Accused arrest :ದೈವಸ್ಥಾನ ,ಮಸೀದಿಗಳಲ್ಲಿ ಕಾಂಡೋಮ್​ ಎಸೆಯುತ್ತಿದ್ದವನ ಬಂಧನ..!

ಮಂಗಳೂರು : ಏಸುವೊಬ್ಬನೇ ದೇವರು ಎಂಬ ಮನಸ್ಥಿತಿ ಹೊಂದಿದ್ದ ವೃದ್ಧನೊಬ್ಬ ಹಿಂದೂ ಹಾಗೂ ಮುಸ್ಲಿಂ ಧಾರ್ಮಿಕ ಕೇಂದ್ರಗಳಿಗೆ ಅಪಚಾರ ಎಸಗಿದ್ದು ಈತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ಉಣ್ಕಲ್​ ಮೂಲದ 62 ವರ್ಷದ ದೇವದಾಸ್​​ ದೇಸಾಯಿ ಎಂಬಾತ ಇದೀಗ ಪೊಲೀಸ್​ ಠಾಣೆ (Accused arrest) ಅತಿಥಿಯಾಗಿದ್ದಾನೆ.

ಕಳೆದ 20 ವರ್ಷಗಳಿಂದ ಕೋಟೆಕಾರ್​​ನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ದೇವದಾಸ್​ ದೇಸಾಯಿ ಚರಂಡಿಗಳಲ್ಲಿ ಸಿಗುತ್ತಿದ್ದ ಕಾಂಡೋಮ್​ಗಳನ್ನು ಆಯುತ್ತಿದ್ದ ಎನ್ನಲಾಗಿದೆ. ಬಳಿಕ ಇದರ ಜೊತೆಯಲ್ಲಿ ಏಸು ಕ್ರಿಸ್ತನಿಗೆ ಸಂಬಂಧಿಸಿದ ಬರಹಗಳನ್ನು ಹಾಕುತ್ತಿದ್ದ ಈತ ಧಾರ್ಮಿಕ ಕೇಂದ್ರಗಳಲ್ಲಿ ಇದನ್ನು ಹಾಕುವ ಮೂಲಕ ಅಪಚಾರ ಎಸಗುತ್ತಿದ್ದ. ಭೂಮಿಯು ಅಂತ್ಯಕ್ಕೆ ಬಂದಿದೆ ಎಂಬ ಮನೋಸ್ಥಿತಿಯಲ್ಲಿ ಈತ ಈ ಎಲ್ಲ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಉಳ್ಳಾಲದ ದರ್ಗಾ ಕಾಣಿಕೆ ಡಬ್ಬಿ, ಎಜೆ ಶೆಟ್ಟಿ ಬಳಿ ಇರುವ ದರ್ಗಾ ಹಾಗೂ ಬಂಗ್ರಹ ಕುಳೂರು ಗುರುದ್ವಾರ ಸೇರಿದಂತೆ ಒಟ್ಟು 18 ಧಾರ್ಮಿಕ ಕೇಂದ್ರಗಳಲ್ಲಿ ಈತ ಅಪಚಾರ ಎಸಗಿದ್ದ ಎನ್ನಲಾಗಿದೆ. ಏಸುವೊಬ್ಬನೇ ದೇವರು ಎಂದುಕೊಂಡಿದ್ದ ವ್ಯಕ್ತಿಯು ಈ ರೀತಿ ಕೃತ್ಯ ಎಸಗಿದ್ದ. ಈತನ ವಿರುದ್ಧ ಸೆಕ್ಷನ್​ 153 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಪೊಲೀಸ್​ ಕಸ್ಟಡಿಗೆ ಪಡೆಯುವುದಾಗಿ ಮಂಗಳೂರು ನಗರ ಪೊಲೀಸ್​ ಕಮಿಷನರ್​ ಹೇಳಿದ್ದಾರೆ.

ಈತ ಎರಡು ದಿನಗಳ ಹಿಂದಷ್ಟೇ ಮಾರ್ನಮಿಕಟ್ಟೆಯಲ್ಲಿರುವ ಕೊರಗಜ್ಜ ಗುಡಿಯನ್ನು ಈತ ಅಪವಿತ್ರಗೊಳಿಸಿದ್ದ ಎನ್ನಲಾಗಿದೆ. ಸಿಸಿ ಕ್ಯಾಮರಾದ ದೃಶ್ಯ ಆಧರಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಮಾನಸಿಕ ಸ್ಥಿಮಿತತೆ ಬಗ್ಗೆ ವೈದ್ಯರಲ್ಲಿ ವರದಿ ಸಲ್ಲಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಇದನ್ನು ಓದಿ : Sangolli Rayanna statue: ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿದ ಆರೋಪಿಗಳ ಗುರುತು ಪತ್ತೆ..!

ಇದನ್ನೂ ಓದಿ : Omicron Symptoms: ಈ ಲಕ್ಷಣಗಳಿದ್ದರೆ ಓಮಿಕ್ರಾನ್ ಸೋಂಕು ತಗುಲಿರಬಹುದು ಎಚ್ಚರ; ಓಮಿಕ್ರಾನ್ ಬಂದರೆ ದೇಹದಲ್ಲಿ ಆಗುವ ಬದಲಾವಣೆಗಳಿವು

ಇದನ್ನೂ ಓದಿ : Goa New Year Alert : ಗೋವಾಕ್ಕೆ ಪಾರ್ಟಿಗೆ ಹೋಗೋ ಮುನ್ನ ಎಚ್ಚರ: ಸರ್ಕಾರ ಜಾರಿಗೆ ತಂದಿದೆ ಖಡಕ್ ರೂಲ್ಸ್

ಇದನ್ನೂ ಓದಿ :Night Curfew Effect : ಕರಾವಳಿಯಲ್ಲಿ ನೈಟ್​ ಕರ್ಫ್ಯೂ ಪಾಲನೆಗೆ ಕಟ್ಟುನಿಟ್ಟಿನ ಆದೇಶ: ಯಕ್ಷಗಾನ, ಕಂಬಳಕ್ಕೂ ಹೊಸ ನಿಯಮ

Arrest of accused Devadas Desai

Comments are closed.