Madhavi Latha : ಹೈದ್ರಾಬಾದ್‌ನಲ್ಲಿ ಹೆಚ್ಚಿದ ವೈಫ್‌ ಎಕ್ಸ್‌ಚೇಂಜ್‌ ..! ಖ್ಯಾತ ನಟಿ ಮಾಧವಿಲತಾ ಹೇಳಿಕೆ ಸಂಚಲನ

wife exchange : ಹೈದ್ರಾಬಾದ್‌ನ ಕರಾವಳ ಮುಖವನ್ನು ನಟಿ ಮಾಧವಿ ಲತಾ ಅನಾವರಣಗೊಳಿಸಿದ್ದಾರೆ. ಹೈದ್ರಾಬಾದನಲ್ಲಿ ಐಟಿ, ಕಾರ್ಪೋರೇಟ್‌ ಜಗತ್ತಿನಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಹೆಚ್ಚುತ್ತಿದೆ. ಅದ್ರಲ್ಲೂ ವೈಫ್‌ ಎಕ್ಸ್‌ಚೇಂಜ್‌ ಹೆಸರಿನಲ್ಲಿ ಪಾರ್ಟಿಗಳು ನಡೆಯುತ್ತಿವೆ ಎಂಬ ಆರೋಪ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್‌ ಆಗಿದೆ.

ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಖ್ಯಾತಿ ಪಡೆದಿರುವ ಖ್ಯಾತ ನಟಿ ಮಾಧವಿಲತಾ (madhavi latha s)ಇದೀಗ ಹೈದ್ರಾಬಾದ್‌ನಲ್ಲಿ ನಡೆಯುತ್ತಿರುವ ವಿಚಾರವೊಂದನ್ನು ಪ್ರಸ್ತಾಪಿಸುವ ಮೂಲಕ ಸಂಚಲನ ಮೂಡಿಸಿದ್ದಾರೆ. ಸಾಮಾಜಿಕ ವ್ಯವಸ್ಥೆಯ ಬಗ್ಗೆ ಅವರು ಮಾತನಾಡಿರುವ ಆ ಮಾತು ಇದೀಗ ಎಲ್ಲೆಡೆ ಬಾರೀ ಚರ್ಚೆಗೆ ಕಾರಣವಾಗಿದೆ.

ಹೈದ್ರಾಬಾದ್‌ನ ಕರಾವಳ ಮುಖವನ್ನು ನಟಿ ಮಾಧವಿ ಲತಾ ಅನಾವರಣಗೊಳಿಸಿದ್ದಾರೆ. ಹೈದ್ರಾಬಾದನಲ್ಲಿ ಐಟಿ, ಕಾರ್ಪೋರೇಟ್‌ ಜಗತ್ತಿನಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಹೆಚ್ಚುತ್ತಿದೆ. ಅದ್ರಲ್ಲೂ ವೈಫ್‌ ಎಕ್ಸ್‌ಚೇಂಜ್‌ (wife exchange ) ಹೆಸರಿನಲ್ಲಿ ಪಾರ್ಟಿಗಳು ನಡೆಯುತ್ತಿವೆ ಎಂಬ ಆರೋಪ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್‌ ಆಗಿದೆ.

ಒಂದು ಕಾಲದಲ್ಲಿ ನಗರದ ಹೊರವಲಯದಲ್ಲಿರುವ ರೆಸಾರ್ಟ್‌, ಫಾರ್ಮ್‌ಹೌಸ್‌, ಅತಿಥಿ ಗೃಹಗಳು ಇಂತಹ ಪಾರ್ಟಿಗಳಿಗೆ, ಅನೈತಿಕ ಚಟುವಟಿಕೆಗಳು ಇದೀಗ ನಗರದ ಹೃದಯ ಭಾಗದಲ್ಲಿರುವ ವಸತಿ ಪ್ರದೇಶಕ್ಕೂ ಹರಡಿದೆ. ಜನರು ಇಂತಹ ಪಾರ್ಟಿಗಳಿಗಾಗಿಯೇ ಗೇಟೆಡ್‌ ಕಮ್ಯುನಿಟಿ ಹಾಗೂ ಅಪಾರ್ಟ್‌ಮೆಂಟ್‌ಗಳನ್ನು ದುಬಾರಿ ಬೆಲೆಗೆ ಬಾಡಿಗೆಗೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪತ್ನಿಯರನ್ನು ವಿನಿಮಯ ಮಾಡಿಕೊಳ್ಳುವ ಸಂಸ್ಕೃತಿ ಹೈದ್ರಾಬಾದ್‌ ನಗರದಲ್ಲಿ ರಾತ್ರೋರಾತ್ರಿ ಸೃಷ್ಟಿಯಾದ ರೋಗವಲ್ಲ. ಇದು ಕಳೆದ ವರ್ಷಗಳಿಂದಲೂ ನಡೆಯುತ್ತಲೇ ಇದೆ. ಈ ಹಿಂದೆ ಸಾಮಾಜಿಕ ಜಾಲತಾಣ, ಸ್ಮಾರ್ಟ್‌ಪೋನ್‌ ಕೊರತೆಯಿಂದಾಗಿ ಈ ವ್ಯವಹಾರ ನಾಲ್ಕು ಗೋಡೆಯ ನಡುವೆ ನಡೆಯುತ್ತಿತ್ತು. ಆದ್ರೆ ಇದು ತಂತ್ರಜ್ಞಾನದಿಂದಾಗಿ ಕರಾಳ ರಹಸ್ಯಗಳು ಒಂದೊಂದಾಗಿ ಬಯಲಾಗುತ್ತಿದೆ ಎಂದಿದ್ದಾರೆ.

ಸಿಲಿಕಾನ್‌ ಸಿಟಿ ಬೆಂಗಳೂರು, ಮಹಾನಗರಿ ಮುಂಬೈನಲ್ಲಿ ಪಬ್‌ ಸಂಸ್ಕೃತಿ, ನೈಟ್‌ ಲೈಫ್‌, ಖಾಸಗಿ ಪಾರ್ಟಿಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಆದರೆ ಹೈದ್ರಾಬಾದ್‌ನಲ್ಲಿಯೂ ಇಂತಹದ್ದೇ ಬಿಗಿ ಕ್ರಮಕೈಗೊಳ್ಳಬೇಕು. ಅನುಮಾನಾಸ್ಪದವಾಗಿ ಇರುವು ಫ್ಲ್ಯಾಟ್‌ಗಳ ಮೇಲೆ ಪೊಲೀಸರು ದಾಳಿ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಇನ್ನು ಸಾಮಾಜಿಕ ಮಾಧ್ಯಮಗಳಾದ ವಾಟ್ಸಾಪ್‌, ಟೆಲಿಗ್ರಾಂಗಳಂತ ಆಪ್‌ಗಳ ಮೂಲಕ ಹಬ್ಬದ ಸಮಯದಲ್ಲಿ ಹಳೆ ಗಂಡನಾ ? ಅನ್ನೋ ಗ್ರೂಪ್‌ಗಳನ್ನು ರಚಿಸಿ, ಪಾರ್ಟಿಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ನಟಿ ಮಾಧವಿ ಲತಾ ಈ ಕರಾಳ ಸತ್ಯವನ್ನು ಬಯಲು ಮಾಡಿದ್ದಾರೆ.

ಆದರೆ ಮಾಧವಿ ಲತಾ ಅವರು ಮಾಡಿರುವ ಆರೋಪಗಳ ಕುರಿತು ಅಧಿಕೃತವಾಗಿ ಯಾವುದೇ ಪ್ರಕರಣ ದಾಖಲಾದ ಉದಾಹರಣೆಯಿಲ್ಲ. ಆದರೆ ನಟಿಯ ಹೇಳಿಕೆ ಆಧಾರದ ಮೇಲೆ ಕಟ್ಟಿನಿಟ್ಟಿನ ಆದೇಶ ಜಾರಿ ಮಾಡುವ ಸಾಧ್ಯತೆಯೂ ಇದೆ.

madhavi latha shocking comments on wife exchange in hyderabad

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.