ಭಾರತವೇ ಈಗ ‘ಹಾಟ್ ಸ್ಪಾಟ್’: ವಿಶ್ವದ ನೂರು ಅತಿ ಹೆಚ್ಚು ತಾಪಮಾನದ ನಗರಗಳಲ್ಲಿ 98 ನಮ್ಮವೇ!

ಜಗತ್ತಿನ ಅತೀ ಹೆಚ್ಚು ತಾಪಮಾನ ಹೊಂದಿರುವ ವಿಶ್ವದ 100 ನಗರಗಳ ಪಟ್ಟಿಯಲ್ಲಿ ಭಾರತದ 98 ನಗರಗಳು ಸ್ಥಾನ ಪಡೆದಿವೆ.

ಈ ಬಾರಿಯ ಬೇಸಿಗೆಯ ಧಗೆಗೆ ಸಂಪೂರ್ಣ ಭಾರತವೇ ನಿಗಿನಿಗಿ ಕೆಂಡವಾಗಿದೆ. ಹೆಚ್ಚುತ್ತಿರುವ ಹೀಟ್​ ವೇವ್​ನಿಂದಾಗಿ ಅಲ್ಲಲ್ಲಿ ಸಾವು ನೋವುಗಳು ಸಂಭವಿಸುತ್ತಿದೆ. ಈ ನಡುವೆ ಜಗತ್ತಿನ ಅತೀ ಹೆಚ್ಚು ತಾಪಮಾನ ಹೊಂದಿರುವ ವಿಶ್ವದ 100 ನಗರಗಳ ಪಟ್ಟಿಯಲ್ಲಿ ಭಾರತದ 98 ನಗರಗಳು ಸ್ಥಾನ ಪಡೆದಿವೆ. ಈ ವಿಚಾರ ತೀವ್ರ ಆಘಾತಕ್ಕೆ ಕಾರಣವಾಗಿದೆ. AQI.in ನ ಮಾಹಿತಿಯ ಪ್ರಕಾರ,ಸಂಪೂರ್ಣ ವಿಶ್ವದಲ್ಲಿ ಭಾರತವೇ ದಾಖಲೆಯ ಶಾಖವನ್ನು ಅನುಭವಿಸುತ್ತಿದೆ ಎಂದು ತಿಳಿದುಬಂದಿದೆ.

ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನವನ್ನು ದಾಖಲಿಸುವ ನಗರಗಳ ಪಟ್ಟಿಯಲ್ಲಿ ಉತ್ತರ ಪ್ರದೇಶದ ಒರೈ ಮತ್ತು ಔರೈಯಾ, ರಾಜಸ್ಥಾನದ ಜೈಸಲ್ಮೇರ್ ಮತ್ತು ಫಲೋಡಿ ಸ್ಥಾನ ಪಡೆದಿದೆ. ಭಾರತದ ಅನೇಕ ನಗರಗಳಲ್ಲಿ ಪ್ರಸ್ತುತ ತಾಪಮಾನವು 40 ರಿಂದ 45 ಡಿಗ್ರಿ ಸೆಲ್ಸಿಯಸ್​ ಆಗಿದ್ದು, ಶಾಖದ ಅಲೆಯ ತೀವ್ರತೆಗೆ ಜನತೆ ಹೈರಾಣಾಗಿದ್ದಾರೆ. ಶಾಖದ ಅಲೆಗೆ ದೇಶ ವಿವಿಧೆಡೆಯಲ್ಲಿ ಸಾವು ಕೂಡ ಸಂಭವಿಸಿದೆ.

ಇದನ್ನೂ ಓದಿ : ಕೊಡಗಿನಲ್ಲಿ ಗುಂಡು ಹಾರಿಸಿಕೊಂಡು ಶಿಕ್ಷಕಿ ಆತ್ಮಹತ್ಯೆ; ಶಿಕ್ಷಕಿ ಸಾವಿಗೆ ಜನಗಣತಿ ಒತ್ತಡವೇ ಕಾರಣನಾ? 

ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯ ಭಾರತದ ಹಲವು ಪ್ರದೇಶಗಳಲ್ಲಿ ಮುಂಬರುವ ದಿನಗಳಲ್ಲಿ ಹೀಟ್​ ವೇವ್​ ಅಬ್ಬರ ಹೆಚ್ಚಾಗಲಿದೆ.ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಆಂಧ್ರಪ್ರದೇಶ ಸೇರಿದಂತೆ ಕರಾವಳಿ ರಾಜ್ಯಗಳಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣವನ್ನು ನಿರೀಕ್ಷಿಸಲಾಗಿದೆ. ಆದರೆ ಉತ್ತರ ಬಯಲು ಪ್ರದೇಶಗಳಲ್ಲಿ ರಾತ್ರಿಯ ವೇಳೆ ಬೆಚ್ಚಗಿನ ವಾತಾವರಣ ಮುಂದುವರಿಯಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

 

 

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories