ಅಯ್ಯಪ್ಪನ ದರ್ಶನ ಪಡೆದ ಮೊದಲ ಮಹಿಳಾ ರಾಷ್ಟ್ರಪತಿ ಕೀರ್ತಿ ಗಳಿಸಿದ ದ್ರೌಪದಿ ಮುರ್ಮು

Draupadi Murmu: ರಾಷ್ಟ್ರಪತಿ ದ್ರೌಪರ್ದಿ ಮುರ್ಮು ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಐತಿಹಾಸಿಕ ಭೇಟಿ ನೀಡಿದ್ದಾರೆ. ಈ ಮೂಲಕ ಪ್ರಸಿದ್ಧ ಪಂದಳಕಂದನ ಕ್ಷೇತ್ರಕ್ಕೆ ಭೇಟಿ ನೀಡಿ ಮೊದಲ ಮಹಿಳಾ ನಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಈ ದೇಗುಲಕ್ಕೆ ಭೇಟಿ ನೀಡಿದ ಭಾರತದ 2ನೇ ರಾಷ್ಟ್ರಪತಿ ಎನಿಸಿದ್ದಾರೆ.

1970ರಲ್ಲಿ ಮಾಜಿ ರಾಷ್ಟ್ರಪತಿ ವಿ.ವಿ ಗಿರಿ ಅಯ್ಯಪ್ಪ ದೇಗುಲಕ್ಕೆ ಭೇಟಿ ನೀಡಿದ್ದರು. 2018ರಲ್ಲಿ ಸುಪ್ರೀಂ ಕೋರ್ಟ್ ದೇವಾಲಯಕ್ಕೆ ಮುಟ್ಟಾಗುವ ವಯಸ್ಸಿನ ಮಹಿಳೆಯರು ಪ್ರವೇಶಿಸುವುದುನ್ನು ನಿಷೇಧಿಸುವ ಸಾಂಪ್ರದಾಯಿಕ ಆಚರಣೆಯನ್ನು ರದ್ದುಗೊಳಿಸಿದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭೇಟಿ ಮಹತ್ವತೆ ಪಡೆದುಕೊಂಡಿದೆ.

ಈ ದೇಗುಲಕ್ಕೆ ಪುರುಷರು ಹಾಗೂ ಮುಟ್ಟಾಗದವರಿಗೆ ಮಾತ್ರ ಪ್ರವೇಶವಿತ್ತು. ಇನ್ನು ಬಿಜೆಪಿ ಸಂಸದ ಬಂಡಿ ಸಂಜಯ್​ ಕುಮಾರ್​, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಶಬರಿಮಲೆ ಭೇಟಿಯನ್ನು ಸ್ವಾಗತಿಸಿದ್ದಾರೆ. ದ್ರೌಪದಿ ಮುರ್ಮು ಅವರಿಗೆ ಪ್ರಸ್ತುತ 67 ವರ್ಷ.

Also Read: ಕ್ಷುಲ್ಲಕ ಕಾರಣಕ್ಕೆ ಗಲಾಟೆ : 20 ವರ್ಷದ ಯುವಕನನ್ನು ಇರಿದು ಕೊಂದ ದುಷ್ಕರ್ಮಿಗಳು

ಅವರು ದೇಗುಲದ ಯಾವುದೇ ಆಚರಣೆಗಳಿಗೆ ಭಂಗ ತಂದಿಲ್ಲ. ಶಬರಿಮಲೆ ಭಕ್ತಾದಿಗಳಿಗೆ ನಂಬಿಕೆಯನ್ನು ಮುರಿಯಲಿಲ್ಲ. ಇರುಮುಡಿಯನ್ನು ಹೊತ್ತು ಅಯ್ಯಪ್ಪನ ದರ್ಶನ ಪಡೆದ ಮೊದಲ ರಾಷ್ಟ್ರಪತಿ ಎನಿಸಿದ್ದಾರೆ ಎಂದು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಭಕ್ತಿ ಎನ್ನುವುದು ನಾವು ಪ್ರದರ್ಶಿಸುವಂತದ್ದಲ್ಲ. ಅದೊಂದು ಬೇರೆಯ ಭಾವನೆ, ದೇಶಾದ್ಯಂತ ಅಯ್ಯಪ್ಪ ಸ್ವಾಮಿಗೆ ಲಕ್ಷಾಂತರ ಭಕ್ತಗಣವಿದೆ. ಅಯ್ಯಪ್ಪನ ಭಕ್ತಿಗೊಂದು ಘನತೆಯಿದೆ. ರಾಷ್ಟ್ರಪತಿ ದ್ರೌಪರ್ದಿ ಮುರ್ಮು ಅವರು ಭಕ್ತಿಯ ಘನತೆಗೆ ಯಾವುದೇ ಚ್ಯುತಿ ತಂದಿಲ್ಲ ಎಂದು ಅವರು ಪ್ರತಿಕ್ರಯಿಸಿದರು.

ಶಬರಿಮಲೆ ಯಾತ್ರೆಯ ಎಲ್ಲಾ ಸಾಂಪ್ರದಾಯಿಕ ಪದ್ಧತಿಗಳನ್ನು ಅನುಸರಿಸಿದ ದ್ರೌಪದಿ ಮುರ್ಮು ಬೆಳಗ್ಗೆ 11 ಗಂಟೆ ಸುಮಾರಿಗೆ ಪಂಬಾ ಮೂಲ ಶಿಬಿರಕ್ಕೆ ಆಗಮಿಸಿದರು. ಸಮೀಪದಲ್ಲಿರುವ ಗಣಪತಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುವ ಮುನ್ನ ಪಂಪಾ ನದಿಯಲ್ಲಿ ತಮ್ಮ ಪಾದ ತೊಳೆದರು.

Also Read: ರಸ್ತೆ ಅಪಘಾತ ಕೊಲೆಯಲ್ಲಿ ಅಂತ್ಯ : ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ಅಯ್ಯಪ್ಪನ ಭಕ್ತಾದಿಗಳಂತೆ ಕಪ್ಪು ಸೀರೆ ಧರಿಸಿದ್ದ ದ್ರೌಪದಿ ಮುರ್ಮು, ಮೇಲ್ಶಾಂತಿ (ಪ್ರಧಾನ ಅರ್ಚಕ) ಭಕ್ತರು ದೇವಾಲಯಕ್ಕೆ ಸಾಗಿಸುವ ಪವಿತ್ರ ಕಟ್ಟಾದ ‘ಇರುಮುಡಿಕ್ಕೆಟ್ಟು’ಯನ್ನು ಸಿದ್ಧಪಡಿಸಿದರು. ಅವರ ಅಳಿಯ ಗಣೇಶ್ ಚಂದ್ರ ಹೊಂಬ್ರಾಮ್ ಮತ್ತು ಇತರ ಸಿಬ್ಬಂದಿ ಕೂಡ ತಮ್ಮದೇ ಆದ ಪವಿತ್ರ ಕಟ್ಟಗಳನ್ನು ಸಿದ್ಧಪಡಿಸಿಕೊಂಡರು.ಪಂಬಾದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಿ ನಂತರ ಮುಖ್ಯ ದೇವಾಲಯದ ಸಂಕೀರ್ಣಕ್ಕೆ ಪ್ರಯಾಣ ಬೆಳೆಸಿದರು.

ದೇಗುಲದ ಪ್ರಧಾನ ಅರ್ಚಕರು ಹಾಗೂ ಆಡಳಿತ ಮಂಡಳಿಯಿಂದ ಸ್ವಾಗತ ಸ್ವೀಕರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಇರುಮುಡಿಯನ್ನು ತಲೆಯಲ್ಲಿ ಹೊತ್ತು 18 ಪವಿತ್ರ ಮೆಟ್ಟಿಲುಗಳನ್ನು ಹತ್ತಿ ಗರ್ಭಗುಡಿ ಪ್ರವೇಶಿಸಿ ಇರುಮುಡಿಯನ್ನು ಸಲ್ಲಿಸಿ ಅಯ್ಯಪ್ಪನ ಆಶೀರ್ವಾದಕ್ಕೆ ಪಾತ್ರರಾದರು.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories