ಬಿಸಿಲ ಬೇಗೆಗೆ ಜೀವ ತೆತ್ತ ಶಿಕ್ಷಕರು: ಜನಗಣತಿ ಕಾರ್ಯಕ್ಕೆ ಕುತ್ತು ತಂದ ವರುಣನ ಮೌನ
ಜನಗಣತಿ ಕಾರ್ಯಕ್ಕೆಂದು ತೆರಳಿದ್ದ ಇಬ್ಬರು ಶಿಕ್ಷಕರು ಮೃತಪಟ್ಟ ಘಟನೆಯು ವರದಿಯಾಗಿದ್ದು, ಸಮಸ್ತ ಶಿಕ್ಷಕ ಲೋಕ ಬೆಚ್ಚಿಬಿದ್ದಿದೆ.

ದೇಶಾದ್ಯಂತ ಜನಗಣತಿ ಕಾರ್ಯ ಬಿರುಸಿನಿಂದ ಸಾಗಿದೆ. ನೆತ್ತಿಯ ಮೇಲೆ ನಿಗಿನಿಗಿ ಕೆಂಡ ಕಾರುತ್ತಿರುವ ಸೂರ್ಯನ ಶಾಖದ ನಡುವೆಯೇ ಮನೆ ಮನೆ ಅಲೆದು ಜನಗಣತಿ ಮಾಡುವ ಅನಿವಾರ್ಯತೆ ಶಿಕ್ಷಕರ ಹೆಗಲ ಮೇಲೆ ಬಿದ್ದಿದೆ. ಇದೀಗ ಜನಗಣತಿ ಕಾರ್ಯಕ್ಕೆಂದು ತೆರಳಿದ್ದ ಇಬ್ಬರು ಶಿಕ್ಷಕರು ಮೃತಪಟ್ಟ ಘಟನೆಯು ವರದಿಯಾಗಿದ್ದು, ಸಮಸ್ತ ಶಿಕ್ಷಕ ಲೋಕ ಬೆಚ್ಚಿಬಿದ್ದಿದೆ.
ಇಬ್ಬರು ಶಿಕ್ಷಕರ ಸಾವಿಗೆ ಅತಿಯಾದ ಬಿಸಿಲೇ ಕಾರಣ ಎನ್ನಲಾಗಿದೆ. ಒಡಿಶಾದ ಮಯೂರಗಂಜ್ ಮತ್ತು ಸುಂದರಘರ್ ಜಿಲ್ಲೆಗಳಲ್ಲಿ ಈ ಘಟನೆ ವರದಿಯಾಗಿದ್ದು ಜನಗಣತಿಗೆ ತೆರಳಲು ಶಿಕ್ಷಕರು ಹಿಂದು ಮುಂದು ಯೋಚಿಸುವಂತಾಗಿದೆ.
ಈ ಭಾಗಗಳಲ್ಲಿ ಉಷ್ಣಾಂಶವು 40 ಡಿಗ್ರಿ ಸೆಲ್ಸಿಯಸ್ನಷ್ಟಿತ್ತು ಎನ್ನಲಾಗಿದೆ.
ಇದನ್ನೂ ಓದಿ : ಕೊಡಗಿನಲ್ಲಿ ಗುಂಡು ಹಾರಿಸಿಕೊಂಡು ಶಿಕ್ಷಕಿ ಆತ್ಮಹತ್ಯೆ; ಶಿಕ್ಷಕಿ ಸಾವಿಗೆ ಜನಗಣತಿ ಒತ್ತಡವೇ ಕಾರಣನಾ?
ಆದರೂ ಕರ್ತವ್ಯ ನಿಭಾಯಿಸಲೆಂದು ತೆರಳಿದ್ದ ಇಬ್ಬರು ಶಿಕ್ಷಕರು ಬಿಸಿಲಿನ ಬೇಗೆ ತಾಳಲಾರದೇ ತೀವ್ರವಾಗಿ ಅಸ್ವಸ್ಥಗೊಂಡಿದ್ದರು ಎನ್ನಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯ್ತಾದಾರೂ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಬಿಸಿಲಿನ ಬೇಗೆ ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಮನೆಯಿಂದ ಹೊರಗೆ ಕಾಲಿಡುವುದೇ ಸದ್ಯದ ಮಟ್ಟಿಗೆ ಸವಾಲಿನ ಕೆಲಸವಾಗಿದೆ. ಅಂತದ್ರಲ್ಲಿ ಪ್ರತಿದಿನ ಬಿರು ಬೇಸಿಗೆಯಲ್ಲಿ ಕಿಲೋಮೀಟರ್ಗಟ್ಟಲೇ ಸಾಗಿ ಮನೆ ಮನೆ ಜನಗಣತಿ ಕಾರ್ಯ ಕೈಗೊಳ್ಳುವುದು ಶಿಕ್ಷಕರಿಗೆ ನಿಜಕ್ಕೂ ಸವಾಲಿನ ಪ್ರಶ್ನೆಯೇ ಆಗಿದೆ. ಹೀಗಾಗಿ ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಶಿಕ್ಷಕರನ್ನು ಈ ಸಂಕಷ್ಟದಿಂದ ಪಾರು ಮಾಡಬೇಕೆಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರ್ತಿದೆ .



