World Liver Day 2023: ಫ್ಯಾಟಿ ಲಿವರ್‌ ಸಮಸ್ಯೆ ಎದುರಿಸಲು ಸಹಾಯ ಮಾಡುವ ಆಹಾರಗಳಿವು; ತಪ್ಪದೇ ನಿಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಿ

World Liver Day 2023: ಇತ್ತೀಚಿನ ದಿನಗಳಲ್ಲಿ ಲಿವರ್‌ ಸಮಸ್ಯೆ ಹಲವರನ್ನು ಕಾಡುತ್ತಿದೆ. ದೇಹದಲ್ಲಿ ನಡೆಯುವ ಜೀರ್ಣಕ್ರಿಯೆಗೆ ನೆರವಾಗುವ ಪ್ರಮುಖ ಅಂಗ ಲಿವರ್‌. ಫ್ಯಾಟಿ ಲಿವರ್‌ ಖಾಯಿಲೆ ಎಂದರೆ ಲಿವರ್‌ನ ಕೋಶಗಳ ಒಳಗಡೆ ಕೊಬ್ಬು ಸಂಗ್ರಹಣೆಯಾಗುವ ಸ್ಥಿತಿಯಾಗಿದೆ. ಇದು ಹೆಚ್ಚಾಗಿ ಅಲ್ಕೋಹಾಲ್‌ ಸೇವನೆ ಮಾಡದಿರುವವರಲ್ಲಿ ಕಂಡುಬರುತ್ತಿದೆ. ಅದಕ್ಕೆ ಎರಡು ಕಾರಣಗಳು: ಮೊದಲನೆಯದು ಕಳಪೆ ಆಹಾರ ಸೇವನೆ, ಎರಡನೇಯದು ಗ್ಯಾಸ್ಟೋಇಂಟಸ್ಟೆನಲ್‌ ತೊಂದರೆ. ಇದು ಕೆಲವು ಚಯಾಪಚಯ ಕ್ರಿಯೆಗಳ ಕ್ಷೀಣಿಸಿದಾಗಲೂ ಕಾಣಿಸುತ್ತದೆ. ದಿನನಿತ್ಯದ ಆಹಾರದಲ್ಲಿ ಕೆಲವು ಆಹಾರಗಳನ್ನು ಸೇವಿಸುವುದರಿಂದ ಈ ಸಮಸ್ಯೆಯನ್ನು ಎದುರಿಸಬಹುದು.

ನೀವು ಫ್ಯಾಟಿ ಲಿವರ್‌ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಕೆಳಗಿನ ಆಹಾರಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಿ:

  1. ದ್ವಿದಳ ಧಾನ್ಯಗಳು :
    ದ್ವಿದಳ ಧಾನ್ಯಗಳಾದ ಬೀನ್ಸ್‌, ಕಡಲೆ ಮತ್ತು ಕಿಡ್ನಿ ಬೀನ್ಸ್‌ ತಿನ್ನುವುದರಿಂದ ಫ್ಯಾಟಿ ಲಿವರ್‌ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ದ್ವಿದಳ ಧಾನ್ಯಗಳು ಸ್ಯಾಚುರೇಟೆಡ್‌ ಫ್ಯಾಟ್‌ ಅನ್ನು ಹೊಂದಿರುವುದಿಲ್ಲ. ಅವು ನಾರಿನಾಂಶದಿಂದ ಕೂಡಿರುತ್ತದೆ. ಇದು ಲಿವರ್‌ನ ಕಾರ್ಯವನ್ನು ಹೆಚ್ಚಿಸಲು ಮತ್ತು ಸುಧಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Summer Diet Plan For Kids : ಬೇಸಿಗೆಯ ಬಿಸಿಲಿನಿಂದ ಮಕ್ಕಳನ್ನು ಕಾಪಾಡಲು ಈ ಆಹಾರಗಳನ್ನು ನೀಡಿ…

  1. ಧಾನ್ಯಗಳು :
    ಫ್ಯಾಟಿ ಲಿವರ್‌ ಸಮಸ್ಯೆಗೆ ಧಾನ್ಯಗಳ ಸೇವನೆಯು ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಇದು ಅತಿ ಹೆಚ್ಚಿನ ಫೈಬರ್‌ ಅಂಶವನ್ನು ಹೊಂದಿದೆ. ಇದು ಯಕೃತ್ತಿನ ಜೀವಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದಲ್ಲದೆ, ಇದು ಯಕೃತ್ತಿನ ಕಾರ್ಯನಿರ್ವಹಣೆಯನ್ನು ವೇಗಗೊಳಿಸುತ್ತದೆ ಮತ್ತು ಚಯಾಪಚಯ ಕ್ರಿಯೆಯಲ್ಲಿಯ ನ್ಯೂನ್ಯತೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ಲಿವರ್‌ನಲ್ಲಿ ಫ್ಯಾಟ್‌ ಶೇಖರಣೆಯನ್ನು ತಡೆಯುತ್ತದೆ.
  2. ಆವಕಾಡೊಗಳು:
    ಆವಕಾಡೊ ಸೇವನೆಯು ಲಿವರ್ ಡಿಟಾಕ್ಸ್‌ಗೆ ಸಹಾಯ ಮಾಡುತ್ತದೆ. ಇದು ಯಕೃತ್ತಿನ ಕೋಶಗಳ ಕೆಲಸವನ್ನು ವೇಗಗೊಳಿಸುತ್ತದೆ ಮತ್ತು ಕೆಲವು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ. ಇದರ ಹೊರತಾಗಿ, ಅದರ ಉತ್ಕರ್ಷಣ ನಿರೋಧಕಗಳು ಕೊಬ್ಬನ್ನು ಕರಗಿಸುವುದರೊಂದಿಗೆ, ಅದರ ಕಣಗಳಿಗೆ ಅಂಟಿಕೊಳ್ಳುತ್ತವೆ ಮತ್ತು ಅದನ್ನು ನೀರಿನ ಮೂಲಕ ಹೊರಹಾಕಲು ಸಹಾಯ ಮಾಡುತ್ತದೆ.
  1. ಸೂರ್ಯಕಾಂತಿ ಬೀಜಗಳು:
    ವಿಟಮಿನ್ ಇ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದ್ದು ಅದು ಯಕೃತ್ತನ್ನು ಹಾನಿಯಿಂದ ರಕ್ಷಿಸುತ್ತದೆ. ನೀವು ಸೂರ್ಯಕಾಂತಿ ಬೀಜಗಳನ್ನು ಸೇವಿಸಿದಾಗ, ಅವು ನಿಮ್ಮ ದೇಹದಲ್ಲಿ ಕೊಬ್ಬಿನ ಚಯಾಪಚಯವನ್ನು ವೇಗಗೊಳಿಸುತ್ತದೆ ಮತ್ತು ಕೊಬ್ಬನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಯನ್ನು ತಡೆಯುತ್ತದೆ. ಆದ್ದರಿಂದ, ನಿಮ್ಮ ಲಿವರ್‌ ಆರೋಗ್ಯಕರವಾಗಿರಲು ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸಿಕೊಳ್ಳಿ.

ಇದನ್ನೂ ಓದಿ :Sprouted Seeds : ನಿಮಗೆ ಪ್ರೊಟೀನ್‌ ಅಗತ್ಯವಿದೆಯೇ; ಹಾಗಾದರೆ ಮೊಳಕೆಯೊಡೆದ ಕಾಳು ತಿನ್ನಿ

(World Liver Day 2023. Add these foods to your daily diet to lower the risk of fatty liver.)

Comments are closed.