ಸಂಪೂರ್ಣ ಆರೋಗ್ಯ ರಕ್ಷಣೆಗೆ ಚಿಕ್ಕುಹಣ್ಣು..

0

ರಕ್ಷಾ ಬಡಾಮನೆ

ಹಣ್ಣುಗಳು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಎಳೆ ವಯಸ್ಸಿನ ಮಕ್ಕಳಿಂದ ಇಳಿ ವಯಸ್ಸಿನ ಮುದುಕರ ವರೆಗೂ ಹಣ್ಣನ್ನು ಎಲ್ಲರೂ ಆಸ್ವಾದಿಸುವ ವರೆ.ಚಿಕ್ಕು ಹಣ್ಣನ್ನು ಸಪೋಟ ಎಂದು ಕರೆಯುತ್ತಾರೆ. ಈ ಹಣ್ಣನ್ನು ಸೇವಿಸುವುದರಿಂದ ಬಹಳ ಪ್ರಯೋಜನಗಳು ಇವೆ.

ಸಪೋಟ ಹಣ್ಣಿನಲ್ಲಿ ವಿಟಮಿನ್ ಎ ಇದ್ದು ಕಣ್ಣುಗಳ ರಕ್ಷಣೆಗೆ ಒಳ್ಳೆಯದು. ಸಪೋಟ ಹಣ್ಣುಗಳಲ್ಲಿ ಗ್ಲೂಕೋಸ್ ಅಂಶ ಅಧಿಕ ಇರುವುದರಿಂದ ಶಕ್ತಿ ಯನ್ನೂ ಕೊಡುತ್ತದೆ.

ಸಪೋಟ ಹಣ್ಣಿನಲ್ಲಿ ಟ್ಯಾನಿನ್ ಅಂಶವು ಇರುವುದರಿಂದ ಕರಳಿನ ಉರಿಯೂತವನ್ನು ಕಮ್ಮಿ ಮಾಡಿ ಜೀರ್ಣಾಂಗ ಪರಿಸ್ಥಿತಿ ಯನ್ನ ಉತ್ತಮವಾಗಿ ಕಾಪಾಡಿಕೊಳ್ಳಲು ಸಹಕಾರಿ ಆಗಿದೆ. ಸಪೋಟ ಹಣ್ಣಿನಲ್ಲಿ ನೀರಿನ ಅಂಶ ಹೆಚ್ಚಾಗಿರುವುದರಿಂದ ಮಲಬದ್ಧತೆ ನಿವಾರಣೆಗೆ ಸಹಕಾರಿಯಾಗಿದೆ. ದೊಡ್ಡ ಕರುಳಿನ ಒಳ ಚರ್ಮವನ್ನು ಕಾಪಾಡುವುದರ ಜೊತೆಗೆ ಸೊಂಕುಗಳಗಾದಂತೆ ರಕ್ಷಣೆ ನೀಡುತ್ತದೆ.

ಚಿಕ್ಕು ಹಣ್ಣಿನಲ್ಲಿ ಅಧಿಕವಾದ ಪೋಷಕಾಂಶ ಮತ್ತು ಕಾರ್ಬೋಹೈಡ್ರೇಟ್ ಗಳು ಇರುವುದರಿಂದ ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರ ಪೋಷಣೆಗೆ ಸಹಾಯ ಮಾಡುತ್ತದೆ. ಚಿಕ್ಕು ಹಣ್ಣುಗಳು ಪೈಲ್ಸ್ ರೋಗಗಳನ್ನು ನಿಯಂತ್ರಿಸುತ್ತದೆ ಮತ್ತು ಇದರಿಂದ ಆಗುವ ರಕ್ತ ಸ್ರಾವ ವನ್ನ ಕಡಿಮೆ ಮಾಡುತ್ತದೆ.

ಚಿಕ್ಕುಹಣ್ಣನ್ನು ನೀರಿನಲ್ಲಿ ಹಾಕಿ ಕುದಿಸಿ ಕಷಾಯ ರೀತಿ ಮಾಡಿ ಕುಡಿಯುದರಿಂದ ಅತಿಸಾರವು ಕಡಿಮೆ ಯಾಗುತ್ತದೆ. ಚಿಕ್ಕು ಹಣ್ಣಿನಲ್ಲಿರುವ ನಿದ್ರಜನಕ ಅಂಶಗಳು ನರಗಳನ್ನು ಶಾಂತಗೊಳಿಸಿ ಒತ್ತಡ ,ನಿದ್ರಾಹೀನತೆ, ಆತಂಕ, ಖಿನ್ನತೆ ಇಂದ ಮುಕ್ತಿ ನೀಡುತ್ತದೆ.

ಚಿಕ್ಕು ಹಣ್ಣಿನಲ್ಲಿರುವ ಬೀಜಗಳನ್ನು ಪುಡಿ ಮಾಡಿ ನೀರಿನಲ್ಲಿ ಹಾಕಿ ಕುಡಿಯುವುದು ಮೂತ್ರ ಪಿಂಡಗಳ ಕಲ್ಲುಗಳು ಕಡಿಮೆಯಾಗುತ್ತದೆ. ಚಿಕ್ಕು ಹಣ್ಣಿನಲ್ಲಿರುವ ಬೀಜಗಳಿಗೆ ಮೂತ್ರ ವರ್ಧಕ ಗುಣಗಳಿರುತ್ತವೆ. ಹೀಗಾಗಿ ಚಿಕ್ಕು ಹಣ್ಣುಗಳಲ್ಲಿ ದೊಡ್ಡ ಪ್ರಮಾಣದ ಕ್ಯಾಲ್ಸಿಮ್, ಆಂಟಿ ಆಕ್ಸಿಡೆಂಟ್ ಮತ್ತು ಪೋಸ್ಪರಸ್ ಗಳು ಇದ್ದು ಮೂಳೆಗಳನ್ನು ಪ್ರಬಲ ಗೊಳಿಸುತ್ತದೆ.

ಈ ಹಣ್ಣುಗಳಲ್ಲಿರುವ ನಾರಿನ ಅಂಶವು ಮತ್ತು ಪೋಷಕಾಂಶಗಳು ಕ್ಯಾನ್ಸರ್ ಗಳು ಬರದಂತೆ ತಡೆಯುತ್ತದೆ. ಚಿಕ್ಕು ಹಣ್ಣಿನಲ್ಲಿರುವ ವಿಟಿನ್ ಎ ಮತ್ತು ವಿಟಮಿನ್ ಇ ಗಳು ಸುಂದರ ಚರ್ಮ ನೀಡುತ್ತದೆ. ಅಷ್ಟೇ ಅಲ್ಲಾ ಚರ್ಮವನ್ನು ತೇವಯುಕ್ತವಾಗಿಡಲು ಸಹಾಯಕವಾಗಿದೆ. ಚಿಕ್ಕು ಹಣ್ಣಿನ ಬೀಜದಿಂದ ತೆಗೆದ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ನವಿರಾದ ಕೂದಲು ನಿಮ್ಮದಾಗುತ್ತದೆ.

ಸಪೋಟ ಬೀಜದ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಕೂದಲು ಉದುರುವುದು ಮತ್ತು ಹೊಟ್ಟಿನಂತ ಸಮಸ್ಯೆಗಳು ಗುಣಮುಖವಾಗುತ್ತದೆ. ಚಿಕ್ಕು ಹಣ್ಣಿನಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ವಯಸ್ಸಾ ಗುವುದನ್ನು ಕಡಿಮೆ ಮಾಡುತ್ತದೆ.

Leave A Reply

Your email address will not be published.