Refreshing Juice : ಬೇಸಿಗೆಯ ಬಿಸಿಲಿಗೆ ನಿಮ್ಮನ್ನು ಸಜ್ಜುಗೊಳಿಸುತ್ತದೆ ಈ ರಿಫ್ರೆಶೆಂಗ್‌ ಜ್ಯೂಸ್‌ಗಳು

ಚಳಿ ಕ್ರಮೇಣ ಕಡಿಮೆಯಾಗುತ್ತಿದೆ, ಬಿಸಿಲು ನಿಧಾನಗತಿಯಲ್ಲಿ ಏರುತ್ತಿದೆ. ಚಳಿಗಾಲ (Winter) ಸಂಪೂರ್ಣವಾಗಿ ಮುಗಿದಿಲ್ಲವಾದರೂ, ಹಗಲಿನ ಸಮಯದಲ್ಲಿ ಬಿಸಿಲು (Heat) ತನ್ನ ಪ್ರಭಾವ ತೋರಿಸುತ್ತಿದೆ. ಬೇಸಿಗೆಯಲ್ಲಿ (Summer) ಉಂಟಾಗುವ ಡೀಹೈಡ್ರೇಷನ್‌ನಿಂದ ಪಾರಾಗಲು ನಮ್ಮ ದೇಹವನ್ನು ಸಜ್ಜುಗೊಳಿಸುವುದು ಅವಶ್ಯಕವಾಗಿದೆ. ಆಯಾ ಋತುಮಾನದ ಆಹಾರಗಳನ್ನು ಅಳವಡಿಸಿಕೊಳ್ಳುವುದು, ಆ ಕಾಲದ ರೋಗಗಳಿಂದ ದೂರವಿರಲು ಸಹಾಯಮಾಡುತ್ತದೆ. ನೀರಿನಂಶ ಹೆಚ್ಚಿರುವ ಹಣ್ಣು, ತರಕಾರಿಗಳು (Fruits and Vegetables), ದೇಹವನ್ನು ತಂಪಾಗಿರಿಸುವ ಆಹಾರ ಇವೆಲ್ಲವೂ ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಉಲ್ಲಾಸವನ್ನು ನೀಡುತ್ತದೆ. ಅದಕ್ಕಾಗಿ ಇಲ್ಲಿ ಕೆಲವು ರಿಫ್ರೆಶಂಗ್‌ ಜ್ಯೂಸ್‌ಗಳನ್ನು (Refreshing Juice) ಹೇಳಲಾಗಿದೆ. ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಜ್ಯೂಸ್‌ಗಳು ನಿಮ್ಮ ದೇಹವನ್ನು ಬೇಸಿಗೆಯ ಬಿಸಿಲಿಗೆ ಸಜ್ಜುಗೊಳಿಸತ್ತದೆ.

ಬೇಸಿಗೆಯ ಬಿಸಿಲಿಗೆ ರಿಫ್ರೆಶೆಂಗ್‌ ಜ್ಯೂಸ್‌ಗಳು :

ಕಲ್ಲಂಗಡಿ ಹಣ್ಣಿನ ಜ್ಯೂಸ್‌ :
ಬೇಸಿಗೆಗೆ ಉತ್ತಮವಾದ ಹಣ್ಣು ಎಂದರೆ ಅದು ಕಲ್ಲಂಗಡಿ ಹಣ್ಣು. ಇದರ ಜ್ಯೂಸ್‌ ಕಡಿಮೆ ಸಮಯದಲ್ಲಿ ದೇಹಕ್ಕೆ ಹೆಚ್ಚಿನ ಶಕ್ತಿ ಒದಗಿಸುತ್ತದೆ. ಕಲ್ಲಂಗಡಿ ಹಣ್ಣನ್ನು ಸಿಪ್ಪೆ ತೆಗೆದು ಚಿಕ್ಕ ಹೋಳುಗಳನ್ನಾಗಿ ಕತ್ತರಿಸಿ. ಜ್ಯೂಸರ್‌ ಜಾರ್‌ಗೆ ಅದನ್ನು ಹಾಕಿ ಸ್ವಲ್ಪ ಉಪ್ಪ, ಬೇಕಿದ್ದರೆ ಸಕ್ಕರೆ ಸೇರಿಸಿ ಗ್ರೈಂಡ್‌ ಮಾಡಿ. ಫ್ರೆಶ್‌ ಇರುವಾಗಲೇ ಕುಡಿಯಿರಿ. ಜ್ಯೂಸ್‌ ಇಷ್ಟವಿಲ್ಲವೆಂದರೆ, ಕಲ್ಲಂಗಡಿ ಹಣ್ಣನ್ನು ಚಿಕ್ಕದಾಗಿ ಕತ್ತರಿಸಿ, ಅದಕ್ಕೆ ಸವತೆಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಸೇರಿಸಿಕೊಳ್ಳಿ. ಅದಕ್ಕೆ ಪಿಂಕ್‌ ಸಾಲ್ಟ್‌ ಸೇರಿಸಿ ಸಲಾಡ್‌ ರೀತಿಯಲ್ಲಿಯೂ ಸೇವಿಸಬಹುದು.

ಸವತೆಕಾಯಿ ಶರಬತ್ತ:
ಸವತೆಕಾಯಿ ಶರಬತ್ತು ದೇಹವನ್ನು ತಂಪಾಗಿರಿಸುತ್ತದೆ. ಜೊತೆಗೆ ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಯನ್ನು ಮಾಡುತ್ತದೆ. ಸವತೆಕಾಯಿಯನ್ನು ತುರಿದು, ಜ್ಯೂಸರ್‌ ಜಾರ್‌ಗೆ ಹಾಕಿ ರಸ ತಯಾರಿಸಿ. ಅದಕ್ಕೆ ಎರಡು ಹನಿ ರೋಸ್‌ ವಾಟರ್ ಮತ್ತು ಲಿಂಬು ರಸ ಸೇರಿಸಿ. ಸ್ವಲ್ಪ ಸಕ್ಕರೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಸವತೆಕಾಯಿ ಶರಬತ್ತು ರೆಡಿ.

ಕೋಕಮ್‌ ಜ್ಯೂಸ್‌ :
ಬೇಸಿಗೆ ಕೂಲ್‌ ಫ್ರುಟ್‌ ಎಂದೇ ಹೆಸರಾಗಿರುವ ಕೋಕಮ್‌, ದೇಹವನ್ನು ತಂಪಾಗಿಯೂ ಮತ್ತು ಹೈಡ್ರೇಟ್‌ ಆಗಿಯೂ ಇರಿಸುತ್ತದೆ. 7 ರಿಂದ 8 ಕೋಕಮ್‌ ಹಣ್ಣುಗಳನ್ನು ತೆಗೆದುಕೊಂಡು ಕತ್ತರಿಸಿ. ಅದಕ್ಕೆ ಒಂದು ಕಪ್‌ ನೀರು ಸೇರಿಸಿ 2 ರಿಂದ 3 ಗಂಟೆಗಳ ವರೆಗೆ ಹಾಗೆ ಇಡಿ. ನಂತರ ಅದನ್ನು ಸೋಸಿಕೊಳ್ಳಿ. ಅದಕ್ಕೆ ಸ್ವಲ್ಪ ಉಪ್ಪು, ಸಕ್ಕರೆ ಸೇರಿಸಿ. ಬೇಕಿದ್ದರೆ ಏಲಕ್ಕಿಯ ಪುಡಿ ಸೇರಿಸಿ. ತಾಜಾ ಇರುವಾಗಲೇ ಕುಡಿಯಿರಿ.

ಇದನ್ನೂ ಓದಿ : Sunday Special Recipe : ಮನೆಯಲ್ಲಿಯೇ ತಯಾರಿಸಿ ಸುಲಭದ ಕೇಕ್‌; ತೆಂಗಿನಕಾಯಿ–ಸೂಜಿ ರವಾ ಕೇಕ್‌

ಇದನ್ನೂ ಓದಿ : Turmeric: ಹಸಿ ಅರಿಶಿನ, ಅರಿಶಿನ ಪುಡಿಯ ನಡುವಿನ ವ್ಯತ್ಯಾಸವೇನು?: ಇದರಲ್ಲಿ ಯಾವುದು ನಿಮಗೆ ಉತ್ತಮ ಗೊತ್ತಾ?

(To beat the heat add these refreshing juices to your diet. Prepare your body for this summer)

Comments are closed.