Winter And Water: ಚಳಿಗಾಲದಲ್ಲಿ ನೀವೆಷ್ಟು ನೀರು ಕುಡಿಯುತ್ತೀರಾ…

ಮಾನವನ ದೇಹವು ಶೇಕಡಾ 70 ರಷ್ಟು ನೀರಿ (Water) ನಿಂದ ಮಾಡಲ್ಪಟ್ಟಿದೆ. ದೇಹದ ಎಲ್ಲಾ ಅಂಗಾಂಗಗಳು ಸರಿಯಾಗಿ ಮತ್ತು ಉತ್ತಮವಾಗಿ ಕೆಲಸ ಮಾಡಲು ದ್ರವ (Liquid) ಪ್ರದಾರ್ಥ ಅತಿ ಅಗತ್ಯ. ಜೀವಕೋಶಗಳು, ಅಂಗಗಳು ಮತ್ತು ಅಂಗಾಂಶಗಳು ಕೆಲಸವನ್ನು ಮಾಡಲು ನೀರನ್ನು ಬಳಸಿಕೊಳ್ಳುತ್ತವೆ. ಬೇಸಿಗೆಯಲ್ಲಿ ಬೆವರು, ಜೀರ್ಣಕ್ರಿಯೆ ಮತ್ತು ಮೂತ್ರ ವಿಸರ್ಜನೆಗೆ ಬಹಳಷ್ಟು ನೀರಿನ (ದ್ರವ ಪದಾರ್ಥದ) ಅವಶ್ಯಕತೆಯಿರುತ್ತದೆ. ಡೀಹೈಡ್ರೇಷನ್‌ ಅನ್ನು ತಪ್ಪಿಸಲು ಪ್ರತಿ ದಿನ 8 ರಿಂದ 10 ಗ್ಲಾಸ್‌ ನೀರು ಕುಡಿಯಲು ವೈದ್ಯರು ಸಲಹೆ ನೀಡುತ್ತಾರೆ. ಆಯಾಸ, ನಿಶ್ಯಕ್ತಿ ಮತ್ತು ದೀರ್ಘಕಾಲದ ಕಾಯಿಲೆಗಳಿಗೆ ಡೀಹೈಡ್ರೇಷನ್‌ ಪ್ರಮುಖ ಕಾರಣವಾಗಿದೆ. ಹಾಗಾದರೆ ಚಳಿಗಾಲದಲ್ಲೂ ಸಾಕಷ್ಟು ನೀರು ಕುಡಿಯಬೇಕೆ (Winter And Water)?

ದೇಹವು ನಾವು ಸೇವಿಸುವುದಕ್ಕಿಂತ ಹೆಚ್ಚು ನೀರನ್ನು ಕಳೆದುಕೊಂಡಾಗ ಡೀಹೈಡ್ರೇಷನ್‌ (ನಿರ್ಜಲೀಕರಣ) ಸಂಭವಿಸುತ್ತದೆ. ನೀರಿನಂಶ ಕಡಿಮೆಯಾದಾಗ ನಮ್ಮ ದೇಹದಲ್ಲಿ ಸಕ್ಕರೆ ಮತ್ತು ಲವಣಗಳಂತಹ ಖನಿಜಗಳ ಪ್ರಮಾಣದಲ್ಲಿ ಏರುಪೇರಾಗುತ್ತದೆ. ಅಸಮತೋಲನ ಕಾಣಿಸುತ್ತದೆ. ನೀರಿನ ಕೊರತೆಯು ಅನೇಕ ಕಾಯಿಲೆಗಳಿಗೆ ದಾರಿಯಾಗಿದೆ.

ಡೀಹೈಡ್ರೇಷನ್‌ ಲಕ್ಷಣ ಏನು?

  • ಅತಿ ಬಾಯಾರಿಕೆ
  • ಬಾಯಿ ಒಣಗುವುದು
  • ವಿಪರೀತ ಆಯಾಸ
  • ಗಾಢ ಬಣ್ಣದ ಮತ್ತು ವಾಸನೆಯ ಮೂತ್ರ ವಿಸರ್ಜನೆ
  • ಸಾಮಾನ್ಯಕ್ಕಿಂತ ಕಡಿಮೆ ಬಾರಿ ಮೂತ್ರ ವಿಸರ್ಜನೆ ಮಾಡುವುದು

ಚಳಿಗಾಲದಲ್ಲೂ ಸಾಕಷ್ಟು ನೀರಿನ ಅವಶ್ಯಕತೆಯಿದೆಯೇ?
ತಂಪಾದ ವಾತಾವರಣವಿರುವ ಚಳಿಗಾಲದಲ್ಲಿ ಕಡಿಮೆ ಬೆವರುತ್ತದೆ. ಬೇಸಿಗೆಗೆ ಹೋಲಿಸದರೆ ದ್ರವ ಪದಾರ್ಥಗಳ ( ಪ್ರಮುಖವಾಗಿ ನೀರು) ಸೇವನೆ ಕಡಿಮೆಯಾಗಿರುತ್ತದೆ. ಚಳಿಗಾಲದಲ್ಲಿ ಹೆಚ್ಚು ಬಾಯಾರಿಕೆಯಾಗುವುದಿಲ್ಲ ಆದರೂ ಡೀಹೈಡ್ರೇಷನ್‌ ಹೆಚ್ಚಾಗಿ ಆಗುತ್ತದೆ. ಕಾರಣ ಇಷ್ಟೆ, ಸುತ್ತಲಿನ ಗಾಳಿ ಶುಷ್ಕವಾಗಿರುತ್ತದೆ, ಇದರಿಂದ ದೇಹವು ವಾತಾವರಣದಿಂದ ಹೀರಿಕೊಳ್ಳುವ ತೇವಾಂಶದ ಪ್ರಮಾಣವು ಕಡಿಮೆಯಾಗುತ್ತದೆ.

ಚಳಿಗಾಲದಲ್ಲಿ ಎಷ್ಟು ನೀರು ಕುಡಿಯಬೇಕು?
ಚಳಿಗಾಲದಲ್ಲಿ ಡೀಹೈಡ್ರೇಷನ್‌ ತಪ್ಪಿಸಲು ಸಾಕಷ್ಟು ನೀರಿನ ಅವಶ್ಯಕತೆಯಿದೆ. ಕೈ–ಕಾಲುಗಳಲ್ಲಿ ಬಿರುಕು, ತ್ವಚೆಯ ಬಿರುಕು, ತುಟಿಗಳ ಒಡೆಯುವಿಕೆಯನ್ನು ಕಡಿಮೆ ಮಾಡಲು ದೇಹಕ್ಕೆ ನೀರಿನ ಮರಪೂರೈಕೆ ಮಾಡುವುದು ಅಗತ್ಯ. ಅದಕ್ಕಾಗಿ ದಿನವಿಡೀ ಸ್ವಲ್ಪ ಸ್ವಲ್ಪ ನೀರು ಕುಡಿಯುತ್ತಿರಬೇಕು. ಕೆಲವೊಮ್ಮೆ ಬಿಸಿ ಚಹಾ, ಕಾಫಿ, ಕಷಾಯಗಳಾದರೆ, ಇನ್ನು ಕೆಲವೊಮ್ಮೆ ಸೂಪ್‌ಗಳಂತಹ ದ್ರವ ಪದಾರ್ಥ ಸೇವಿಸಿಬೇಕು. ಚಳಿ ಎಂದು ನೀರನ್ನು ತ್ಯಜಿಸುವ ಬದಲಿಗೆ, ಸ್ವಲ್ಪ ಬೆಚ್ಚಗಿನ ನೀರು ಕುಡಿಯುವುದು ಉತ್ತಮ ಎಂದು ಎಂದು ತಜ್ಞರು ಹೇಳುತ್ತಾರೆ.

ದೇಹವನ್ನು ಹೈಡ್ರೀಕರಿಸುವ ಸಲಹೆಗಳು:

  • ಚಳಿಗಾಲದಲ್ಲಿ ಹೈಡ್ರೇಟ್‌ ಆಗಿರಲು ಆ ಕಾಲದಲ್ಲಿ ಸಿಗುವ ತರಕಾರಿಗಳನ್ನು ಹೆಚ್ಚೆಚ್ಚು ಸೇವಿಸಿ. ಪ್ರೋಟೀನ್‌, ವಿಟಮಿನ್‌ಗಳನ್ನು ಹೊಂದಿರುವ ಸೂಪ್‌ ಕುಡಿಯಿರಿ. ಸೂಪ್‌ನಲ್ಲಿ ಕ್ಯಾರೆಟ್‌, ಬೀನ್ಸ್‌, ಪಾಲಕ್‌ ಸೇರಿಸಿ.
  • ಒಂದು ಗ್ಲಾಸ್‌ ಬೆಚ್ಚಗಿನ ನೀರಿಗೆ, ಜೇನುತುಪ್ಪ ಮತ್ತು ಲಿಂಬು ರಸ ಸೇರಿಸಿ ಕುಡಿಯುವುದರಿಂದ ದಿನ ಪ್ರಾರಂಭಿಸಿ. ಇದು ಇಮ್ಯನಿಟಿ ಪವರ್‌ ಅನ್ನು ಸಹ ಹೆಚ್ಚಿಸುತ್ತದೆ.
  • ನೀರಿನ ಅಂಶ ಹೆಚ್ಚಿರುವ ಮೂಸಂಬಿ, ಕಿತ್ತಳೆಗಳಂತಹ ಹಣ್ಣು ಸೇವಿಸಿ. ಅದರ ಜ್ಯೂಸ್‌ ಅನ್ನು ಕುಡಿಯಿರಿ.
  • ಗ್ರೀನ್‌ ಟೀ ಕುಡಿಯಿರಿ. ಇದು ಫ್ರೀ ರ್‍ಯಾಡಿಕಲ್‌ಗಳನ್ನು ದೇಹದಿಂದ ಹೊರಹೋಗುವಂತೆ ಮಾಡುತ್ತದೆ.

ಇದನ್ನೂ ಓದಿ : Winter Care : ಚಳಿಗಾಲದಲ್ಲಿ ನಿಮ್ಮ ಮಕ್ಕಳಿಗೆ ಇವುಗಳನ್ನು ಕೊಡಿ; ರೋಗನಿರೋಧಕ ಶಕ್ತಿ ಹೆಚ್ಚಿಸಿ

ಇದನ್ನೂ ಓದಿ : Gooseberry Benefits: ಹುಳಿ–ಸಿಹಿ ರುಚಿ ಹೊಂದಿರುವ ನೆಲ್ಲಿಕಾಯಿಯನ್ನು ಮಧುಮೇಹಿಗಳು ತಿನ್ನಬಹುದಾ…

(Winter And Water how much water is needed in winter)

Comments are closed.