Army School Recruitment 2022: ಮಿಲಿಟರಿ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

Army School Recruitment 2022:ಸೇನಾ ಕಲ್ಯಾಣ ಶಿಕ್ಷಣ ಸೊಸೈಟಿಯು ದೇಶದ ವಿವಿಧ ಮಿಲಿಟರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗೆ ನೇಮಕಾತಿ ಮಾಡಲು ಮುಂದಾಗಿದೆ. ಒಟ್ಟು 8700 ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಜನವರಿ 28 ಕೊನೆಯ ದಿನಾಂಕವಾಗಿದೆ. ಬಿಎಡ್​ ಪದವಿ ಹೊಂದಿರುವ ಅಭ್ಯರ್ಥಿಗಳು ಟಿಜಿಟಿ , ಪಿಜಿಟಿ ಹಾಗೂ ಪಿಆರ್​ಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್​ಸೈಟ್​ awesindia.com ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ವಿದ್ಯಾರ್ಹತೆ : ಪಿಜಿಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ಬಿಎಡ್​ ವ್ಯಾಸಂಗವನ್ನು ಮಾಡಿ ಕನಿಷ್ಟ 50 ಪ್ರತಿಶತ ಅಂಕಗಳೊಂದಿಗೆ ಉತ್ತೀರ್ಣರಾಗುವುದು ಅನಿವಾರ್ಯವಾಗಿದೆ. ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.


ಟಿಜಿಟಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಪಿಜಿಟಿ ಅಭ್ಯರ್ಥಿಗಳಂತೆ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಬಿಎಡ್​ ವ್ಯಾಸಂಗ ಮಾಡಿ ಕನಿಷ್ಟ 50 ಪ್ರತಿಶತ ಅಂಕಗಳೊಂದಿಗೆ ಉತ್ತೀರ್ಣರಾಗಿರುವುದು ಕಡ್ಡಾಯವಾಗಿದೆ.
ಪಿಆರ್​ಟಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಬಿಎಡ್​ ವ್ಯಾಸಂಗ ಮಾಡಿ 50 ಪ್ರತಿಶತ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಎಂದು ಸೂಚಿಸಲಾಗಿದೆ.


ವಯೋಮಿತಿ : ಪಿಜಿಟಿ, ಟಿಆರ್​ಟಿ ಹಾಗೂ ಪಿಆರ್​ಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಫ್ರೆಶ್​ ಅಭ್ಯರ್ಥಿಗಳು 40 ವರ್ಷ ಒಳಗಿನವರಾಗಿರಬೇಕು. ಅನುಭವಿ ಶಿಕ್ಷಕರು 57 ವರ್ಷ ಒಳಗಿನವರಾಗಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.


ವೇತನ ಶ್ರೇಣಿ : ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆ ಹಾಗೂ ಅನುಭವಗಳನ್ನು ಪರಿಗಣಿಸಿ 30 ಸಾವಿರದಿಂದ 60 ಸಾವಿರ ರೂಪಾಯಿಗಳವರೆಗೆ ವೇತನ ನೀಡಲಾಗುತ್ತದೆ.


ಆಯ್ಕೆ ಪ್ರಕ್ರಿಯೆ ಹೀಗಿರಲಿದೆ : ಪಿಜಿಟಿ, ಟಿಆರ್​ಟಿ ಹಾಗೂ ಪಿಆರ್​ಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಸ್ಕ್ರೀನಿಂಗ್​ ಟೆಸ್ಟ್​ ಕಡ್ಡಾಯವಾಗಿರಲಿದೆ. ಬಳಿಕ ಸಂದರ್ಶನ, ಬೋಧನಾ ಕೌಶಲ್ಯ, ಕಂಪ್ಯೂಟರ್​ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್​ಲೈನ್​ ಸ್ಕ್ರೀನಿಂಗ್​ ಪರೀಕ್ಷೆಗೆ ಹಾಜರುಪಡಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಸಂದರ್ಶನಕ್ಕೆ ಬರಲಿದ್ದಾರೆ. ಇಆದ ಬಳಿಕ ಬೋಧನಾ ಕೌಶಲ್ಯ ಹಾಗೂ ಕಂಪ್ಯೂಟರ್​ ಪರೀಕ್ಷೆಗೆ ಇಲಾಖೆ ವತಿಯಿಂದ ಕರೆ ನೀಡಲಾಗುತ್ತದೆ.


ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಲು 2022ರ ಜನವರಿ 28 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ 2022ರ ಫೆಬ್ರವರಿ 10 ರಂದು ಪ್ರವೇಶ ಪತ್ರ ನೀಡಲಾಗುತ್ತದೆ. ಆನ್​ಲೈನ್ ಸ್ಕ್ರೀನಿಂಗ್ ಪರೀಕ್ಷೆಯು 19 ಹಾಗೂ 20 ಫೆಬ್ರವರಿಯಂದು ನಡೆಯಲಿದೆ. ಅರ್ಹತಾ ಪರೀಕ್ಷೆಯ ದಿನಾಂಕವನ್ನು ಫೆಬ್ರವರಿ 28ರಂದು ಘೋಷಿಸಲಾಗುತ್ತದೆ.


ಅಲ್ಲದೇ ಈ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯರ ಪ್ರಜೆಗಳೇ ಆಗಿರಬೇಕು. ಅಭ್ಯರ್ಥಿಗಳಿಗೆ ಆಗ್ರಾ, ನೋಯ್ಡಾ, ವಾರಣಾಸಿ, ಲಕ್ನೋ, ಆಗ್ರಾ, ದೆಹಲಿ, ಕಾನ್ಪುರ, ಭೋಪಾಲ್​, ಮೀರತ್​, ಡೆಹರಾಡೂನ್​, ನೋಯ್ಡಾಮ ಜೈಪುರ, ಝಾನ್ಸಿ, ಬರೇಲಿ ಹಾಗೂ ಜಬಲ್ಪುರದಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಇಲಾಖೆ ಹೇಳಿದೆ.

Army Public School Recruitment 2022: TGT, PGT, PRT 8700 Posts

ಇದನ್ನು ಓದಿ : Private Hospital Corona Treatment : ರಾಜ್ಯದಲ್ಲಿ ಏರುತ್ತಲೇ ಇದೆ‌ ಕೊರೋನಾ : ಚಿಕಿತ್ಸೆಗೆ ಸಜ್ಜಾದ ಖಾಸಗಿ ಆಸ್ಪತ್ರೆಗಳು

ಇದನ್ನೂ ಓದಿ : Samantha Mental Problem : ಟಾಲಿವುಡ್ ನಟಿಯ ಸತ್ಯ ದರ್ಶನ : ನನಗೂ ಮಾನಸಿಕ ಸಮಸ್ಯೆ‌ ಇತ್ತು ಎಂದ ಸಮಂತಾ

Comments are closed.