ನಂದಿನಿ ಉತ್ಪನ್ನ ಸೇವನೆಯಿಂದ ಕ್ಯಾನ್ಸರ್​ ಅಪಾಯ : ಕೆಎಂಎಫ್​ ಎಂಡಿಯಿಂದ ಸ್ಪಷ್ಟನೆ

ಬೆಂಗಳೂರು : kmf clarification : ಕೋಟಿ ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ಕೆಎಂಎಫ್​ ನಂದಿನಿ ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿಯೂ ಖ್ಯಾತಿ ಗಳಿಸಿದೆ. ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿಯನ್ನು ಮಾಡಿಕೊಳ್ಳದೇ ಕನ್ನಡಿಗರ ನಂಬಿಗಸ್ಥ ಬ್ರ್ಯಾಂಡ್ ಆಗಿ ಹೆಸರು ಉಳಿಸಿಕೊಂಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಂದಿನಿ ಉತ್ಪನ್ನಗಳ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಯೊಂದನ್ನು ಹಬ್ಬಿಸಲಾಗಿತ್ತು.

ನಂದಿನಿ ಉತ್ಪನ್ನಗಳನ್ನು ಸೇವನೆ ಮಾಡಿದರೆ ಕ್ಯಾನ್ಸರ್ ಬರುತ್ತದೆ ಎಂಬ ವದಂತಿಯನ್ನು ಹಬ್ಬಿಸಿ ಎಲ್ಲರಲ್ಲಿ ಆತಂಕ ಮೂಡಿಸಲಾಗಿತ್ತು. ಇದೊಂದು ಶುದ್ಧ ಸುಳ್ಳು ಸುದ್ದಿಯಾಗಿದ್ದು , ಈ ರೀತಿಯ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ ಕಾನೂನು ಸಮರಕ್ಕೆ ಕೆಎಂಎಫ್​ ಮುಂದಾಗಿದೆ.

ಡಾ. ಶರಣ್ಯ ಸಂತೋಷ್​ ಎಂಬವರು ಸಾಮಾಜಿಕ ಜಾಲತಾಣದಲ್ಲಿ , ನಂದಿನಿ ಉತ್ಪನ್ನ ತಿಂದರೆ ಕ್ಯಾನ್ಸರ್​ ಬರುತ್ತೆ ಎಂದು ಹೇಳಿದ್ದರು. ಈ ವಿಚಾರವಾಗಿ ಕೆಎಂಎಫ್​ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಮಾತನಾಡಿದ್ದು, ಇದೊಂದು ಶುದ್ಧ ಸುಳ್ಳು ಸುದ್ದಿ. ಯಾವುದೇ ರಾಸಾಯನಿಕಗಳನ್ನು ಮಿಶ್ರಣ ಮಾಡದೆಯೇ ಅತ್ಯಂತ ಪರಿಶುದ್ಧವಾಗಿ ನಂದಿನಿ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಕಳುಹಿಸಿಕೊಡುತ್ತಿದ್ದೇವೆ.

Also Read : ಉಡುಪಿ: ಅಂಬಾಗಿಲು ಬಳಿ ಭೀಕರ ಅಪಘಾತ; ಒನ್‌ವೇಯಲ್ಲಿ ಬಂದ ಬಸ್ ಚಾಲಕ ಬಲಿ, ಮತ್ತೋರ್ವ ಗಂಭೀರ

ಅಂತದ್ರಲ್ಲಿ ನಂದಿನಿ ಉತ್ಪನ್ನಗಳ ವಿರುದ್ಧ ಇಂತಹ ಗಂಭೀರ ಆರೋಪ ಹೊರಿಸಿರುವ ಡಾ. ಶರಣ್ಯ ಪ್ರಕಾಶ್​ ವಿರುದ್ಧ ಕ್ರಿಮಿನಲ್​ ಮೊಕದ್ದಮೆ ಹೂಡಲಿದ್ದೇವೆ ಎಂದು ಹೇಳಿದ್ದಾರೆ.
ಸುರಕ್ಷತೆಯ ದೃಷ್ಠಿಯಿಂದ ಕೆಎಂಎಫ್​ನ ಮೈಸೂರು ಪಾಕ್, ಮಿಲ್ಕ್ ಪೇಡಾ, ಪನ್ನೀರ್, ವೆನಿಲಾ ಮಿಲ್ಕ್ ಸೇಕ್​​ ಎಲ್ಲಾ ಉತ್ಪನ್ನಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಇವುಗಳಲ್ಲಿ ಎಲ್ಲವೂ ಆರೋಗ್ಯಕ್ಕೆ ಸುರಕ್ಷಿತ ಎಂಬ ವರದಿಯನ್ನು ಪಡೆದುಕೊಂಡಿದೆ. ಆದರೂ ಜನರ ದಿಕ್ಕು ತಪ್ಪಿಸುವ ಕಾರ್ಯ ಎಸಗುತ್ತಿರುವವರಿಗೆ ಕಾನೂನಿನ ಮೂಲಕವೇ ಉತ್ತರ ನೀಡುತ್ತೇವೆ ಎಂದು ಶಿವಸ್ವಾಮಿ ಹೇಳಿದ್ದಾರೆ.

Also Read : ದೇಶದ್ರೋಹದ ಜಾಲ ಭೇದಿಸಿದ ಉಡುಪಿ ಪೊಲೀಸರು: ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ರವಾನಿಸುತ್ತಿದ್ದ ಮತ್ತೋರ್ವ ಬಂಧನ

nandini milk products cancer risk kmf md clarification

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories