ಬಿಳಿಕೂದಲಿಗೆ ಶಾಶ್ವತ ಪರಿಹಾರ ನೆಲ್ಲಿಕಾಯಿ

0

ವಯಸ್ಸಾದ ಮೇಲೆ ಬಿಳಿ ಕೂದಲು ಸಾಮಾನ್ಯ. ಆದರೆ ಹದಿಹರೆಯದ ವರೇ ಅಕಾಲಿಕ ಬಿಳಿಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಒಂದು ವೇಳೆ ಈ ಸಮಸ್ಯೆಯಿಂದ ಹೊರಬರಲು ಅಪ್ಪಿತಪ್ಪಿ ಹೇರ್ ಡೈ ಬಳಸಿದ್ರೆ ಮುಗಿದೇ ಹೊಯ್ತು. ಇದ್ದ ಬಿಳಿಕೂದಲ ಜೊತೆಗೆ ಇನ್ನೊಂದಿಷ್ಟು ಆರೋಗ್ಯವಂತ ಕೂದಲು ಕೂಡ ಬಿಳಿಯಾಗುತ್ತೆ. ಹೀಗಾಗಿ ಇಂತಹ ಪ್ರಯೋಗಗಳಿಗೆ ಕತ್ತರಿಹಾಕಿ. ಬಿಳಿಕೂದಲ ಸಮಸ್ಯೆಯಿಂದ ಮುಕ್ತರಾಗೋದಕ್ಕೆ ನೆಲ್ಲಿಕಾಯಿ ಟಿಪ್ಸ್ ಹೇಳ್ತಿವಿ ಕೇಳಿ.

ಬಿಳಿಕೂದಲ ಸಮಸ್ಯೆ ನೆಲ್ಲಿಕಾಯಿ ಪರಿಹಾರ  : ನೆಲ್ಲಿಕಾಯಿ ಕೂದಲು ಉದುರುವಿಕೆಯನ್ನು ನಿಯಂತ್ರಿಸುತ್ತದೆ. ಮಾತ್ರವಲ್ಲ ಕೂದಲು ಬಿಳಿ ಬಣ್ಣಕ್ಕೆ ತಿರುಗದಂತೆ ಮಾಡುವ ಶಕ್ತಿ ನೆಲ್ಲಿಕಾಯಿಗಿದೆ. ಕೂದಲನ್ನು ಕಪ್ಪಾಗಿಸುವ ಗುಣ ಹೊಂದಿರುವುದಕ್ಕೆ ನೆಲ್ಲಿಕಾಯಿಯನ್ನು ಹೇರ್ ಡೈ ಮತ್ತು ಇತರ ಉತ್ಪನ್ನಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ನೆಲ್ಲಿಕಾಯಿಯಲ್ಲಿರೋ  ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದ್ದು, ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡುತ್ತದೆ  ಹೀಗಾಗಿ ಕೂದಲಿಗಾಗುವ ಹಾನಿಯನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ. ಮಾತ್ರವಲ್ಲ ತಲೆಯಲ್ಲಿರೋ ಹೇನುಗಳನ್ನು ತೆಗೆದು, ಕೂದಲಿನ ಸ್ವಾಸ್ಥ್ಯವನ್ನು ಕಾಪಾಡುವ ಕಾರ್ಯವನ್ನು ಮಾಡುತ್ತದೆ ಈ ನೆಲ್ಲಿಕಾಯಿ.

ಬಿಳಿ ಕೂದಲು ಕಪ್ಪಗಾಗಲು ನೆಲ್ಲಿಕಾಯಿಯನ್ನು ಹಲವಾರು ವಿಧಾನಗಳಲ್ಲಿ ಬಳಸಲಾಗುತ್ತದೆ. ನೀವು ಇದನ್ನು ಸಲಾಡ್ ಆಗಿ ಸೇವಿಸಬಹುದು ಅಥವಾ ಪೇಸ್ಟ್, ಪುಡಿ ಅಥವಾ ಎಣ್ಣೆ ರೂಪದಲ್ಲಿ ಯೂ ಬಳಸಬಹುದು. ಪರಿಣಾಮಕಾರಿ ಫಲಿತಾಂಶಕ್ಕಾಗಿ ಯಾವ ವಿಧಾನಗಳನ್ನು ಅನುಸರಿಸಬಹುದು ಎಂಬ ಮಾಹಿತಿ ಇಲ್ಲಿದೆ ನೋಡಿ…

ಮೆಂತ್ಯೆಪುಡಿಯೊಂದಿಗೆ ನೆಲ್ಲಿಕಾಯಿ : 3 ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆ ಬಿಸಿ ಮಾಡಿ. ಇದಕ್ಕೆ 1 ಟೇಬಲ್ ಸ್ಪೂನ್ ಮೆಂತ್ಯ ಪುಡಿ ಮತ್ತು 2 ಟೇಬಲ್ ಸ್ಪೂನ್ ನೆಲ್ಲಿಕಾಯಿ ಪುಡಿ ಸೇರಿಸಿ. ನಂತರ ಈ ಮಿಶ್ರಣವನ್ನು ಕೆಳಗಿಳಿಸಿ ತಣ್ಣಗಾಗಲು ಬಿಡಿ. ನಂತರ ಮಿಶ್ರಣವನ್ನು ನೆತ್ತಿಯ ಮೇಲೆ,  ನಿಮ್ಮ ಕೂದಲನ್ನು ವಿಭಾಗಿಸಿ ಹಚ್ಚಿ. ಚೆನ್ನಾಗಿ ಮಸಾಜ್ ಮಾಡಿ ಮತ್ತು ರಾತ್ರಿಯಿಡೀ ಬಿಡಿ. ವಾರಕ್ಕೊಮ್ಮೆ ಹೀಗೆ ಮಾಡೋದ್ರಿಂದ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.

ನೆಲ್ಲಿಕಾಯಿ ಪೇಸ್ಟ್ ಮತ್ತು ನಿಂಬೆ ರಸ :ನೆಲ್ಲಿಕಾಯಿಯಿಂದ 2 ಟೇಬಲ್ ಸ್ಪೂನ್ ನಷ್ಟು ಪೇಸ್ಟ್ ತಯಾರಿಸಿ. ಇದಕ್ಕೆ 1 ಟೇಬಲ್ ಸ್ಪೂನ್ ಬಾದಾಮಿ ಎಣ್ಣೆ , ಕೆಲವು ಹನಿ ನಿಂಬೆ ರಸ ಸೇರಿಸಿ. ಕೂದಲಿಗೆ ಹಚ್ಚಿ, ಒಂದು ಗಂಟೆ ಬಿಡಿ. ಶಾಂಪೂ ಬಳಸಿ ಚೆನ್ನಾಗಿ ತೊಳೆಯಿರಿ.

ನೆಲ್ಲಿಕಾಯಿ ಪುಡಿ ಮತ್ತು ಕೊಬ್ಬರಿ ಎಣ್ಣೆ : ಬಟ್ಟಲಿನಲ್ಲಿ ಕೊಬ್ಬರಿ /ಆಲಿವ್ ಎಣ್ಣೆ ಬಿಸಿ ಮಾಡಿ. ಇದಕ್ಕೆ ಎರಡು ಟೀ ಚಮಚ ನೆಲ್ಲಿಕಾಯಿ ಪುಡಿ ಸೇರಿಸಿ. ಎಣ್ಣೆ ಕಂದು ಬಣ್ಣ ಬರುವವರೆಗೆ ಬಿಸಿ ಮಾಡಿ. ಆಫ್ ಮಾಡಿ, ಎಣ್ಣೆ ತಣ್ಣಗಾಗಲು ಬಿಡಿ. ಇದು ಸ್ವಲ್ಪ ಬೆಚ್ಚಗಿರುವಾಗ ನೆತ್ತಿ ಮತ್ತು ಕೂದಲಿಗೆ ಹಚ್ಚಿ. ನೆತ್ತಿಗೆ ಸುಮಾರು 15 ನಿಮಿಷಗಳ ಕಾಲ ಮಸಾಜ್ ಮಾಡಿ. 30 ನಿಮಿಷಗಳ ನಂತರ ಶಾಂಪೂವಿನಿಂದ ತಲೆ ತೊಳೆಯಿರಿ. ವಾರಕ್ಕೆ ಮೂರು ಬಾರಿ ಮಾಡುವುದರಿಂದ ಬೆಸ್ಟ್ ರಿಸಲ್ಟ್ ಸಿಗುತ್ತೆ.

ನೆಲ್ಲಿಕಾಯಿ ಮತ್ತು ಕರಿಬೇವಿನ ಎಲೆಗಳು : ಬಟ್ಟಲಿನಲ್ಲಿ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ, ಇದಕ್ಕೆ ಕತ್ತರಿಸಿದ ನೆಲ್ಲಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ. ಎಣ್ಣೆ ಕಂದು ಬಣ್ಣ ಬರುವವರೆಗೆ ಬಿಸಿ ಮಾಡಿ. ಆಫ್ ಮಾಡಿ , ತಣ್ಣಗಾಗಲು ಬಿಡಿ. ನಂತರ ಒಂದು ಜಾರ್ ನಲ್ಲಿ ಎಣ್ಣೆಯನ್ನುಸೋಸಿ. ಇದು ಸ್ವಲ್ಪ ಬೆಚ್ಚಗಿರುವಾಗ ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ. ಸುಮಾರು 15 ನಿಮಿಷಗಳ ಕಾಲ ಮಸಾಜ್ ಮಾಡಿ. 30 ನಿಮಿಷಗಳ ನಂತರ ಶಾಂಪೂ ಮತ್ತು ಬೆಚ್ಚಗಿನ ನೀರಿನಿಂದ ಎಣ್ಣೆಯನ್ನು ತೊಳೆಯಿರಿ.

ಮನೆಯಲ್ಲಿಯೇ ತಯಾರಿಸಿ
ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ನೆಲ್ಲಿಕಾಯಿಯ ತೈಲ ಸಿಗುವುದು ವಿರಳ. ಹಾಗೆಯೇ ದುಬಾರಿ ಕೂಡ. ಆದ್ದರಿಂದ ಮನೆಯಲ್ಲಿ ಯೇ ಎಣ್ಣೆ ತಯಾರಿಸಿ ಇದನ್ನು ತಯಾರಿಸುವುದು ಬಹಳ ಸುಲಭ. ಅಷ್ಟೇ ಅಲ್ಲ, ಈ ಎಣ್ಣೆ ಬಹಳ ಬೇಗ ಬಿಳಿಗೂದಲನ್ನು ಕಡಿಮೆ ಮಾಡುವುದರ ಜೊತೆಗೆ ಕೂದಲಿನ ಆರೋಗ್ಯವನ್ನು ಉತ್ತೇಜಿಸಲು ಸಹ ಕೆಲಸ ಮಾಡುತ್ತದೆ.

Leave A Reply

Your email address will not be published.