M P Renukacharya : ತಾಕತ್ ಇದ್ದರೇ ಮತಾಂತರ ವಿರೋಧಿ ವಿಧೇಯಕ ತಡೆಯಿರಿ : ಕಾಂಗ್ರೆಸ್‌ಗೆ ರೇಣುಕಾಚಾರ್ಯ ಸವಾಲು

ಬೆಳಗಾವಿ : ಒಂದೆಡೆ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಯಾಗಿದ್ದರೇ ( Anti Conversion Bill )ಇನ್ನೊಂದೆಡೆ ವಿಧೇಯಕವನ್ನು ಶತಾಯ ಗತಾಯ ವಿರೋಧಿಸಲು ಕಾಂಗ್ರೆಸ್ ಭರ್ಜರಿ ಹೋರಾಟಕ್ಕೆ ಸಿದ್ಧವಾಗಿದೆ. ಈ ಮಧ್ಯೆ ಬಿಜೆಪಿ ನಾಯಕರು ಮಸೂದೆ ಬೆಂಬಲಕ್ಕೆ ನಿಂತಿದ್ದು, ತಾಕತ್ ಇದ್ದರೇ ಮತಾಂತರ ವಿರೋಧಿ ವಿಧೇಯಕ ತಡೆಯಿರಿ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ( M P Renukacharya ) ಕಾಂಗ್ರೆಸ್ ಗೆ ಸವಾಲು ಹಾಕಿದ್ದಾರೆ. ಬೆಳಗಾವಿ ಸುವರ್ಣಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ, ನಮ್ಮ ಸರ್ಕಾರ ಕದ್ದು ಮುಚ್ಚಿ ವಿಧೇಯಕ‌ ಮಂಡನೆ ಮಾಡಿಲ್ಲ. ರಾಜಾರೋಷವಾಗಿ ಮಂಡಿಸಿದೆ. ಆದರೆ ಒಬ್ಬ ಕೆ.ಜೆ.ಜಾರ್ಜ್ ಹಾಗೂ ಸೋನಿಯಾ ಗಾಂಧಿಗೋಸ್ಕರ ಕಾಂಗ್ರೆಸ್ ಮಸೂದೆಯನ್ನು ವಿರೋಧಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಡಿ.ಕೆ.ಶಿವಕುಮಾರ್ ವಿಧೇಯಕವನ್ನು‌ಹರಿದು ಹಾಕಿದ್ದಾರೆ. ಸಿದ್ಧರಾಮಯ್ಯನವರು ವಿಧೇಯಕವನ್ನು ಕದ್ದು ಮುಚ್ಚಿ ಮಸೂದೆ ತಂದಿದ್ದಾರೆ ಎಂದು ಹೇಳ್ತಾರೆ. ಆದರೆ ನಾವು ಕದ್ದು ಮುಚ್ಚಿ ಮಸೂದೆ ಮಂಡಿಸಿಲ್ಲ. ಮತಾಂತರವನ್ನು ನಿಷೇಧಿಸಬೇಕೆಂಬ ಕಾರಣಕ್ಕೆ ರಾಜಾರೋಷವಾಗಿಯೇ ಕಾಯಿದೆ ಜಾರಿಗೆ ತರುತ್ತಿದ್ದೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ಸಿನವರು ಮೊದಲೇ ಹಿಂದೂ ವಿರೋಧಿಗಳು. ಕ್ರೈಸ್ತ್ ಮತ್ತು ಮುಸ್ಲಿಂ ಓಲೈಕೆಗೆಹೀಗೆ ಮಾಡ್ತಿದ್ದಾರೆ. ಸೋನಿಯಾಗಾಂಧಿ ಹಾಗೂ ಕೆ.ಜೆ.ಜಾರ್ಜ್ ರನ್ನು ಓಲೈಸಲು ಈ ಮಸೂದೆ ಯನ್ನು ವಿರೋಧಿಸುತ್ತಿದ್ದಾರೆ. ಮತಾಂತರ ಕಾಯ್ದೆ ವಿರೋಧಿಸುವ ಮೂಲಕ ನೀವು ಪರೋಕ್ಷವಾಗಿ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದೀರಿ ಎಂದು ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಇದು ಹಿಂದೂ ರಾಷ್ಟ್ರ. ಆದರೆಆಮಿಷ ಒಡ್ಡಿ ಹಿಂದೂಗಳನ್ನೇ ಮತಾಂತರ ಮಾಡಲು ಯತ್ನಿಸುತ್ತಿದ್ದಾರೆ. ಇದನ್ನು ತಡೆಯಲು ಮಸೂದೆ ರೂಪಿಸಲಾಗಿದೆ. ಇದನ್ನು ಭಾರತದಲ್ಲಿ ಮಂಡಿಸದೇ ಇನ್ನೇನು ಅಮೇರಿಕಾ,ಪಾಕಿಸ್ತಾನದಲ್ಲಿ ಮಂಡಿಸಲು ಆಗುತ್ತಾ? ನಮಗೆ ಹಿಂದೂಗಳ ಹಿತರಕ್ಷಣೆ ಮುಖ್ಯ ಅದಕ್ಕಾಗಿ ಮಸೂದೆ ಮಂಡಿಸಿದ್ದೇವೆ ಎಂದು ರೇಣುಕಾಚಾರ್ಯ ಮಸೂದೆ ಮಂಡನೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ಲವ್ ಜೆಹಾದ್ ನಡೆದಿದ್ದು ಎಷ್ಟೋ ಹೆಣ್ಣುಮಕ್ಕಳನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ. ಆದರೆ ಯಾವುದಾದರೂ ಮುಸ್ಲಿಂ ಹೆಣ್ಣು ಮಕ್ಕಳು ಹಿಂದೂಗಳನ್ನು ಮದುವೆಯಾಗಿದ್ದಾರಾ ಎಂದು ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ. ಸದ್ಯ ವಿಧಾನಸಭೆಯಲ್ಲಿ ಮಸೂದೆ ಮಂಡನೆಯಾಗಿದ್ದು ನಾಳೆ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ನಾಳೆ ಚರ್ಚೆ ಬಳಿಕ ವಿಧೇಯಕ ಮತಕ್ಕೆ ಹಾಕಲಿದ್ದು ಬಳಿಕ ಅಂಗೀಕಾರವಾಗಲಿದೆ. ಆದರೆ‌ ಮಸೂದೆಯನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆಗೆ ಸಿದ್ದವಾಗಿದ್ದು ಇದು ಸಂವಿಧಾನ ವಿರೋಧಿ ಕ್ರಮ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ : Anti Conversion Bill : ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾನೂನು ಜಾರಿ : ಕಾಯಿದೆಯಲ್ಲಿ ಏನಿದೆ ಗೊತ್ತಾ

ಇದನ್ನೂ ಓದಿ : ಎಂಇಎಸ್ ಪುಂಡಾಟಕ್ಕೆ ಕಾಂಗ್ರೆಸ್ ಶ್ರೀರಕ್ಷೆ: ಸರಣಿ ಟ್ವೀಟ್ ನಲ್ಲಿ ಬಿಜೆಪಿ ವಾರ್

M P Renukacharya Reaction About Anti Conversion Bill Congress Party

Comments are closed.