Gotabaya Rajapaksa flees country : ಶ್ರೀಲಂಕಾ ಅಧ್ಯಕ್ಷರ ಮಾಲ್ಡೀವ್ಸ್​ ಪಲಾಯನಕ್ಕೆ ಸಹಕಾರ ನೀಡಿದ ಆರೋಪವನ್ನು ತಳ್ಳಿ ಹಾಕಿದ ಭಾರತ

ದೆಹಲಿ : Gotabaya Rajapaksa flees country :ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ವಿರುದ್ಧ ದೇಶದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಅವರು ಪತ್ನಿ ಹಾಗೂ ಅಂಗರಕ್ಷಕರ ಸಮೇತರಾಗಿ ದ್ವೀಪ ರಾಷ್ಟ್ರವಾದ ಮಾಲ್ಡೀವ್ಸ್​ಗೆ ಇಂದು ಪಲಾಯನ ಮಾಡಿದ್ದಾರೆ. ಶ್ರೀಲಂಕಾ ಅಧ್ಯಕ್ಷರು ಮಾಲ್ಡೀವ್ಸ್​ಗೆ ಪಲಾಯನ ಮಾಡುವ ಸಂದರ್ಭದಲ್ಲಿ ಭಾರತವು ಇವರಿಗೆ ಹಾದಿ ಸುಗಮಗೊಳಿಸಿದ ಎಂಬ ಆರೋಪಗಳನ್ನು ಭಾರತವು ಸ್ಪಷ್ಟವಾಗಿ ನಿರಾಕರಿಸಿದೆ.

ದೇಶದ ಆರ್ಥಿಕತೆಯನ್ನು ತಪ್ಪಾಗಿ ನಿರ್ವಹಿಸುತ್ತಿರುವ ಗೋಟಬೋಯ ರಾಜಪಕ್ಸೆ, ಬಸಿಲ್​ ರಾಜಪಕ್ಸೆ ಶ್ರೀಲಂಕಾದಿಂದ ಪಲಾಯನ ಮಾಡಲು ಭಾರತವು ಅನುಕೂಲ ಮಾಡಿಕೊಟ್ಟಿದೆ ಎಂಬುದು ಸಂಪೂರ್ಣ ಆಧಾರರಹಿತ ಹಾಗೂ ಊಹಾತ್ಮಕ ವರದಿಯಾಗಿದೆ. ಈ ಮಾಧ್ಯಮ ವರದಿಗಳು ಹೈಕಮಿಷನ್​​ ಸ್ಪಷ್ಟವಾಗಿ ನಿರಾಕರಿಸುತ್ತಿದೆ ಎಂದು ಶ್ರೀಲಂಕಾದಲ್ಲಿರುವ ಭಾರತೀಯ ಹೈ ಕಮಿಷನ್​ ಮಾಹಿತಿ ನೀಡಿದೆ.

ಪ್ರಜಾಸತ್ತಾತ್ಮಕ ವಿಧಾನಗಳು ಮತ್ತು ಮೌಲ್ಯಗಳು, ಸ್ಥಾಪಿತ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಸಾಂವಿಧಾನಿಕ ಚೌಕಟ್ಟಿನ ಮೂಲಕ ಸಮೃದ್ಧಿ ಮತ್ತು ಪ್ರಗತಿಗಾಗಿ ಅವರ ಆಕಾಂಕ್ಷೆಗಳನ್ನು ಸಾಧಿಸಲು ಪ್ರಯತ್ನಿಸುತ್ತಿರುವ ಶ್ರೀಲಂಕಾದ ಜನರಿಗೆ ಭಾರತವು ಬೆಂಬಲವನ್ನು ಮುಂದುವರಿಸುತ್ತದೆ ಎಂದು ಪುನರುಚ್ಚರಿಸಲಾಗಿದೆ” ಎಂದು ಟ್ವೀಟ್‌ನಲ್ಲಿ ತಿಳಿಸಿದೆ.

73 ವರ್ಷದ ರಾಜಪಕ್ಸೆ, ಅವರ ಪತ್ನಿ ಮತ್ತು ಇಬ್ಬರು ಅಂಗರಕ್ಷಕರು ಶ್ರೀಲಂಕಾದ ವಾಯುಪಡೆಯ ವಿಮಾನದಲ್ಲಿ ಮಾಲ್ಡೀವ್ಸ್‌ನ ರಾಜಧಾನಿ ಮಾಲೆಗೆ ಪಲಾಯನ ಮಾಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ದೇಶದ ಆರ್ಥಿಕ ಸಂಕಷ್ಟವನ್ನು ಸರಿಯಾಗಿ ನಿರ್ವಹಿಸುವಲ್ಲಿ ವಿಫಲರಾದ ಶ್ರೀಲಂಕಾ ಅಧ್ಯಕ್ಷರ ಗೊಟಬೋಯ ರಾಜಪಕ್ಸೆ ನಿವಾಸದಲ್ಲಿ ಪ್ರತಿಭಟನೆಯ ಕಾವು ಮಿತಿಮೀರಿದೆ. ಇಂದು ಗೋಟಬೋಯ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರೀಕ್ಷೆಯಿದೆ.

ಇದನ್ನು ಓದಿ : KL Rahul Tattoo : ಕೈಗೆ “ಗೂಬೆ” ಚಿತ್ರವನ್ನು ಹಚ್ಚೆ ಹಾಕಿಸಿಕೊಂಡು ಅಚ್ಚರಿ ಮೂಡಿಸಿದ ರಾಹುಲ್, ಗೂಬೆಯ ಮಹತ್ವ ಏನ್ ಗೊತ್ತಾ..?

ಇದನ್ನೂ ಓದಿ : Manish Pandey Shreyas Iyer :ಮತ್ತೊಬ್ಬ ಮನೀಶ್ ಪಾಂಡೆ ಆಗಲಿದ್ದಾರಾ ಟೀಮ್ ಇಂಡಿಯಾದ ಈ ಆಟಗಾರ !

ಇದನ್ನೂ ಓದಿ : BJP MLA : ನನ್ನ ಕಾರ್ಯಕರ್ತನ ವಾಹನಕ್ಕೆ ಅಡ್ಡಿಪಡಿಸಬೇಡಿ : ವಿವಾದಕ್ಕೆ ಕಾರಣವಾದ ಬಿಜೆಪಿ ಶಾಸಕನ ಶಿಫಾರಸ್ಸು ಪತ್ರ

Sri Lanka President Gotabaya Rajapaksa flees country, India denies reports of facilitating his Maldives trip

Comments are closed.