ಪುತ್ರಿಯ ಮೇಲೆ ಅತ್ಯಾ*ಚಾರ ನಡೆಯುತ್ತಿರುವುದನ್ನು ಕಣ್ಣಾರೆ ಕಂಡ ತಂದೆ ಮಾಡಿದ್ದೇನು ನೋಡಿ

Uttar Pradesh : ತನ್ನ ಆರು ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗುತ್ತಿದ್ದ ತನ್ನ ಸಲಿಂಗಕಾಮಿ ಸಂಗಾತಿಯನ್ನು ರೆಡ್​ಹ್ಯಾಂಡ್​ ಆಗಿ ಕಂಡು ಹಿಡಿದ ತಂದೆಯು ಆತನ ಜನನಾಂಗವನ್ನೇ ಚಾಕುವಿನಿಂದ ಇರಿದ ಬೆಚ್ಚಿ ಬೀಳಿಸುವ ಘಟನೆಯು ಉತ್ತರ ಪ್ರದೇಶದಲ್ಲಿ ಸಂಭವಿಸಿದೆ.

ಪತ್ನಿಯಿಂದ ದೂರವಾಗಿದ್ದು ವ್ಯಕ್ತಿಯು ತನ್ನ ಮಗಳೊಂದಿಗೆ ಸಲಿಂಗಕಾಮಿ ಸಂಗಾತಿಯ ಜೊತೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು ಎನ್ನಲಾಗಿದೆ. ಉತ್ತರ ಪ್ರದೇಶದ ಡಿಯೋರಿಯಾ ಎಂಬಲ್ಲಿ ಈ ಕ್ರೂರ ಘಟನೆ ಸಂಭವಿಸಿದೆ.

ಸಲಿಂಗಕಾಮಿಗಳಿಬ್ಬರೂ ಒಂದೇ ಕಡೆ ಕೆಲಸ ಮಾಡಿಕೊಂಡು ಒಂದೇ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ. ಇವರಿಬ್ಬರ ಜೊತೆಯಲ್ಲಿ ಅಪ್ರಾಪ್ತ ವಯಸ್ಸಿನ ಪುತ್ರಿ ಕೂಡ ಅದೇ ಮನೆಯಲ್ಲಿ ವಾಸವಿದ್ದಳು.

Also Read: Firework: ಪಟಾಕಿ ತಂದ ಅವಾಂತರ :ನೋಡ ನೋಡುತ್ತಿದ್ದಂತೆಯೇ ಹೊತ್ತಿ ಉರಿದ ಐದಂಸ್ತಿನ ಅಪಾರ್ಟ್​ಮೆಂಟ್​

ತನ್ನ ಸಂಗಾತಿಯ ಎದುರು ಕಾಮುಕನು ಪುತ್ರಿಯ ಜೊತೆ ಚೆನ್ನಾಗಿಯೇ ನಡೆದುಕೊಳ್ಳುವ ಮೂಲಕ ಯಾವುದೇ ರೀತಿಯ ಅನುಮಾನ ಬಾರದಂತೆ ವರ್ತಿಸುತ್ತಿದ್ದ ಎನ್ನಲಾಗಿದೆ. ತನ್ನ ಸಂಗಾತಿ ಸಲಿಂಗಕಾಮಿಯಾಗಿರುವುದರಿಂದ ಮಗಳು ಸುರಕ್ಷಿತವಾಗಿರುತ್ತಾಳೆ ಎಂಬ ಭಾವನೆ ಕೂಡ ಬಾಲಕಿಯ ತಂದೆಯ ಮನದಲ್ಲಿತ್ತು ಎನ್ನಲಾಗಿದೆ.

ರಾತ್ರಿ ತನ್ನ ಪುತ್ರಿ ಅಳುತ್ತಿರುವ ಸದ್ದು ಕೇಳಿದ ಹಿನ್ನೆಲೆಯಲ್ಲಿ ಆರೋಪಿ ​ ಎಚ್ಚರಗೊಂಡಿದ್ದ. ಕೋಣೆಯ ಸುತ್ತಲೂ ಮಗಳು ಕಾಣಿಸದ ಹಿನ್ನೆಲೆಯಲ್ಲಿ ಮಗಳಿಗಾಗಿ ಹುಡುಕಾಟ ನಡೆಸಿದ್ದರು.

ಆದರೆ ಇವರು ವಾಸವಿದ್ದ ಮನೆಯಲ್ಲಿಯೇ ತನ್ನ ಸಲಿಂಗಕಾಮಿ ಸಂಗಾತಿ ರಾಮ್​ ಬಾಬು ಯಾದವ್ ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ನಡೆಸುತ್ತಿರುವುದನ್ನು ಕಣ್ಣಾರೆ ಕಂಡಿದ್ದಾರೆ. ಇದರಿಂದ ಕೋಪಗೊಂಡ ಬಾಲಕಿ ತಂದೆಯು ರಾಮ್​ ಬಾಬು ಯಾದವ್​ನ ಜನನಾಂಗವನ್ನೇ ಕತ್ತರಿಸಿದ್ದಾರೆ.

Also Read: ಅಯ್ಯಪ್ಪನ ದರ್ಶನ ಪಡೆದ ಮೊದಲ ಮಹಿಳಾ ರಾಷ್ಟ್ರಪತಿ ಕೀರ್ತಿ ಗಳಿಸಿದ ದ್ರೌಪದಿ ಮುರ್ಮು

ಬಳಿಕ ಬಾಲಕಿಯ ತಂದೆಯೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳು ರಾಮ್​ಬಾಬು ಯಾದವ್​ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಅತ್ಯಾಚಾರ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು ಇತ್ತ ಬಾಲಕಿಯ ತಂದೆಯ ವಿಚಾರಣೆ ನಡೆಸುತ್ತಿದ್ದಾರೆ.

Uttar Pradesh father did after witnessing his daughter being raped in Deoria

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories