ಭಾರತ್ ಎಲೆಕ್ಟ್ರಾನಿಕ್ಸ್‌ನಲ್ಲಿ 119 ಟ್ರೈನಿ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಇಲ್ಲಿ ಅಪ್ಲೈ ಮಾಡಿ
Bharat Electronics Trainee Engineer Recruitment For 2026: ಕೇಂದ್ರ ಸಾರ್ವಜನಿಕ ವಲಯದ ಪ್ರತಿಷ್ಠಿತ ಸಂಸ್ಥೆಯಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL), 2026ನೇ ಸಾಲಿನ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 119 ಟ್ರೈನಿ ಇಂಜಿನಿಯರ್-I ಮತ್ತು ಟ್ರೈನಿ ಆಫೀಸರ್-I ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ 9, 2026 ಕೊನೆಯ ದಿನಾಂಕವಾಗಿದೆ.
ಹುದ್ದೆಗಳ ವಿವರ ಮತ್ತು ಹಂಚಿಕೆ:
ಒಟ್ಟು 119 ಹುದ್ದೆಗಳನ್ನು ವಿವಿಧ ತಾಂತ್ರಿಕ ವಿಭಾಗಗಳಲ್ಲಿ ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ:
ಎಲೆಕ್ಟ್ರಾನಿಕ್ಸ್: 65 ಹುದ್ದೆಗಳು (ಸಾಮಾನ್ಯ-30, ಒಬಿಸಿ-20, ಎಸ್‌ಸಿ-7, ಎಸ್‌ಟಿ-4, ಇಡಬ್ಲ್ಯೂಎಸ್-4).
ಮೆಕ್ಯಾನಿಕಲ್: 37 ಹುದ್ದೆಗಳು (ಸಾಮಾನ್ಯ-15, ಒಬಿಸಿ-10, ಎಸ್‌ಸಿ-6, ಎಸ್‌ಟಿ-3, ಇಡಬ್ಲ್ಯೂಎಸ್-3).
ಎಲೆಕ್ಟ್ರಿಕಲ್: 08 ಹುದ್ದೆಗಳು (ಸಾಮಾನ್ಯ-4, ಒಬಿಸಿ-2, ಎಸ್‌ಸಿ-1, ಇಡಬ್ಲ್ಯೂಎಸ್-1).
ಕಂಪ್ಯೂಟರ್ ಸೈನ್ಸ್: 06 ಹುದ್ದೆಗಳು (ಇಡಬ್ಲ್ಯೂಎಸ್-3, ಎಸ್‌ಟಿ-3).
ಕೆಮಿಕಲ್: 01 ಹುದ್ದೆ (ಸಾಮಾನ್ಯ ವರ್ಗಕ್ಕೆ ಮಾತ್ರ).
ಟ್ರೈನಿ ಆಫೀಸರ್ (ಫೈನಾನ್ಸ್): 02 ಹುದ್ದೆಗಳು (ಎಸ್‌ಸಿ-1, ಇಡಬ್ಲ್ಯೂಎಸ್-1).
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:
ವಿದ್ಯಾರ್ಹತೆ: ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಸಂಬಂಧಪಟ್ಟ ವಿಭಾಗದಲ್ಲಿ ನಾಲ್ಕು ವರ್ಷದ ಬಿ.ಇ (B.E), ಬಿ.ಟೆಕ್ (B.Tech) ಅಥವಾ ಬಿ.ಎಸ್ಸಿ ಇಂಜಿನಿಯರಿಂಗ್ (B.Sc Engineering) ಪದವಿ ಹೊಂದಿರಬೇಕು.
ವಯೋಮಿತಿ: ಜನವರಿ 1, 2026ಕ್ಕೆ ಅನ್ವಯವಾಗುವಂತೆ ಸಾಮಾನ್ಯ ಮತ್ತು ಇಡಬ್ಲ್ಯೂಎಸ್ (EWS) ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷ ನಿಗದಿಪಡಿಸಲಾಗಿದೆ. (ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದಂತೆ ವಯೋಮಿತಿ ಸಡಿಲಿಕೆ ಇರಲಿದೆ).
ಅರ್ಜಿ ಶುಲ್ಕ ಮತ್ತು ಪಾವತಿ ವಿಧಾನ:
ಶುಲ್ಕ: ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ₹150 ಅರ್ಜಿ ಶುಲ್ಕ ಹಾಗೂ ಶೇ. 18ರಷ್ಟು ಜಿಎಸ್‌ಟಿ (GST) ಅನ್ವಯವಾಗಲಿದೆ.
ಮಾರ್ಚ್ 2026ರೊಳಗೆ ₹500 ನೋಟು ಅಮಾನ್ಯೀಕರಣ? ಕೇಂದ್ರ ಸರ್ಕಾರ- ಆರ್‌ಬಿಐ ನೀಡಿದ ಸ್ಪಷ್ಟನೆ ಇಲ್ಲಿದೆ
ವಿನಾಯಿತಿ: ಎಸ್‌ಸಿ (SC), ಎಸ್‌ಟಿ (ST) ಮತ್ತು ವಿಕಲಚೇತನ (PwBD) ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಪಾವತಿ: ಶುಲ್ಕವನ್ನು ಎಸ್‌ಬಿಐ ಕಲೆಕ್ಟ್ (SBI Collect) ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಪಾವತಿಸಬೇಕು. ಅರ್ಜಿ ನಮೂನೆಯಲ್ಲಿ ನೀಡಲಾದ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನೇ ಶುಲ್ಕ ಪಾವತಿಸುವಾಗಲೂ ಬಳಸಲು ಸೂಚಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತರು ಬಿಇಎಲ್ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ‘Careers’ ವಿಭಾಗದಲ್ಲಿ ಲಭ್ಯವಿರುವ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು. ಜನವರಿ 9ರ ನಂತರ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.



