಇದು ಬಾಯಿ ಹುಣ್ಣು ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತದೆ. ಇದರಲ್ಲಿಯ ಆಂಟಿಇನ್‌ಫ್ಲಮೇಟರಿ ಗುಣವು ಬಹು ಬೇಗನೆ ಬಾಯಿ ಹುಣ್ಣು ಶಮನವಾಗಲು ಅನುವು ಮಾಡಿ ಕೊಡುತ್ತದೆ. ಅದಲ್ಲದೆ ಜೇನುತುಪ್ಪವು ಬಾಯಿಯ ಮೇಲಿನ ಪದರವನ್ನು ನಯವಾಗಿಸುತ್ತದೆ ಮತ್ತು ಹೈಡ್ರೇಟ್‌ ಆಗಿ ಇರಿಸುತ್ತದೆ. ಸ್ವಲ್ಪ ಜೇನುತುಪ್ಪ ತೆಗೆದುಕೊಂಡು ಬಾಯಿ ಹುಣ್ಣಾದ ಜಾಗದಲ್ಲಿ ಲೇಪಿಸಿ.
  • ಜ್ಯೇಷ್ಠಮಧು :
    ಜ್ಯೇಷ್ಠಮಧುವಿನ ಕಡ್ಡಿಗಳನ್ನು ತೆಗೆದುಕೊಳ್ಳಿ, ಅದನ್ನು ನೀರಿನಲ್ಲಿ ಕುದಿಸಿ. ಚೆನ್ನಾಗಿ ಆರಿದ ಮೇಲೆ ಅದಕ್ಕೆ ರುಚಿಗೆ ತಕ್ಕಷ್ಟು ಜೇನುತುಪ್ಪ ಸೇರಿಸಿ. ನಂತರ ಕುಡಿಯಿರಿ. ಜೀರ್ಣಾಂಗದ ಸಮಸ್ಯೆಗಳಿಂದ ಬಾಯಿಹುಣ್ಣು ಉಂಟಾಗಿದ್ದರೆ ಇದರಿಂದ ಸಮಸ್ಯೆ ಪರಿಹಾರವಾಗುವುದು.
  • ಬೇಕಿಂಗ್‌ ಸೋಡಾ :
    ಬೇಕಿಂಗ್‌ ಸೋಡಾ(ಅಡುಗೆ ಸೋಡಾ) ಮತ್ತು ಉಪ್ಪನ್ನು ನೀರಿಗೆ ಸೇರಿಸಿ. ಆ ನೀರಿನಿಂದ ಗಾರ್ಗಲ್‌ ಮಾಡಿ. ಇದು ಬಾಯಿ ಹುಣ್ಣಿಗೆ ಅತ್ಯಂತ ಪರಿಣಾಮಕಾರಿಯಾದ ಮನೆಮದ್ದಾಗಿದೆ. ಆದರೆ ನೆನಪಿಡಿ ಗಾರ್ಗಲ್‌ ಮಾಡುವಾಗ ಈ ನೀರನ್ನು ಕುಡಿಯದಂತೆ ಎಚ್ಚರವಹಿಸಿ.

ಇದನ್ನೂ ಓದಿ : Baking Soda : ಬೇಕಿಂಗ್‌ ಸೋಡಾ ಬಗ್ಗೆ ನಿಮಗೆ ಗೊತ್ತೇ? ಅಡುಗೆಗಷ್ಟೇ ಅಲ್ಲ, ಆರೋಗ್ಯದ ಸಮಸ್ಯೆಗೂ ಉಂಟು ಭಾರಿ ಪ್ರಯೋಜನ!!

ಇದನ್ನೂ ಓದಿ : almond with honey benefits : ಬಾದಾಮಿ ಹಾಗೂ ಜೇನುತುಪ್ಪ ಸೇವನೆ ಹಿಂದಿದೆ ಆರೋಗ್ಯದ ಗುಟ್ಟು

(Mouth Ulcer home remedies you must try for better results)

Comments are closed.