ನಾಯಿಯಲ್ಲೂ ಪತ್ತೆಯಾಯ್ತು ಹೊಸ ಕೊರೊನಾ ವೈರಸ್ …!!!!

ಕೊರೊನಾ ವೈರಸ್ ಸೋಂಕು ವಿಶ್ವವನ್ನೇ ತಲ್ಲಣಗೊಳಿಸಿದೆ. ಇಷ್ಟು ದಿನ ಮನುಷ್ಯರಿಂದ, ಬಾವಲಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಆದ್ರೀಗ ಆಘಾತಕಾರಿ ಮಾಹಿತಿ ಬಯಲಾಗಿದ್ದು, ನಾಯಿಗಳಲ್ಲಿಯೂ ಹೊಸ ರೀತಿಯ ಕೊರೊನಾ ಸೋಂಕು ಪತ್ತೆಯಾಗಿದೆ. ಅಲ್ಲದೇ ನಾಯಿಗಳಿಂದ ಮನುಷ್ಯರಿಗೆ ಸೋಂಕು ಹರಡುವ ಆತಂಕ ಎದುರಾಗಿದೆ. ಈ ಕುರಿತು ತಜ್ಞರು ಸಂಶೋಧನೆ ನಡೆಸುತ್ತಿದ್ದಾರೆ.

ಪೂರ್ವ ಮಲೇಷ್ಯಾದ ಸರವಾಕ್ ಆಸ್ಪತ್ರೆಗೆ ದಾಖಲಾಗಿದ್ದ ನ್ಯುಮೋನಿಯಾ ರೋಗಿಗಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ರೋಗಿಗಳಲ್ಲಿ ಹೊಸ ರೀತಿಯ ಕೊರೊನಾ ವೈರಸ್ ಪತ್ತೆಯಾಗಿದೆ. ಅಲ್ಲದೇ ಸೋಂಕು ನಾಯಿಗಳಿಂದ ಹರಡಿದೆ ಎನ್ನಲಾಗುತ್ತಿದೆ. ಅದ್ರಲ್ಲೂ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಅದ್ರಲ್ಲೂ ನಾಯಿಗಳಿಂದ ಸೋಂಕು ಮನುಷ್ಯರಿಗೆ ಹರಡಿರುವ ಸಾಧ್ಯತೆಯಿದ್ದು, ಈ ಕುರಿತು ಸಂಶೋಧನೆಯನ್ನು ನಡೆಸಲಾಗುತ್ತಿದೆ. ಕೊರೊನಾ ವೈರಸ್ ಸೋಂಕು ವಿಕಸನಗೊಂಡು ಹೊಸ ಸ್ವರೂಪದಲ್ಲಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ.

ನಾಯಿಗಳಲ್ಲಿ ಕಂಡು ಬಂದಿರುವ ಸೋಂಕು ತೀವ್ರ ತೆರನಾದ ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತಿದೆ. CCOV-HuPn-2018 ಹೆಸರಿನ ಹೊಸ ಸ್ಟ್ರೈನ್, ಬೆಕ್ಕುಗಳು ಮತ್ತು ಹಂದಿಗಳಲ್ಲಿ ಕಾಣಿಸಿ ಕೊಂಡಿತ್ತು. ಆದ್ರೀಗ ನಾಯಿಗಳಲ್ಲಿ ಸೋಂಕು ಪತ್ತೆಯಾಗಿದೆ. ಮಾನವ ರಲ್ಲಿ SARS-COV ಮತ್ತು SARS-COV-2, COVID-19 ವೈರಸ್ ಗಳು ಈಗಾಗಲೇ ಪತ್ತೆಯಾಗಿವೆ. ಅದ್ರಲ್ಲೂ SARS-COV-2 ಕೊರೊನಾ ವೈರಸ್‌ನ ಮೂಲ ಪ್ರಾಣಿ ಅಥವಾ ಮನುಷ್ಯ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಅದ್ರಲ್ಲೂ ವೈರಸ್ ಇತ್ತೀಚೆಗೆ ಪ್ರಾಣಿಗಳಿಂದ ಮನುಷ್ಯ ರಿಗೆ ಜಿಗಿದಿದೆ ಎಂಬ ಹಿನ್ನೆಲೆಯಲ್ಲಿ ಸಂಶೋಧನೆ ನಡೆಯುತ್ತಿದೆ.

Comments are closed.