manika vishwakarma : ಮಿಸ್ ಯೂನಿವರ್ಸ್ 2025 ಸ್ಪರ್ಧೆಗೆ ಮಣಿಕಾ ವಿಶ್ವಕರ್ಮ

ಮಿಸ್‌ ಯೂನಿವರ್ಸ್‌ ಸ್ಪರ್ಧೆಗೆ ಮಿಸ್ ಯೂನಿವರ್ಸ್ ಇಂಡಿಯಾ 2025 ಕಿರೀಟ ಮುಡಿಗೇರಿಸಿಕೊಂಡಿರುವ ಮಣಿಕಾ ವಿಶ್ವಕರ್ಮ (manika vishwakarma) ಅವರು ಆಯ್ಕೆಯಾಗಿದ್ದಾರೆ. 2025ರ ಅಗಸ್ಟ್‌ 18ರಂದು ಜೈಪುರದಲ್ಲಿ ನಡೆದ ಮಣಿಕಾ ವಿಶ್ವಕರ್ಮ ಅವರು ಮಿಸ್‌ ಯೂನಿವರ್ಸ್‌ ಇಂಡಿಯಾ 2025 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.
ಇದೀಘ

ಮಣಿಕಾ ವಿಶ್ವಕರ್ಮ ಅವರು ನವೆಂಬರ್ 21 2025 ರಂದು ನಡೆಯಲಿರುವ 74 ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. 22 ವರ್ಷದ ಮಣಿಕಾ ವಿಶ್ವಕರ್ಮ ಅವರು ಬಹುಮುಖ ಪ್ರತಿಭೆ. ರಾಜಸ್ಥಾನದ ಗಂಗಾನಗರದ ಮಣಿಕಾ ವಿಶ್ವಕರ್ಮ ಅವರು ದೆಹಲಿ ವಿಶ್ವವಿದ್ಯಾಲಯದ ಮಾತಾ ಸುಂದರಿ ಮಹಿಳಾ ಕಾಲೇಜಿನಲ್ಲಿ ರಾಜಕೀಯ ವಿಜ್ಞಾನ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ಶಾಸ್ತ್ರೀಯ ನೃತ್ಯಗಾರ್ತಿ ಆಗಿದ್ದು, ದೃಶ್ಯ ಕಲಾವಿದೆಯೂ ಹೌದು. ಅವರ ಕಲಾಕೃತಿಗಳಿಗೆ ಲಲಿತ ಕಲಾ ಅಕಾಡೆಮಿ ಮತ್ತು ಸರ್ ಜೆ. ಜೆ. ಸ್ಕೂಲ್ ಆಫ್ ಆರ್ಟ್ಸ್‌ನಂತಹ ಪ್ರತಿಷ್ಠಿತ ಸಂಸ್ಥೆಗಳಿಂದ ಮಾನ್ಯತೆ ದೊರೆತಿದೆ. ಮಣಿಕಾ ಅವರು ಎನ್‌ಸಿಸಿ (ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್) ಪದವೀಧರೆಯಾಗಿದ್ದಾರೆ ಮತ್ತು ‘ನ್ಯೂರೋನೋವಾ’ ಎಂಬ ಉಪಕ್ರಮದ ಸಂಸ್ಥಾಪಕಿಯಾಗಿದ್ದಾರೆ.

Manika Vishwakarma for Miss Universe 2025 competition

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories