God bless india: ನೆರವಿಗೆ ಬಂದ ಭಾರತಕ್ಕೆ ಮನದುಂಬಿ ಕೃತಜ್ಞತೆ ಸಲ್ಲಿಸಿದ ಟರ್ಕಿ: `ಆಪರೇಷನ್‌ ದೋಸ್ತ್‌’ ಗೆ ಸಿಕ್ತು ಶ್ಲಾಘನೆ

ನವದೆಹಲಿ: (God bless india) ಟರ್ಕಿ ಹಾಗೂ ಸಿರಿಯಾದಲ್ಲಿ ಫೆ.6 ರಂದು ನಡೆದ 7.8 ತೀವ್ರತೆಯ ಭೂಕಂಪಕ್ಕೆ ಉಭಯ ದೇಶಗಳ ಜನರು ಅಕ್ಷರಶಃ ನಲುಗಿ ಹೋಗಿದ್ದರು.ಭೂಕಂಪ ಸಂಭವಿಸುತ್ತಿದ್ದಂತೆ ಭಾರತ ಸರಕಾರವು ಆಪರೇಷನ್‌ ದೋಸ್ತ್‌ ಹೆಸರಲ್ಲಿ ಟರ್ಕಿ ಹಾಗೂ ಸಿರಿಯಾದ ನೆರವಿಗೆ ಧಾವಿಸಿದ್ದು, ಇದೀಗ ಟರ್ಕಿ ಸರಕಾರ ತಮ್ಮ ಸಂಕಷ್ಟದ ಸಮಯದಲ್ಲಿ ನೆರವಿಗೆ ಬಂದ ಭಾರತ ಸರಕಾರಕ್ಕೆ ಮನದುಂಬಿ ಹಾರೈಸಿದೆ.

ಒಂದೇ ದಿನ ಎರಡು ಉಭಯ ದೇಶಗಳಲ್ಲಿ ಭೂಕಂಪ ಸಂಭವಿಸಿದ್ದು, ದೇಶದೆಲ್ಲಡೆ ಕಟ್ಟಡಗಳು ಕುಸಿದು ಬಿದ್ದು, ಹಲವು ಅವಶೇಷದಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದರು, ಇನ್ನೂ ಕೂಡ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ.ಈಗಾಗಲೆ ಸಾವಿನ ಸಂಖ್ಯೆ 50 ಸಾವಿರವನ್ನೂ ದಾಟಿದ್ದು, ಸಾವು ನೋವುಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಗಳು ಇವೆ ಎಂಬ ಆತಂಕ ವ್ಯಕ್ತವಾಗುತ್ತಿದೆ.

ಇದರ ಮಧ್ಯೆ ಟರ್ಕಿ ಹಾಗೂ ಸಿರಿಯಾದಲ್ಲಿ ಭೂಕಂಪ ಸಂಭವಿಸುತ್ತಿದ್ದಂತೆ ಭಾರತ ಸರಕಾರ ಅವರ ನೆರವಿಗೆ ಧಾವಿಸಿದ್ದು, ಆಪರೇಷನ್‌ ದೋಸ್ತ್‌ ಹೆಸರಲ್ಲಿ ಕಾರ್ಯಾಚರಣೆಗಿಳಿದಿತ್ತು. ಸೇನೆಯ ನಾಲ್ಕು ಸರಕು ಸಾಗಾಣೆ ವಿಮಾನಗಳಲ್ಲಿ ಅಗತ್ಯ ಸಾಮಾಗ್ರಿಗಳನ್ನು ಕಳುಹಿಸಿಕೊಡಲಾಗಿದ್ದು, ಆಹಾರ, ಔಷದಿಗಳು, ಜೀವರಕ್ಷಕ ಸಾಧನಗಳು ಹಾಗೂ ಮೊದಲಾದವುಗಳು ಇದರಲ್ಲಿದ್ದವು. ಇದರ ಜೊತೆಗೆ ಅವಶೇಷದಡಿಗಳಲ್ಲಿ ಸಿಲುಕಿದ್ದವರನ್ನು ಹೊರತೆಗೆಯಲು ಭಾರತೀಯ ಸೈನಿಕರನ್ನು ಕೂಡ ಕಳುಹಿಸಿಕೊಡಲಾಗಿತ್ತು.

ಇದನ್ನೂ ಓದಿ : Adenovirus Cases : ಹೆಚ್ಚುತ್ತಿರುವ ಅಡೆನೊವೈರಸ್‌ ಪ್ರಕರಣ : ಪಶ್ಚಿಮ ಬಂಗಾಳದ ಜಿಲ್ಲೆಗಳಿಗೆ ಎಚ್ಚರಿಕೆ ಸೂಚಿಸಿದ ಆರೋಗ್ಯ ಇಲಾಖೆ

ಇದನ್ನೂ ಓದಿ: ಕನ್ಯಾಶ್ರಮದಲ್ಲಿ ಮಧ್ಯಾಹ್ನದ ಊಟ ಸೇವಿಸಿದ 10ನೇ ತರಗತಿ ವಿದ್ಯಾರ್ಥಿನಿ ಸಾವು: 25 ಮಂದಿ ಆಸ್ಪತ್ರೆಗೆ ದಾಖಲು

ಮರಣ ಮೃದಂಗ ಭಾರಿಸಿದ ಟರ್ಕಿಯ ಅವಶೇಷದಡಿಯಲ್ಲಿ ಸಿಲುಕಿದ್ದ ಅದೆಷ್ಟೋ ಮಂದಿಯನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸುವ ಮೂಲಕ ಭಾರತೀಯ ಸೈನಿಕರು ಜೀವ ಉಳಿಸಲು ಕಾರಣೀಕರ್ತರಾಗಿದ್ದರು. ಇದೀಗ ಇಂತಹ ಸಮಯದಲ್ಲಿ ನೆರವಿಗೆ ಬಂದ ಭಾರತಕ್ಕೆ ಟರ್ಕಿಯ ಜನತೆ ಮನದುಂಬಿ ಕೃತಜ್ಞತೆ ಸಲ್ಲಿಸಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ : Lost Pan Card : ನಿಮ್ಮ ಪ್ಯಾನ್ ಕಾರ್ಡ್ ಕಳೆದುಕೊಂಡಿದ್ದೀರಾ? ಮರು ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ ?

God bless India: Turkey thanked India for its help: Appreciation for ‘Operation Dost’

Comments are closed.