Weight Loss Tips : ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕೆ ? ಇಲ್ಲಿದೆ ಸುಲಭ ಪರಿಹಾರ

ಪ್ರತಿಯೊಬ್ಬ ಮನುಷ್ಯನ ತೂಕವು ಅವರವರ ಎತ್ತರಕ್ಕೆ ಸಮವಾಗಿ ಇರಬೇಕು. (Weight Loss Tips)ತೂಕದಲ್ಲಿ ಏರುಪೇರು ಕಾಣಿಸಿಕೊಂಡರೆ ಮುಂದೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ನಮ್ಮ ದೇಹದ ತೂಕವನ್ನು ಸಮತೋಲದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಹೀಗಾಗಿ ನಮ್ಮ ದೇಹಕ್ಕೆ ಅಗತ್ಯವಿರುವ ಆರೋಗ್ಯಕರವಾದ ಆಹಾರವನ್ನು ಸೇವಿಸಬೇಕು. ದಿನನಿತ್ಯ ಜೀವನದಲ್ಲಿ ಉತ್ತಮ ವ್ಯಾಯಮಗಳನ್ನು ಅನುಸರಿಕೊಳ್ಳಬೇಕು. ಉತ್ತಮ ಆಹಾರ ಪದ್ಧತಿ ಹಾಗೂ ನೀರನ್ನು ಸರಿಯಾಗಿ ಕುಡಿಯುವುನ್ನು ರೂಢಿಗೊಳಿಸಿಕೊಂಡಿರಬೇಕು. ಇನ್ನೂ ಮನೆಯಲ್ಲಿಯೇ ಹಲವು ರೀತಿಯ ಮನೆಮದ್ದುಗಳನ್ನು ಅನುಸರಿಸುವುದರಿಂದಲೂ ತೂಕವನ್ನು ಸಮತೋಲದಲ್ಲಿ ಇಟ್ಟುಕೊಳ್ಳಬಹುದಾಗಿದೆ. ಹಾಗಾದರೆ ಮನೆಯಲ್ಲಿ ತಯಾರಿಸಬಹುದಾದ ಮನೆಮದ್ದು ಇಲ್ಲಿದೆ.

ಬೇಕಾಗುವ ಸಾಮಾಗ್ರಿ :

  • ಮೆಂತೆಕಾಳು
  • ಜೀರಿಗೆ
  • ಓಮದ ಕಾಳು
  • ಸೊಂಪು

ತಯಾರಿಸುವ ವಿಧಾನ :

ಮೆಂತೆಕಾಳು, ಜೀರಿಗೆ, ಓಮದ ಕಾಳು ಮತ್ತು ಸೊಂಪುನ್ನು ಒಂದೇ ಅಳತೆಯಲ್ಲಿ(ಐದು ಟೇಬಲ್‌ ಸ್ಪೂನ್) ತೆಗೆದುಕೊಳ್ಳಬೇಕು. ನಂತರ ಎಲ್ಲಾ ಪದಾರ್ಥವನ್ನು ಗ್ಯಾಸ್‌ ಉರಿಯಲ್ಲಿ ಒಂದು ಪಾತ್ರೆಯನ್ನು ಇಟ್ಟು ಚೆನ್ನಾಗಿ ಹುರಿದುಕೊಳ್ಳಬೇಕು. ಹುರಿದುಕೊಂಡ ಎಲ್ಲಾ ಪದಾರ್ಥವನ್ನು ಚೆನ್ನಾಗಿ ತಣಿಸಿ ಒಂದು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ರುಬ್ಬಿದಾಗ ಪೌಡರ್‌ ರೂಪಕ್ಕೆ ಬರುತ್ತದೆ. ಹೀಗೆ ನುಣ್ಣಗೆ ರುಬ್ಬಿಕೊಂಡ ಪೌಡರ್‌ನ್ನು ಒಂದು ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು. ಹೀಗೆ ಶೇಖರಿಸಿ ಇಟ್ಟುಕೊಂಡ ಪೌಡರ್‌ನ್ನು 15 ದಿನ ಅಥವಾ ಒಂದು ತಿಂಗಳವರೆಗೂ ಉಪಯೋಗಿಸಬಹುದಾಗಿದೆ.

ಇದನ್ನು ಹೆಚ್ಚಾಗಿ ಖಾಲಿ ಹೊಟ್ಟೆಯಲ್ಲಿ ಉಪಯೋಗಿಸುವುದರಿಂದ ತೂಕ ಇಳಿಕೆ ಅಥವಾ ಸಮತೋಲಕ್ಕೆ ಹೆಚ್ಚು ಸೂಕ್ತವಾಗಿರುತ್ತದೆ. ಆದ್ದರಿಂದ ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಪಯೋಗಿಸಬೇಕು. ಇದನ್ನು ಬಳಸುವಾಗ ನೀರನ್ನು ಚೆನ್ನಾಗಿ ಕಾಯಿಸಿ, ನಂತರ ಒಂದು ಲೋಟ ಕಾದ ಬಿಸಿ ನೀರಿಗೆ ಅರ್ಧ ಟೇಬಲ್‌ ಸ್ಪೂನ್‌ನಷ್ಟು ಈ ಪೌಡರ್‌ನ್ನು ಹಾಕಿ ನೀರು ಕುಡಿಯುವಷ್ಟು ತಣ್ಣಗೆ ಆದ ನಂತರ ಕುಡಿಯಬೇಕು. ಹೀಗೆ ಇದನ್ನು ಕುಡಿಯುವುದರಿಂದ ಕೇವಲ ದೇಹದ ತೂಕ ಇಳಿಕೆ ಹಾಗೂ ತೂಕದ ಸಮತೋಲನದ ಜೊತೆಗೆ ಗ್ಯಾಸ್ಟ್ರಿಕ್‌ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ. ಯಾಕೆಂದರೆ ಈ ಪೌಡರ್‌ನಲ್ಲಿ ಇರುವ ನಾಲ್ಕು ಪದಾರ್ಥಗಳು ಗ್ಯಾಸ್ಟ್ರಿಕ್‌ ಸಮಸ್ಯೆಗೆ ರಾಮಬಾಣವಾಗಿದೆ.

ಇದನ್ನೂ ಓದಿ : World Sight Day 2022 : ನಿಮ್ಮ ಕಣ್ಣಿನ ದೃಷ್ಟಿಯ ಬಗ್ಗೆ ಕಾಳಜಿವಹಿಸಿ; ಕಣ್ಣಿನ ಕಾಯಿಲೆಗಳನ್ನು ತಡೆಯುವ ಆಹಾರಗಳು

ಇದನ್ನೂ ಓದಿ : Malabar Spinach:ಬಸಳೆ ಸೊಪ್ಪಿನಿಂದ ರಕ್ತಹೀನತೆ ಸಮಸ್ಯೆ ನಿವಾರಣೆ

ಇದನ್ನೂ ಓದಿ : World Arthritis Day 2022 : ಸಂಧಿವಾತ ದೂರಮಾಡುವ 5 ಬೆಸ್ಟ್‌ ಟಿಪ್ಸ್‌ : ಮೂಳೆಗಳ ಆರೋಗ್ಯ ಹೀಗೆ ಕಾಪಾಡಿಕೊಳ್ಳಿ

ಗ್ಯಾಸ್ಟ್ರಿಕ್‌ ಸಮಸ್ಯೆ ಇರುವವರು ಪ್ರತಿದಿನ ಬೆಳಿಗ್ಗೆ ಹಾಗೂ ಊಟದ ನಂತರ ಕುಡಿಯುವುದರಿಂದ ತಿಂದಿರುವಂತಹ ಆಹಾರ ಚೆನ್ನಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ. ಗ್ಯಾಸ್ಟ್ರಿಕ್‌ ಸಮಸ್ಯೆಯನ್ನು ಕೂಡ ದೂರವಿರಿಸುತ್ತದೆ.

Weight Loss Tips : Want to lose weight? Here’s an easy solution

Comments are closed.