30 ವರ್ಷಗಳಿಂದ ಚುನಾವಣೆಯನ್ನೇ..! ದೀರ್ಘಾವಧಿಯ ಬಿಹಾರ ಸಿಎಂ ನಿತೀಶ್​ ಕುಮಾರ್​ ಅಚ್ಚರಿಯ ವಿಚಾರವಿದು

Nitish Kumar: ಬಿಹಾರದ ವಿಧಾನಸಭಾ ಚುನಾವಣೆಯ ಗೆಲುವಿನ ಘೋಷಣೆಯಾಗಿದ್ದು ನಿತೀಶ್​ ಕುಮಾರ್​ ಸಿಎಂ ಸ್ಥಾನದಲ್ಲಿ ತಮ್ಮ ಹೆಸರನ್ನು ಭದ್ರ ಮಾಡಿಕೊಂಡಿದ್ದಾರೆ. ಬಿಹಾರದ ಅತ್ಯಂತ ದೀರ್ಘಾವಧಿಯ ಸಿಎಂ ಎನಿಸಿರುವ ನಿತೀಶ್​ ಕುಮಾರ್​ ಅವರ ಬಗ್ಗೆ ಅಚ್ಚರಿಯ ವಿಚಾರವೊಂದಿದೆ. ಅದೇನೆಂದರೆ ಇವರು ಕಳೆದ 30 ವರ್ಷಗಳಿಂದ ಯಾವುದೇ ಚುನಾವಣೆಗಳನ್ನು ಎದುರಿಸಿಯೇ ಇಲ್ಲವಂತೆ..!
ಹೌದು..! ಬಿಹಾರ ಸಿಎಂ ನಿತೀಶ್​ ಕುಮಾರ್​ ಕೊನೆಯ ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದು 1985ರಲ್ಲಿ. ಇದಾದ ಬಳಿಕ ಒಂದು ಬಾರಿ ಮಾತ್ರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್​ ಕುಮಾರ್​ ಸ್ಪರ್ಧೆ ಮಾಡಿದ್ದಾರೆ. 1995ರಲ್ಲಿಯೂ ಶಾಸಕರಾಗಿದ್ದ ನಿತೀಶ್​ ಕುಮಾರ್​ ಶಾಸಕ ಸ್ಥಾನವನ್ನು ಬಿಟ್ಟು ಲೋಕಸಭಾ ಸಂಸದರಾಗಿ ಮುಂದುವರಿಯುವ ನಿರ್ಧಾರ ಕೈಗೊಂಡಿದ್ದರು. ಇದಾದ ಬಳಿಕ ಮುಂದಿನ ಮೂರು ದಶಕಗಳಿಂದಲೂ ಯಾವುದೇ ಚುನಾವಣೆಗಳಿಗೂ ಸ್ಪರ್ಧಿಸದ ನಿತೀಶ್​ ಕುಮಾರ್ ರಾಜ್ಯ ವಿಧಾನಸಭಾ ಸದಸ್ಯರಾಗಿಯೇ ಉಳಿದುಕೊಂಡಿದ್ದಾರೆ.

ವಿಧಾನಪರಿಷತ್ತನ್ನು ಆಯ್ಕೆಮಾಡಿಕೊಳ್ಳುವ ರಾಜಕಾರಣಿಗಳ ಸಂಖ್ಯೆ ಕಡಿಮೆ. ಕ್ಷೇತ್ರಕ್ಕಾಗಿ ಜಿದ್ದಾಜಿದ್ದು ನಡೆಸುವ ರಾಜಕಾರಣಿಗಳ ನಡುವೆ ನಿತೀಶ್​ ಕುಮಾರ್​ರ ಈ ನಡೆ ನಿಜಕ್ಕೂ ಆಶ್ಚರ್ಯ ಎನಿಸುತ್ತದೆ.

2000ನೇ ಇಸ್ವಿಯಲ್ಲಿ ಮೊದಲ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದಾಗಲೂ ನಿತೀಶ್​ ಕುಮಾರ್​ ಶಾಸಕರಾಗಿರಲಿಲ್ಲ. ಆದರೆ ಎಂಟೇ ದಿನದಲ್ಲಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನಿಡಬೇಕಾಗಿ ಬಂತು. ಇದಾದ ಬಳಿಕ 2005ರಲ್ಲಿಯೂ ಅವರು ವಿಧಾನಸಭಾ ಚುನಾವಣೆಯನ್ನು ಸ್ಪರ್ಧಿಸದೇ ಮುಖ್ಯಮಂತ್ರಿಗಳಾದರು. ಇದಾದ ಬಳಿಕ ವಿಧಾನಪರಿಷತ್​ ಸದಸ್ಯರಾದರು. ಅಂದಿನಿಂದ ಇಂದಿನವರೆಗೂ ನಿತೀಶ್​ ಕುಮಾರ್​ ಈ ಮಾರ್ಗದ ಮೂಲಕವೇ ಬಿಹಾರದ ಮುಖ್ಯಮಂತ್ರಿಯಾಗುತ್ತಿದ್ದಾರೆ.

ಬಿಹಾರದಲ್ಲಿ ದ್ವಿಸದಸ್ಯ ಶಾಸಕಾಂಗ ವ್ಯವಸ್ಥೆಯಿಂದೆ. ಹೀಗಾಗಿ ಇಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಬಳಿಕವೇ ಮುಖ್ಯಮಂತ್ರಿ ಸ್ಥಾನ ಅಲಂಕರಿಸಬೇಕು ಎಂಬ ನಿಯಮ ಇರುವುದಿಲ್ಲ. ವಿಧಾನಪರಿಷತ್ತಿನ ಸದಸ್ಯನಾಗಿಯೂ ಸಿಎಂ ಸ್ಥಾನ ತಮ್ಮದಾಗಿಸಿಕೊಳ್ಳಬಹುದು. ಹೀಗಾಗಿ ಈ ರಾಜಕೀಯ ಲಾಭವನ್ನೇ ನಿತೀಶ್​ ಕುಮಾರ್​ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಡಿಕೆಶಿಗೆ ಫಿಕ್ಸ್: ನಾನು ಮೆಂಟಲಿ ಫಿಟ್ ಇದ್ದೇನೆ ಅಂದಿದ್ದೇಕೆ ಬಂಡೆ…!?

ಒಮ್ಮೆ ಈ ವಿಚಾರವಾಗಿ ಮಾತನಾಡಿದ್ದ ಅವರು, ನಾನು ಯಾರದ್ದೋ ಬಲವಂತದಿಂದ ಈ ರೀತಿ ಮಾಡುತ್ತಿಲ್ಲ. ನನಗೆ ಮೇಲ್ಮನೆ ಮೇಲೆ ಅಪಾರ ಗೌರವವಿದೆ. ಹೀಗಾಗಿ ಸ್ವ ಇಚ್ಛೆಯಿಂದ ನಾನು ಎಂಎಲ್​ಸಿ ಆಗುತ್ತಿದ್ದೇನೆ. ಆ ಮೂಲಕ ಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಿದ್ದೇನೆ ಎಂದಿದ್ದರು.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories