ಕೊಂಕಣ ರೈಲ್ವೆ ಟ್ರೈನಿ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಪ್ರಕಟ: ಅರ್ಹತೆ, ಸಂಬಳ, ಆಯ್ಕೆ ಪ್ರಕ್ರಿಯೆ ಸಂಪೂರ್ಣ ಮಾಹಿತಿ ಪರಿಶೀಲಿಸಿ
ಭಾರತ ಪಶ್ಚಿಮ ತೀರವನ್ನು ಒಟ್ಟುಗೂಡಿಸುವ ಅತಿ ದೊಡ್ಡ ರೈಲ್ವೆ ಸಾರಿಗೆ ಕೊಂಕಣ ರೈಲ್ವೆ. ರೈಲ್ವೆಯಲ್ಲಿ ಕೆಲಸ ಮಾಡಬೇಕೆಂದು ತಯಾರಿ ನಡೆಸುತ್ತಿರುವ ಯುವಕರಿಗೆ ಇದೀಗ ಸುವರ್ಣಾವಕಾಶ. ಕೊಂಕಣ ರೈಲ್ವೆ 190 ಅಪ್ರೆಂಟಿಸ್ ಶಿಪ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿದೆ. ಅರ್ಜಿ ಪ್ರಕ್ರಿಯೆಯು ಫೆಬ್ರವರಿ 27 ರಿಂದ ಪ್ರಾರಂಭವಾಗಿದ್ದು ಮಾರ್ಚ್ 20 ರವರೆಗೆ ಮುಂದುವರಿಯಲಿದೆ. ಈ ನೇಮಕಾತಿಯಲ್ಲಿ ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ಮಾತ್ರ ಭರ್ತಿ ಮಾಡಬಹುದು. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳೇನು ಎಂದು ನೋಡೋಣ.
ನೇಮಕಾತಿ ವಿವರ
ಕೊಂಕಣ ರೈಲ್ವೆಯ ಈ ನೇಮಕಾತಿಯಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 190 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ಹುದ್ದೆವಾರು ನೇಮಕಾತಿ ವಿವಿರ ಹೀಗಿದೆ.
ಸಿವಿಲ್ ಎಂಜಿನಿಯರಿಂಗ್ – 30
ವಿದ್ಯುತ್ ಎಂಜಿನಿಯರಿಂಗ್ – 20
ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ – 10
ಯಾಂತ್ರಿಕ ಎಂಜಿನಿಯರಿಂಗ್ – 20
ಡಿಪ್ಲೊಮಾ (ಸಿವಿಲ್) – 30
ಡಿಪ್ಲೊಮಾ (ಎಲೆಕ್ಟ್ರಿಕಲ್) – 20
ಡಿಪ್ಲೊಮಾ (ಎಲೆಕ್ಟ್ರಾನಿಕ್ಸ್) – 10
ಡಿಪ್ಲೊಮಾ (ಮೆಕ್ಯಾನಿಕಲ್) – 20
ಸಾಮಾನ್ಯ ಸ್ಟ್ರೀಮ್ ಪದವೀಧರರು – 30
ವಿದ್ಯಾರ್ಹತೆ
ಈ ನೇಮಕಾತಿಯಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ/ಎಂಜಿನಿಯರಿಂಗ್ ಪದವಿ/ಡಿಪ್ಲೊಮಾ ಇತ್ಯಾದಿಗಳನ್ನು ಪಡೆದಿರಬೇಕು.
ವಯೋಮಿತಿ
ಕೊಂಕಣ ರೈಲ್ವೆ ಅಪ್ರೆಂಟಿಸ್‌ಶಿಪ್ ನೇಮಕಾತಿಯಲ್ಲಿ ಭಾಗವಹಿಸಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 25 ವರ್ಷಗಳು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.
ಹೆಚ್ಚಿನ ನೇಮಕಾತಿ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ.
ಅರ್ಜಿ ಶುಲ್ಕ
ಈ ನೇಮಕಾತಿಯಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಅರ್ಜಿ ಶುಲ್ಕ ಭರಿಸಬೇಕಾಗುತ್ತದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100 ರೂ. ಆಗಿರುತ್ತದೆ. ಆದರೆ SC, ST, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು EWS ವರ್ಗಗಳ ಅಭ್ಯರ್ಥಿಗಳು ಉಚಿತವಾಗಿ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನೂ ಓದಿ: HPCL ನಿಂದ ಆಫೀಸರ್ ಲೆವಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ವೇತನ 1 ಲಕ್ಷಕ್ಕೂ ಅಧಿಕ
ಆಯ್ಕೆ ಪ್ರಕ್ರಿಯೆ ಹೇಗೆ?
ಈ ನೇಮಕಾತಿಯಲ್ಲಿ ಅಭ್ಯರ್ಥಿಗಳನ್ನು ಅರ್ಹತೆಯ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ದಾಖಲೆ ಪರಿಶೀಲನೆ ನಡೆಯಲಿದೆ.



