Mustard Oil Health Tips:ಹಳೆ ನೋವು ನಿಮ್ಮನ್ನು ಕಾಡುತ್ತಿದೇಯೇ? ಹಾಗಾದ್ರೆ ಬಳಸಿ ಸಾಸಿವೆ ಎಣ್ಣೆ

(Mustard Oil Health Tips)ಸಣ್ಣವರಿದ್ದಾಗ ಬಿದ್ದು ಪೆಟ್ಟು ಮಾಡಿಕೊಂಡಿದ್ದರೆ ವಯಾಸ್ಸಾಗುತ್ತಾ ಹೋದಂತೆ ಆ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಹಲವಾರು ಮನೆಮದ್ದಿನ ಪರಿಹಾರವಿದೆ ಕೊಬ್ಬರಿ ಎಣ್ಣೆಯನ್ನು ಮಂಡಿ ಮತ್ತು ಸೊಂಟದಲ್ಲಿ ಎಲ್ಲಿ ನೋವಿದೆಯೋ ಅಲ್ಲಿ ಹಚ್ಚಿ ಮಸಾಜ್‌ ಮಾಡಿಕೊಂಡು ಬಿಸಿ ನೀರು ಹಾಕಿಕೊಂಡರೆ ಸೊಂಟ ಮತ್ತು ಮಂಡಿ ನೋವು ಕಡಿಮೆ ಆಗುತ್ತದೆ. ಅಷ್ಟೇ ಅಲ್ಲದೆ ಸಾಸಿವೆ ಎಣ್ಣೆಯಿಂದ ಕೂಡ ಹಳೆ ಸೊಂಟನೋವು ಮತ್ತು ಮಂಡಿ ನೋವಿಗೆ ಮುಕ್ತಿ ಪಡೆಯಬಹುದು. ಸಾಸಿವೆ ಎಣ್ಣೆಗೆ ಈ ಕೆಳಗೆ ಸೂಚಿಸಿರುವ ಪದಾರ್ಥವನ್ನು ಬೇರೆಸಿ ಕುದಿಸಿಕೊಂಡು ಎಣ್ಣೆ ಆರಿದ ನಂತರ ಇದನ್ನು ಹಚ್ಚುವುದರಿಂದ ನಿಮ್ಮ ಹಳೆ ಸೊಂಟ ನೋವು ಮತ್ತು ಮಂಡಿ ನೋವು ಕಡಿಮೆ ಆಗುತ್ತದೆ. ಸಾಸಿವೆ ಎಣ್ಣೆಗೆ ಎನೆಲ್ಲಾ ಪದಾರ್ಥ ಹಾಕಿಕೊಳ್ಳಬೇಕು ಎಂಬ ಮಾಹಿತಿಯ ಕುರಿತು ತಿಳಿಯೋಣ.

(Mustard Oil Health Tips)ಬೇಕಾಗುವ ಸಾಮಾಗ್ರಿಗಳು:

  • ಸಾಸಿವೆ ಎಣ್ಣೆ
  • ಬೆಳ್ಳುಳ್ಳಿ
  • ಚಕ್ಕೆ
  • ಲವಂಗ
  • ಅಜವಾನ
  • ಮೆಂತ್ಯೆ

ಮಾಡುವ ವಿಧಾನ
ಪಾತ್ರೆಯಲ್ಲಿ ನಿಮಗೆ ಬೇಕಾದ ಪ್ರಮಾಣದಲ್ಲಿ ಸಾಸಿವೆ ಎಣ್ಣೆಯನ್ನು ತೆಗೆದುಕೊಳ್ಳಿ, ಆರು ಬೆಳ್ಳುಳ್ಳಿ ಎಸಳು, ನಾಲ್ಕು ಚಕ್ಕೆ, ಅರ್ಧ ಚಮಚ ಅಜವಾನ, ಅರ್ಧ ಚಮಚ ಮೆಂತ್ಯೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಗ್ಯಾಸ್‌ ಮೇಲೆ ಬಾಣಲೆ ಇಟ್ಟುಕೊಂಡು ಅದರ ಮೇಲೆ ಈ ಪಾತ್ರೆಯನ್ನು ಇಟ್ಟು ಸಣ್ಣ ಉರಿಯಲ್ಲಿ ಕಾಯಿಸಬೇಕು ಕುದಿ ಬರುತ್ತಿದ್ದ ಹಾಗೆ ಗ್ಯಾಸ್‌ ಆಫ್‌ ಮಾಡಬೇಕು. ಈ ಎಣ್ಣೆಯನ್ನು ಒಂದು ದಿನ ಆ ಪಾತ್ರೆಯಲ್ಲೇ ಇಡಬೇಕು. ಮಾರನೆಯ ದಿನ ಅದನ್ನು ಸೊಸಿಕೊಂಡು ಡಬ್ಬಿಯಲ್ಲಿ ಶೇಕರಿಸಿ ಇಟ್ಟುಕೊಳ್ಳಬೇಕು. ಸ್ನಾನ ಮಾಡುವ ಮುಂಚೆ ಈ ಎಣ್ಣೆಯನ್ನು ಹಚ್ಚಿ ಮಸಾಜ್‌ ಮಾಡಿದರೆ ನಿಮ್ಮನ್ನು ಕಾಡುತ್ತಿರುವ ಹಳೆ ನೋವು ಕಡಿಮೆ ಆಗುತ್ತದೆ.

ಇದನ್ನೂ ಓದಿ:Skin care product: ಗೂಗಲ್‌ ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಸ್ಕಿನ್‌ ಕೇರ್‌ ಪದಾರ್ಥಗಳಿವು

ಇದನ್ನೂ ಓದಿ:Tips for diabetes: ಈ ಸಲಹೆ ಪಾಲಿಸಿ ಮಧುಮೇಹವನ್ನು ನಿಯಂತ್ರಣದಲ್ಲಿಡಿ

ಇದನ್ನೂ ಓದಿ:Heel Pain Home Remedies:ಅತಿಯಾದ ಹಿಮ್ಮಡಿ ನೋವು ನಿಮ್ಮನ್ನು ಕಾಡುತ್ತಿದೆಯೇ ? ಹಾಗಾದ್ರೆ ಇಲ್ಲಿದೆ ಅತ್ಯುತ್ತಮ ಮನೆಮದ್ದು ಮಾಹಿತಿ

ಸಾಸಿವೆ ಎಣ್ಣೆ
ಸಾಸಿವೆ ಎಣ್ಣೆಯಲ್ಲಿ ಥಯಾಮಿನ್‌ , ಫೋಲೇಟ್‌, ಮತ್ತು ನಿಯಾಸಿನ್‌ ಎನ್ನುವಂತಹ ಮಿಟಮಿನ್‌ ಗಳನ್ನು ಹೊಂದಿದೆ. ಹಾಗಾಗಿ ಸಾಸವೆ ಎಣ್ಣೆಯಿಂದ ಹಲವು ಪ್ರಯೋಜನವಿದೆ. ಸಾಸಿವೆ ಎಣ್ಣೆಯನ್ನು ಬಳಕೆ ಮಾಡುವುದರಿಂದ ಚರ್ಮದ ಸೋಂಕನ್ನು ಕಡಿಮೆ ಮಾಡುತ್ತದೆ. ಸಾಸಿವೆ ಎಣ್ಣೆಯನ್ನು ಚರ್ಮದ ಮೇಲೆ ಹಚ್ಚಿ ಮಸಾಜ್‌ ಮಾಡಿಕೊಳ್ಳುವುದರಿಂದ ರಕ್ತದ ಪರಿಚಲನೆಯನ್ನು ಹೆಚ್ಚಿಸುತ್ತದೆ. ಹಲ್ಲು ನೋವು ಇರುವವರು ಸಾಸಿವೆ ಎಣ್ಣೆಯಲ್ಲಿ ಉಪ್ಪು ಬೇರೆಸಿ ಮಸಾಜ್‌ ಮಾಡಿಕೊಳ್ಳುವುದರಿಂದ ಹಲ್ಲು ನೋವು ದೂರವಾಗುತ್ತದೆ.

Mustard Oil Health Tips Are old pains bothering you? use mustard oil

Comments are closed.