Summer Diet Plan For Kids : ಬೇಸಿಗೆಯ ಬಿಸಿಲಿನಿಂದ ಮಕ್ಕಳನ್ನು ಕಾಪಾಡಲು ಈ ಆಹಾರಗಳನ್ನು ನೀಡಿ…

ಬೇಸಿಗೆಯ (Summer) ಬಿಸಿಲು (Heat) ಏರುತ್ತಿದೆ. ಫ್ಯಾನ್‌ ಗಾಳಿಯು ಬಿಸಿಯ ಅನುಭವ ನೀಡುತ್ತಿದೆ. ಎಸಿ, ಕೂಲರ್‌ಗಳ ಮೊರೆ ಹೋಗುತ್ತಿದ್ದಾರೆ. ಆದರೆ ಆರೋಗ್ಯ ತಜ್ಞರು ಅದರಿಂದ ಸೀಸನ್‌ ವೈರಲ್‌ಗಳಿಗೆ ಜನರು ಬಲಿಯಾಗಬಹುದು ಎಂದು ಹೇಳುತ್ತಿದ್ದಾರೆ. ಬಿಸಿಲಿನಲ್ಲಿ ಜನರು ಮನೆಯಿಂದ ಹೊರಬರುವುದು ಕಷ್ಟವಾಗುತ್ತದೆ. ಬೇಸಿಗೆಯಲ್ಲಿ ಹೀಟ್ ಸ್ಟ್ರೋಕ್ ನಿಂದ ಹಿರಿಯರಷ್ಟೇ ಅಲ್ಲ ಮಕ್ಕಳನ್ನೂ ರಕ್ಷಿಸಬೇಕಾಗಿದೆ. ಮಕ್ಕಳಿಗೆ ದೇಹವನ್ನು ತಂಪಾಗಿರಿಸುವ ಆಹಾರಗಳನ್ನು (Summer Diet Plan For Kids) ನೀಡುವ ಮೂಲಕ ಶಾಖದ ಹೊಡೆತದಿಂದ ಉಳಿಸಬಹುದು.

ಸೌತೆಕಾಯಿಯನ್ನು ತಿನ್ನಲು ಕೊಡಿ:
ಬೇಸಿಗೆಯಲ್ಲಿ, ಸೌತೆಕಾಯಿ ಉತ್ತಮವಾಗಿದೆ. ಅಧಿಕ ನೀರಿನಂಶದಿಂದ ಕೂಡಿರುವ ಸವತೆಕಾಯಿಯನ್ನು ಜನರು ತಿನ್ನಲು ಇಷ್ಟಪಡುತ್ತಾರೆ. ಅದೇ ಸಮಯದಲ್ಲಿ, ಸೌತೆಕಾಯಿಯು ವಿಟಮಿನ್ ಕೆ, ವಿಟಮಿನ್ ಡಿ ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇವೆಲ್ಲವೂ ದೇಹದಲ್ಲುಂಟಾಗುವ ನೀರಿನ ಕೊರತೆಯಿಂದ ಕಾಪಾಡುತ್ತದೆ. ಮಕ್ಕಳಿಗೂ ಸವತೆಕಾಯಿಯನ್ನು ಕೊಡಿ. ಮಕ್ಕಳು ಸೌತೆಕಾಯಿಯನ್ನು ಚಾಟ್ ರೂಪದಲ್ಲಿ ತಿನ್ನಲು ಇಷ್ಟಪಡಬಹುದು. ಸ್ನ್ಯಾಕ್ಸ್‌ಗಳನ್ನು ನೀಡುವುದರ ಬದಲು ಸವತೆಕಾಯಿಗೆ ಉಪ್ಪು, ಸ್ವಲ್ಪ ಖಾರ ಸೇರಿಸಿ ಕೊಡಿ. ಇಲ್ಲವೇ ಸಣ್ಣಗೆ ಹೆಚ್ಚಿದ ಸವತೆಕಾಯಿ, ಟೊಮೆಟೊಗೆ ಉಪ್ಪು, ಸಕ್ಕರೆ ಹಾಕಿ ಕೊಡಿ.

ಇದನ್ನೂ ಓದಿ : ಎಂದಾದ್ರೂ ಕುಡಿದಿದ್ರಾ ಕುಲುಕ್ಕಿ ಶರ್ಬತ್ : ಈ ಬೇಸಿಗೆಯಲ್ಲಿ ಒಮ್ಮೆ ಟ್ರೈ ಮಾಡಿ

ಹಣ್ಣುಗಳು :
ನೀರಿನಿಂಶ ಅಧಿಕವಾಗಿರುವ ಕಲ್ಲಂಗಡಿಹಣ್ಣು ಬೇಸಿಗೆಗೆ ಬೆಸ್ಟ್‌. ಇದು ಡೀ ಹೈಡ್ರೇಶನ್‌ ಅನ್ನು ಕಡಿಮೆ ಮಾಡುತ್ತದೆ. ಜೊತೆಗೆ ಬೇಸಿಗೆ ಕಾಲದಲ್ಲಿ ಸಿಗುವ ಮಾವು, ತರಬೂಜಗಳನ್ನು ನೀಡಿ. ಮನೆಯಲ್ಲಿಯೇ ಅವುಗಳ ಜ್ಯೂಸ್‌ ಮಾಡಿ ಕೊಡಿ. ಜಂಕ್‌ ಫುಡ್‌ಗಳಿಗಿಂತ ಹಣ್ಣುಗಳು ಬಹಳ ಉತ್ತಮವಾಗಿವೆ.

ಮಜ್ಜಿಗೆ ಮತ್ತು ಮೊಸರು:
ಮೊಸರು ಮತ್ತು ಮಜ್ಜಿಗೆಯನ್ನು ಹಾಲಿನಿಂದ ತಯಾರಿಸಲಾಗುತ್ತದೆ. ಮಕ್ಕಳು ತಂಪಾಗಿರಲು ಹೊರಗಿನ ಪಾನೀಯಗಳನ್ನು ಕುಡಿಯುತ್ತಾರೆ. ಇದು ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನುಂಟು ಮಾಡುತ್ತದೆ. ಇದಲ್ಲದೇ ಮೊಸರು, ಮಜ್ಜಿಗೆ, ರೈತಾವನ್ನು ಮಾಡಿ ಮಕ್ಕಳಿಗೆ ತಿನ್ನಿಸಬಹುದು. ಇದು ಅವರ ಹೊಟ್ಟೆಯನ್ನು ತಂಪಾಗಿಸಲು ಕೆಲಸ ಮಾಡುತ್ತದೆ. ಮೊಸರು ಮತ್ತು ಮಜ್ಜಿಗೆ ಬೇಸಿಗೆಯಲ್ಲಾಗುವ ನಿಶ್ಯಕ್ತಿಯನ್ನು ಹೋಗಲಾಡಿಸುತ್ತದೆ.

ಎಳನೀರು:
ದೇಹದಲ್ಲಿನ ನೀರಿನ ಕೊರತೆಯನ್ನು ನೀಗಿಸಲು ಎಳನೀರು ಉತ್ತಮ ಮೂಲವಾಗಿದೆ. ಮೂಲತಃ ಮಕ್ಕಳು ಕಡಿಮೆ ನೀರು ಕುಡಿಯುತ್ತಾರೆ. ಆದರೆ ಎಳನೀರನ್ನು ಇಷ್ಟಪಟ್ಟು ಕುಡಿಯುತ್ತಾರೆ. ವಿಟಮಿನ್-ಸಿ, ಕ್ಯಾಲ್ಸಿಯಂ, ಮ್ಯಾಂಗನೀಸ್ ನಂತಹ ಪೋಷಕಾಂಶಗಳು ತೆಂಗಿನ ನೀರಿನಲ್ಲಿ ಕಂಡುಬರುತ್ತವೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ.

ಹಸಿರು ತರಕಾರಿಗಳು ಸಹ ಪ್ರಯೋಜನಕಾರಿ:
ಬೇಸಿಗೆಯಲ್ಲಿ ಶಾಖದಿಂದ ರಕ್ಷಿಸಲು ಹಸಿರು ತರಕಾರಿಗಳು ಪ್ರಯೋಜನಕಾರಿ. ಕಬ್ಬಿಣ, ವಿಟಮಿನ್ ಸಿ, ವಿಟಮಿನ್ ಎ, ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಮಕ್ಕಳು ತರಕಾರಿ ಕೂಡ ತಿನ್ನುವುದಿಲ್ಲ. ಆದರೆ ತರಕಾರಿಗಳನ್ನು ಸಲಾಡ್ ರೂಪದಲ್ಲಿ ನೀಡಬಹುದು.

ಇದನ್ನೂ ಓದಿ : Cucumber Cold Soup: ಎಂದಾದರೂ ಸೌತೆಕಾಯಿ ಕೋಲ್ಡ್‌ ಸೂಪ್‌ ಟ್ರೈ ಮಾಡಿದ್ದೀರಾ; ಇದು ಬೇಸಿಗೆಗೆ ಬೆಸ್ಟ್‌

(Summer Diet Plan For Kids. Give these foods and Save your children in this hot season.)

Comments are closed.