ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನಿರಾಕರಣೆ: ಚಲಿಸುವ ರೈಲಿನಿಂದ ಜಿಗಿದು SSLC ವಿದ್ಯಾರ್ಥಿನಿ ಆತ್ಮಹತ್ಯೆ

Patna SSLC student died: "ನನ್ನ ಭವಿಷ್ಯದ ದೃಷ್ಟಿಯಿಂದ ಈ ಪರೀಕ್ಷೆ ಬಹಳ ಮುಖ್ಯ, ಪರೀಕ್ಷೆ ಶುರುವಾಗಲು ಇನ್ನೂ 15 ನಿಮಿಷ ಬಾಕಿ ಇದೆ, ದಯವಿಟ್ಟು ಒಳಗೆ ಬಿಡಿ" ಎಂದು ಕೋಮಲ್ ಪರೀಕ್ಷಾ ಕೇಂದ್ರದ ಸಿಬ್ಬಂದಿಯ ಬಳಿ ಅಂಗಲಾಚಿದ್ದಾಳೆ. ಆದರೂ ಸಿಬ್ಬಂದಿ ಮನ ಕರಗಲಿಲ್ಲ, ಆಕೆಗೆ ಪ್ರವೇಶ ನೀಡಲಿಲ್ಲ.

patna sslc student died by suicide because of exam hall entry denied

Patna SSLC student died | India News: ಪಟ್ನಾ: ಕೇವಲ 15 ನಿಮಿಷ ತಡವಾಗಿ ಬಂದ ಕಾರಣಕ್ಕೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಮನನೊಂದ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಚಲಿಸುವ ರೈಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬಿಹಾರದ ಪಟ್ನಾದಲ್ಲಿ ನಡೆದಿದೆ.

ನಡೆದಿದ್ದೇನು?

ಕೋಮಲ್ ಕುಮಾರಿ ಎಂಬ ವಿದ್ಯಾರ್ಥಿನಿ ಬುಧವಾರ ತನ್ನ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಸಜ್ಜಾಗಿದ್ದಳು. ಪರೀಕ್ಷಾ ಕೇಂದ್ರಕ್ಕೆ ಬೆಳಗ್ಗೆ 9 ಗಂಟೆಗೆ ವರದಿ ಮಾಡಿಕೊಳ್ಳಬೇಕಿತ್ತು. ಆದರೆ, ಕೋಮಲ್ 9:15ಕ್ಕೆ ಕೇಂದ್ರಕ್ಕೆ ತಲುಪಿದ್ದಳು. ನಿಯಮದಂತೆ ಗೇಟ್ ಹಾಕಿದ್ದ ಸಿಬ್ಬಂದಿ ಆಕೆಯನ್ನು ಒಳಗೆ ಬಿಡಲು ನಿರಾಕರಿಸಿದ್ದಾರೆ.

ವಿದ್ಯಾರ್ಥಿನಿಯ ಮನವಿ ಫಲಿಸಲಿಲ್ಲ

“ನನ್ನ ಭವಿಷ್ಯದ ದೃಷ್ಟಿಯಿಂದ ಈ ಪರೀಕ್ಷೆ ಬಹಳ ಮುಖ್ಯ, ಪರೀಕ್ಷೆ ಶುರುವಾಗಲು ಇನ್ನೂ 15 ನಿಮಿಷ ಬಾಕಿ ಇದೆ, ದಯವಿಟ್ಟು ಒಳಗೆ ಬಿಡಿ” ಎಂದು ಕೋಮಲ್ ಪರೀಕ್ಷಾ ಕೇಂದ್ರದ ಸಿಬ್ಬಂದಿಯ ಬಳಿ ಅಂಗಲಾಚಿದ್ದಾಳೆ. ಆದರೂ ಸಿಬ್ಬಂದಿ ಮನ ಕರಗಲಿಲ್ಲ, ಆಕೆಗೆ ಪ್ರವೇಶ ನೀಡಲಿಲ್ಲ. ಇದರಿಂದ ತೀವ್ರವಾಗಿ ನೊಂದ ವಿದ್ಯಾರ್ಥಿನಿ ಮನೆಗೆ ಮರಳುವ ದಾರಿಯಲ್ಲಿ ನದೌಲ್ ನಿಲ್ದಾಣದಲ್ಲಿ ರೈಲು ಹತ್ತಿ, ತಾರೆಗ್ನಾ ಮತ್ತು ಮಸೌರಿ ಕೋರ್ಟ್ ನಿಲ್ದಾಣಗಳ ನಡುವೆ ಚಲಿಸುವ ರೈಲಿನಿಂದ ಕೆಳಕ್ಕೆ ಜಿಗಿದಿದ್ದಾಳೆ.

ಬೆಂಗಳೂರಿನ KITS ಸಂಸ್ಥೆಯಲ್ಲಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ: ಮಾಸಿಕ 80,000 ವೇತನ!

ಚಿಕಿತ್ಸೆ ಫಲಿಸದೆ ಸಾವು

ರೈಲಿನಿಂದ ಬಿದ್ದ ಕೋಮಲ್ ತೀವ್ರವಾಗಿ ಗಾಯಗೊಂಡಿದ್ದಳು. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಮೃತ ವಿದ್ಯಾರ್ಥಿನಿ ಕೋಮಲ್ ಮೂವರು ಮಕ್ಕಳಲ್ಲಿ ಹಿರಿಯವಳಾಗಿದ್ದು, ಆಕೆಯ ತಂದೆ ಬೇರೆ ರಾಜ್ಯದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಎಚ್ಚರಿಕೆ:

ಪರೀಕ್ಷಾ ಮಂಡಳಿಗಳು ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾಗುವ ಕನಿಷ್ಠ 30 ರಿಂದ 60 ನಿಮಿಷ ಮುಂಚಿತವಾಗಿ ಕೇಂದ್ರಕ್ಕೆ ತಲುಪುವಂತೆ ಸೂಚನೆ ನೀಡುತ್ತಿವೆ. ಈ ಘಟನೆಯು ಕಟ್ಟುನಿಟ್ಟಿನ ನಿಯಮಗಳು ಮತ್ತು ವಿದ್ಯಾರ್ಥಿಗಳ ಮಾನಸಿಕ ಒತ್ತಡದ ನಡುವಿನ ಕಂದಕವನ್ನು ಎತ್ತಿ ತೋರಿಸಿದೆ.

ಗಮನಿಸಿ: ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ನಿಮಗೆ ಅಥವಾ ನಿಮ್ಮ ಆಪ್ತರಿಗೆ ಮಾನಸಿಕ ನೆರವು ಬೇಕಿದ್ದರೆ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ. ಸಹಾಯ್ – 080-25497777

Scroll to Top