Yoga For Children : ನಿಮ್ಮ ಮಕ್ಕಳ ಬುದ್ಧಿಮಟ್ಟ ಹೆಚ್ಚಬೇಕೆ? ಈ ಐದು ಯೋಗಾಸನ ಹೇಳಿ ಕೊಡಿ

ಶಾಲೆಗಳು ಪುನಃ ಪ್ರಾರಂಭವಾಗಿದೆ, ಚಿಕ್ಕ ಮಕ್ಕಳು ಆಫ್‌ ಲೈನ್‌ ಕ್ಲಾಸಿಗೆ ನಿಧಾನವಾಗಿ ಮರಳುತ್ತಿದ್ದಾರೆ. ಆದರೆ ಕೆಲವು ಮಕ್ಕಳು ಎರಡು ವರ್ಷಗಳ ನಂತರ ಶಾಲೆಗೆ ಹೋಗುತ್ತಿರುವುದರಿಂದ ಖಿನ್ನತೆ ಎದುರಿಸುತ್ತಿದ್ದಾರೆ. ಖಿನ್ನತೆ ಹೋಗಲಾಡಿಸಿ ಅವರ ಮನಸ್ಸನ್ನು ಶಾಂತಗೊಳಿಸಲು ಯೋಗ (Yoga For Children) ಒಂದು ಉತ್ತಮ ದಾರಿಯಾಗಿದೆ. ಮಕ್ಕಳೂ ಸಹ ಕಾಲ ಕಾಲಕ್ಕೆ ಖಿನ್ನತೆ, ಒತ್ತಡ, ಗೊಂದಲ, ಪ್ರೇರಣೆಯ ಕೊರತೆ ಎದುರಿಸುತ್ತಿರುತ್ತಾರೆ. ಮಕ್ಕಳಿಗೆ ಯೋಗ ಹೇಳಿಕೊಡಿ ಈ ರೀತಿಯ ತೊಂದರೆಗಳಿಂದ ಹೊರ ಬರಲು ಸಹಾಯಮಾಡಿ ಎಂದು ಆಯುರ್ವೇದ ತಜ್ಞೆ ನಿಕಿತಾ ಕೋಹ್ಲಿ ಅವರು ಹೇಳುತ್ತಾರೆ.

ಇದನ್ನೂ ಓದಿ: Mental Health Self Care : ಮಾನಸಿಕ ಆರೋಗ್ಯ ಚೆನ್ನಾಗಿರಲು ನಿಮಗೆ ನೀವೇ ಸಹಾಯ ಮಾಡಿಕೊಳ್ಳಿ! ಇಲ್ಲಿವೆ ಸರಳ ಉಪಾಯಗಳು

ಮಕ್ಕಳ ಮಾನಸಿಕ ಸ್ಥಿತಿ ಸುಧಾರಿಸಲು ಐದು ಉತ್ತಮ ಯೋಗಾ ಆಸನಗಳು

1. ಭುಜಂಗಾಸನ: ಭುಜಂಗಾಸನ ಅಥವಾ ಕೋಬ್ರಾ ಪೋಸ್‌ ಇದು ನರಮಂಡಲವನ್ನು ಉತ್ತೇಜಿಸಿ ಮೆಮೋರಿ ಪಾವರ್‌ ಹೆಚ್ಚಿಸುತ್ತದೆ.

2. ವೃಕ್ಷಾಸನ :ವೃಕ್ಷಾಸನ ಅಥವಾ ಟ್ರೀ ಪೋಸ್‌ ಇದು ಮೆದುಳನ್ನು ಉತ್ತೇಜಿಸಿ, ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ. ಅಷ್ಟೇ ಅಲ್ಲದೆ ಏಕಾಗ್ರತೆಯನ್ನೂ ಹೆಚ್ಚಿಸುತ್ತದೆ.

3. ಪಶ್ಚಿಮೋತ್ತನಾಸನ : ಪಶ್ಚಿಮೋತ್ತನಾಸನ ಅಥವಾ ಸೀಟೆಡ್‌ ಫಾರ್ವರ್ಡ ಬೆಂಡ್‌ ಪೋಸ್‌ ಇದು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಮಿದುಳಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸಿ ಮಿದುಳಿನ ಕಾರ್ಯಕ್ಷಮತೆ ಹೆಚ್ಚಿಸುತ್ತದೆ.

4. ಧನುರ್‌ಆಸನ : ಧನುರ್‌ ಆಸನ ಅಥವಾ ಬೋ ಪೋಸ್‌ ಇದು ಮಿದುಳಿಗೆ ಸಂಪರ್ಕ ಕಲ್ಪಿಸುವ ನರ ವ್ಯೂಹವನ್ನು ಉತ್ತೇಜಿಸಿ, ನಿನಪಿನ ಶಕ್ತಿ ಹೆಚ್ಚಿಸುತ್ತದೆ.

5. ಸೇತುಭಂದಾಸನ : ಸೇತುಭಂದಾಸನ ಅಥವಾ ಬ್ರಿಡ್ಜ್‌ ಪೋಸ್‌ ಇದು ಮೆದುಳಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಮಕ್ಕಳ ಬುದ್ಧಿ ಮಟ್ಟ ಹೆಚ್ಚಾಗುವಂತೆ ಮಾಡಿ ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯಮಾಡುತ್ತದೆ.

ಇದನ್ನೂ ಓದಿ : Health Apps For Women: ಮಹಿಳೆಯರೇ ನಿಮ್ಮ ಆರೋಗ್ಯದ ಸುರಕ್ಷತೆಗೆ ಈ ಆ್ಯಪ್‌ಗಳನ್ನು ಬಳಸಿ

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

(Yoga For Children These 5 yoga asanas to boost your children s mental health)

Comments are closed.