Orange-Papaya Smoothie : ಬೇಸಿಗೆಯಲ್ಲಿ ಅದ್ಭುತ ಆರೋಗ್ಯಕ್ಕೆ ವರದಾನ ಆರೆಂಜ್‌–ಪಪ್ಪಾಯಿ ಸ್ಮೂಥಿ

ಬೇಸಿಗೆ (Summer) ಕಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಬಿಸಿಲಿನ ತಾಪ ಮತ್ತು ಸೂರ್ಯನ ಬೆಳಕಿ (Heat and Sun Rays) ನಿಂದ ದೇಹದ ಶಕ್ತಿ ಕಡಿಮೆಯಾಗುತ್ತದೆ. ದೇಹವು ನಿರ್ಜಲೀಕರಣ (Dehydration) ಗೊಳ್ಳುತ್ತದೆ. ಈ ಕಾರಣದಿಂದಾಗಿ, ತಲೆತಿರುಗುವಿಕೆ ಮತ್ತು ದೌರ್ಬಲ್ಯದ ಸಮಸ್ಯೆ ಪ್ರಾರಂಭವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದಿನವಿಡೀ ದೇಹದ ಶಕ್ತಿಯನ್ನು ಕಾಪಾಡಿಕೊಳ್ಳಲು ಬಯಸಿದರೆ, ಅದಕ್ಕೆ ಆರೆಂಜ್‌– ಪಪ್ಪಾಯಿ ಸ್ಮೂಥಿಯನ್ನು ಕುಡಿಯಬಹುದು (Orange-Papaya Smoothie) . ಶಕ್ತಿಯನ್ನು ನೀಡಲು ಇದು ಉತ್ತಮ ಆಯ್ಕೆಯಾಗಿದೆ. ವಿಟಮಿನ್ ಸಿ ಮತ್ತು ಆಂಟಿಒಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಆರೆಂಜ್‌ (ಕಿತ್ತಳೆ) ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ, ವಿಟಮಿನ್ ಬಿ9 ಮತ್ತು ಫೋಲೇಟ್‌ನಂತಹ ಪೋಷಕಾಂಶಗಳು ಆರೆಂಜ್‌ನಲ್ಲಿ ಕಂಡುಬರುತ್ತವೆ. ಇದು ಬಿಪಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದ ಕೊಲೆಸ್ಟ್ರಾಲ್ ಮಟ್ಟವು ಸಹ ನಿರ್ವಹಿಸಲ್ಪಡುತ್ತದೆ. ಇದು ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಹಾಗೆಯೇ ಪಪ್ಪಾಯಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಒಟ್ಟಾರೆಯಾಗಿ ಇದು ಅತ್ಯಂತ ಆರೋಗ್ಯಕರ ಪಾನೀಯವಾಗಿದೆ. ಇದನ್ನು ಎಲ್ಲಾ ವಯಸ್ಸಿನವರೂ ಸೇವಿಸಬಹುದು. ಹಾಗಾದರೆ ಪಪ್ಪಾಯಿ ಆರೆಂಜ್ ಸ್ಮೂಥಿ ಮಾಡುವ ವಿಧಾನ ಇಲ್ಲಿದೆ ಓದಿ.

ಆರೆಂಜ್‌–ಪಪ್ಪಾಯಿ ಸ್ಮೂಥಿ ತಯಾರಿಸಲು ಬೇಕಾದ ಪದಾರ್ಥಗಳು:

1.5 ಕಪ್ ಪಪ್ಪಾಯಿ
ಕಿತ್ತಳೆ ಒಂದು
ಸ್ಟ್ರಾಬೆರಿ ಕ್ರಷ್ 1 ಟೀಸ್ಪೂನ್
ಜೇನು ಒಂದು ಚಮಚ
ಅರಿಶಿನ ಪುಡಿ ಒಂದು ಪಿಂಚ್
ಅಗತ್ಯವಿರುವಷ್ಟು ನೀರು
ಅಗತ್ಯವಿರುವಂತೆ ಐಸ್ ಕ್ಯೂಬ್‌ಗಳು

ಆರೆಂಜ್‌–ಪಪ್ಪಾಯಿ ಸ್ಮೂಥಿ ತಯಾರಿಸುವ ವಿಧಾನ:

  • ಆರೆಂಜ್‌–ಪಪ್ಪಾಯಿ ಸ್ಮೂಥಿ ಮಾಡಲು, ಮೊದಲು ಪಪ್ಪಾಯಿಯನ್ನು ಕತ್ತರಿಸಿ ಅದರ ಮೇಲಿನ ಸಿಪ್ಪೆಯನ್ನು ತೆಗೆಯಿರಿ.
    ನಂತರ ಪಪ್ಪಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಈ ತುಂಡುಗಳನ್ನು ಒಂದು ಬಟ್ಟಲಿನಲ್ಲಿ ಹಾಕಿಕೊಳ್ಳಿ.
  • ಈಗ ಆರೆಂಜ್‌ ಅನ್ನು ಕತ್ತರಿಸಿ ಅದರ ರಸವನ್ನು ಒಂದು ಪಾತ್ರೆಯಲ್ಲಿ ತೆಗೆಯಿರಿ.
  • ಈಗ ಮಿಕ್ಸರ್ ಜಾರ್‌ನಲ್ಲಿ ಪಪ್ಪಾಯಿ ತುಂಡುಗಳು ಮತ್ತು ಆರೆಂಜ್‌ ರಸವನ್ನು ಹಾಕಿ ಗ್ರೈಂಡ್‌ ಮಾಡಿ.
  • ನಂತರ, ಅದನ್ನು ಒಂದು ಪಾತ್ರೆಗೆ ಹಾಕಿ. ಅದಕ್ಕೆ ಜೇನುತುಪ್ಪ, ಸ್ಟ್ರಾಬೆರಿ ಕ್ರಷ್ ಮತ್ತು ಅರಿಶಿನ ಪುಡಿಯನ್ನು ಸೇರಿಸಿ ಮತ್ತು ಮತ್ತೊಮ್ಮೆ ಚೆನ್ನಾಗಿ ಬೆರೆಸಿ.
  • ಇದರ ನಂತರ, ಸ್ಮೂಥಿಯಲ್ಲಿ ಅಗತ್ಯವಿರುವಷ್ಟು ನೀರನ್ನು ಸೇರಿಸಿ ಅದರಲ್ಲಿ ಕೆಲವು ಐಸ್ ತುಂಡುಗಳನ್ನು ಹಾಕಿ ಮತ್ತು ಸರ್ವಿಂಗ್ ಗ್ಲಾಸ್‌ನಲ್ಲಿ ಹಾಕಿ.
  • ಈಗ ಸ್ಮೂಥಿ ಸಿದ್ಧವಾಗಿದೆ. ತಂಪಾಗಿರುವಾಗಲೇ ಅದನ್ನು ಸೇವಿಸಿ.

ಇದನ್ನೂ ಓದಿ :COVID ಆರ್ಕ್ಟರಸ್ ರೂಪಾಂತರ ಅಥವಾ XBB.1.16 : ವಯಸ್ಕರು ಮತ್ತು ಮಕ್ಕಳಲ್ಲಿ ಲಕ್ಷಣಗಳು ಹೇಗೆ ಇರುತ್ತೆ ಗೊತ್ತಾ ?

ಇದನ್ನೂ ಓದಿ : ನಿಮ್ಮ ದೇಹವನ್ನು ತಂಪಾಗಿರಿಸಲು ಪುದೀನ, ಹಸಿ ಮಾವಿನ ಪಾನೀಯ ಕುಡಿಯಿರಿ

(Orange-Papaya Smoothie is beneficial for health in this hot summer)

Comments are closed.