ಬಾಹ್ಯಾಕಾಶದಲ್ಲಿ ಭಾರತದ ಖಾಸಗಿ ಸಂಸ್ಥೆಯ ಕಮಾಲ್: ಶತ್ರು ಉಪಗ್ರಹಗಳ ಮೇಲೆ ಕಣ್ಣಿಡುವ ಸಾಮರ್ಥ್ಯ ಸಾಬೀತು!
Azista Industries Private Limited | In-Orbit Spying Capability: ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ಮಹತ್ತರ ಮೈಲಿಗಲ್ಲು ಸ್ಥಾಪನೆಯಾಗಿದೆ. ಅಹಮದಾಬಾದ್ ಮೂಲದ ‘ಅಜಿಸ್ಟಾ ಇಂಡಸ್ಟ್ರೀಸ್’ ತನ್ನ ‘AFR’ ಎಂಬ ಉಪಗ್ರಹದ ಮೂಲಕ ಬಾಹ್ಯಾಕಾಶದಲ್ಲಿ ಚಲಿಸುತ್ತಿರುವ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ISS) ಚಿತ್ರಗಳನ್ನು ಯಶಸ್ವಿಯಾಗಿ ಸೆರೆಹಿಡಿದಿದೆ.
ಒಂದು ಉಪಗ್ರಹವು ಕಕ್ಷೆಯಲ್ಲಿರುವ ಮತ್ತೊಂದು ವಸ್ತುವನ್ನು ಫೋಟೋ ತೆಗೆಯುವ ಈ ತಂತ್ರಜ್ಞಾನವನ್ನು ‘ಇನ್-ಆರ್ಬಿಟ್ ಸ್ನೂಪಿಂಗ್’ ಅಥವಾ ‘ನಾನ್-ಅರ್ಥ್ ಇಮೇಜಿಂಗ್’ ಎಂದು ಕರೆಯಲಾಗುತ್ತದೆ. ಭಾರತದ ಖಾಸಗಿ ಕಂಪನಿಯೊಂದು ಇಂತಹ ಸಾಧನೆ ಮಾಡಿರುವುದು ಇದೇ ಮೊದಲು.
ಫೆಬ್ರವರಿ 3 ರಂದು ನಡೆದ ಈ ಪರೀಕ್ಷೆಯಲ್ಲಿ, ಅಜಿಸ್ಟಾ ಕಂಪನಿಯ 80 ಕೆಜಿ ತೂಕದ ಉಪಗ್ರಹವು ಸುಮಾರು 300 ಕಿಮೀ ಮತ್ತು 245 ಕಿಮೀ ದೂರದಿಂದ ಐಎಸ್‌ಎಸ್‌ನ 15 ಸ್ಪಷ್ಟ ಚಿತ್ರಗಳನ್ನು ತೆಗೆದಿದೆ. ಅತೀ ವೇಗವಾಗಿ ಚಲಿಸುವ ವಸ್ತುಗಳನ್ನು ಗುರುತಿಸಿ ಟ್ರ್ಯಾಕ್ ಮಾಡುವ ತನ್ನ ಸಾಮರ್ಥ್ಯವನ್ನು ಕಂಪನಿ ಈ ಮೂಲಕ ಸಾಬೀತುಪಡಿಸಿದೆ.
ಅಭಿಪ್ರಾಯ: ಜ್ಯೋತಿಷಿ ಕಮಲಾಕರ್ ಭಟ್-ಸುಚಿತ್ರಾ ನಾಯ್ಕ್ ಪ್ರಕರಣ ಆಧುನಿಕ ಸಮಾಜದ ನೈತಿಕ ಪತನಕ್ಕೆ ಹಿಡಿದ ಕೈಗನ್ನಡಿ
ಬಾಹ್ಯಾಕಾಶದಲ್ಲಿ ಶತ್ರು ರಾಷ್ಟ್ರಗಳ ಉಪಗ್ರಹಗಳ ಮೇಲೆ ಕಣ್ಣಿಡಲು ಮತ್ತು ಭಾರತದ ಉಪಗ್ರಹಗಳಿಗೆ ಎದುರಾಗುವ ಭೀತಿಗಳನ್ನು ಪತ್ತೆಹಚ್ಚಲು ಈ ತಂತ್ರಜ್ಞಾನ ಬಹಳ ಮುಖ್ಯವಾಗಿದೆ. ಪ್ರಸ್ತುತ ಭಾರತವು 50ಕ್ಕೂ ಹೆಚ್ಚು ಉಪಗ್ರಹಗಳನ್ನು ಹೊಂದಿದ್ದು, ಅವುಗಳ ರಕ್ಷಣೆಗೆ ಈ ‘ಬಾಹ್ಯಾಕಾಶ ಜಾಗೃತಿ’ (Space Situational Awareness) ಅಗತ್ಯವಾಗಿದೆ.
ಈ ಮೊದಲು ಇಸ್ರೋ (ISRO) ಮಾತ್ರ ಇಂತಹ ಸಂಕೀರ್ಣ ಪ್ರಯೋಗಗಳನ್ನು ಮಾಡುತ್ತಿತ್ತು. ಈಗ ಖಾಸಗಿ ಸಂಸ್ಥೆಯೂ ಈ ರಂಗಕ್ಕೆ ಕಾಲಿಟ್ಟಿರುವುದು ಭಾರತದ ಬಾಹ್ಯಾಕಾಶ ಶಕ್ತಿಯನ್ನು ಹೆಚ್ಚಿಸಿದೆ. ಅಷ್ಟೇ ಅಲ್ಲದೆ, ಭವಿಷ್ಯದಲ್ಲಿ ಕ್ಷಿಪಣಿಗಳನ್ನು ಪತ್ತೆಹಚ್ಚಲು ಸಹ ಈ ತಂತ್ರಜ್ಞಾನ ನೆರವಾಗಲಿದೆ.



