White Sugar Vs Brown Sugar : ಕಂದು ಬಣ್ಣದ ಸಕ್ಕರೆ, ಬಿಳಿ ಸಕ್ಕರೆಗಿಂತ ಉತ್ತಮವೇ?

ಕಾಲ ಬದಲಾದಂತೆ ಜನರು ತಮ್ಮ ಆರೋಗ್ಯದ (Health) ಬಗ್ಗೆ ಕಾಳಜಿವಹಿಸುವುದು ಹೆಚ್ಚಾಗುತ್ತಿದೆ. ಕೆಲವರು ಫಿಟ್ನೆಸ್ (Fitness) ಕಾರಣದಿಂದ ಸಕ್ಕರೆ ಸೇವಿಸುವುದಿಲ್ಲ, ಕೆಲವರು ಕಂದು ಬಣ್ಣದ ಸಕ್ಕರೆ (Brown Sugar) ಬಳಸುತ್ತಾರೆ. ಕಂದು ಬಣ್ಣದ ಸಕ್ಕರೆಯನ್ನು ಹೆಚ್ಚಾಗಿ ಫಿಟ್ನೆಸ್ ಫ್ರೀಕ್ಸ್ ಇರುವವರು ಅಥವಾ ಶುಗರ್ ಸಮಸ್ಯೆ ಇರುವವರು ಮಾತ್ರ ಬಳಸುತ್ತಾರೆ. ಆದರೆ, ಈಗ ಪ್ರಶ್ನೆಯೇನೆಂದರೆ ಬಿಳಿ ಮತ್ತು ಕಂದು ಬಣ್ಣದ ಸಕ್ಕರೆಯ ನಡುವಿನ ವ್ಯತ್ಯಾಸವೇನು (White Sugar Vs Brown Sugar)? ಬಿಳಿ ಸಕ್ಕರೆಯನ್ನೇ ಬಣ್ಣ ಹಾಕಿ ಕಂದು ಬಣ್ಣ ಮಾಡುತ್ತಾರೆಯೇ ಅಥವಾ ಕಂದು ಸಕ್ಕರೆಯನ್ನು ಬೇರೆ ಯಾವುದಾದರೂ ವಸ್ತುವಿನಿಂದ ತಯಾರಿಸಲಾಗುತ್ತದೆಯೇ ಎಂಬುದು ಕೆಲವರ ಪ್ರಶ್ನೆಯಾಗಿದೆ. ಈ ಎಲ್ಲಾ ಗೊಂದಲಗಳಿಗೆ ಇಲ್ಲಿದೆ ಉತ್ತರ.

ಕಂದು ಬಣ್ಣದ ಸಕ್ಕರೆಯನ್ನು ಹೇಗೆ ತಯಾರಿಸಲಾಗುತ್ತದೆ?
ವಾಸ್ತವವಾಗಿ ಕಂದು ಸಕ್ಕರೆ ಮತ್ತು ಬಿಳಿ ಸಕ್ಕರೆ ಎರಡನ್ನೂ ಕಬ್ಬಿನಿಂದ ತಯಾರಿಸಲಾಗುತ್ತದೆ. ಅದರ ಮೂಲದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಅದರ ಪ್ರಕ್ರಿಯೆಯು ಸ್ವಲ್ಪ ವಿಭಿನ್ನವಾಗಿದೆ. ಕಂದು ಸಕ್ಕರೆಯನ್ನು ತಯಾರಿಸಲು ಮೊಲಾಸಸ್ ಅತ್ಯಂತ ಪ್ರಮುಖ ಅಂಶವಾಗಿದೆ. ಇದು ಕಬ್ಬು ಅಥವಾ ಸಕ್ಕರೆ ಬೀಟ್ ಅನ್ನು ಸಂಸ್ಕರಿಸುವಾಗ ರೂಪುಗೊಳ್ಳುವ ಒಂದು ಅಂಶವಾಗಿದೆ. ಈ ಪ್ರಕ್ರಿಯೆಯಲ್ಲಿ ಸಕ್ಕರೆ ಬೇರ್ಪಡುತ್ತದೆ ಮತ್ತು ಕಾಕಂಬಿ ಬೇರ್ಪಡುತ್ತದೆ. ಬಿಳಿ ಸಕ್ಕರೆಗೆ ಕಾಕಂಬಿ (ಮೊಲಾಸಸ್‌) ಅನ್ನು ಸೇರಿಸಿದಾಗ, ಅದು ಕಂದು ಬಣ್ಣವನ್ನು ಪಡೆಯುತ್ತದೆ ಮತ್ತು ಅದರ ಪೌಷ್ಟಿಕಾಂಶದ ಮೌಲ್ಯವೂ ಸ್ವಲ್ಪ ಹೆಚ್ಚಾಗುತ್ತದೆ. ಕಂದು ಸಕ್ಕರೆಯಲ್ಲಿರುವ ಕಾಕಂಬಿಯ ಕಾರಣ, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಸತು, ತಾಮ್ರ, ರಂಜಕದಂತಹ ಪೋಷಕಾಂಶಗಳು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗುತ್ತವೆ.

ಇದನ್ನೂ ಓದಿ: ನಿಮ್ಮ ರೇಶ್ಮೆಯಂತಹ ಕೂದಲು ಬೆಳವಣೆಗಾಗಿ ಬಳಸಿ ಪೇರಲೆ ಎಲೆ

ಕಂದು ಬಣ್ಣದ ಸಕ್ಕರೆ ನಿಜವಾಗಿಯೂ ಕಡಿಮೆ ಕ್ಯಾಲೋರಿ ಹೊಂದಿದೆಯೇ?
ಕೆಲವು ತಜ್ಞರು ಕಂದು ಬಣ್ಣದ ಸಕ್ಕರೆಯು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಎಂದು ನಂಬುತ್ತಾರೆ. ಅಮೇರಿಕಾದ ಕೃಷಿ ಇಲಾಖೆ ಮತ್ತು ಇತರ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆ ನಡೆಸಿದಾಗ, ಕಂದು ಬಣ್ಣದ ಸಕ್ಕರೆ ಮತ್ತು ಬಿಳಿ ಸಕ್ಕರೆ ಒಂದೇ ರೀತಿಯ ಕ್ಯಾಲೋರಿಗಳನ್ನು ಹೊಂದಿದೆ ಎಂದು ಕಂಡುಬಂದಿದೆ. ಈ ಎರಡರ ಜೀರ್ಣಕ್ರಿಯೆಯ ಪ್ರಕ್ರಿಯೆಯು ಒಂದೇ ಆಗಿದೆ. ವ್ಯತ್ಯಾಸವೆಂದರೆ ಕಂದು ಬಣ್ಣದ ಸಕ್ಕರೆ, ಬಿಳಿ ಸಕ್ಕರೆಗಿಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ಮಧುಮೇಹ ರೋಗಿಗಳಿಗೆ ಉತ್ತಮವಾಗಿದೆ. ಇದೂ ಸಹ ಸಿಹಿಯಾಗಿಯೇ ಇರುವುದರಿಂದ ಮಧುಮೇಹಿಗಳು ಕಂದು ಸಕ್ಕರೆಯನ್ನು ಬಹಳ ಎಚ್ಚರಿಕೆಯಿಂದಲೇ ಸೇವಿಸಬೇಕು.

ಇದನ್ನೂ ಓದಿ: ಕೂದಲಿನ ಬೆಳವಣಿಗಾಗಿ ಬಯೋಟಿನ್‌ನಂತಹ ಹೇರ್‌ ಪ್ಯಾಕ್‌ನ್ನು ಮನೆಯಲ್ಲೇ ತಯಾರಿಸಿ

(White Sugar Vs Brown Sugar. Which is best for health? Know the process of making brown sugar)

Comments are closed.