RRB NTPC 2025 ಫಲಿತಾಂಶ ಪ್ರಕಟ: ನಿಮ್ಮ ಫಲಿತಾಂಶ ಹೀಗೆ ಪರೀಕ್ಷಿಸಿ
RRB NTPC Result 2025: ರೈಲ್ವೆ ನೇಮಕಾತಿ ಮಂಡಳಿಯು (RRB) ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರೀಸ್ 2025 (ಎನ್‌ಟಿಪಿಸಿ) ಫಲಿತಾಂಶವನ್ನು ಪ್ರಕಟಿಸಿದೆ.
ಈ ಪರೀಕ್ಷೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಆರ್‌ಆರ್‌ಬಿಯ ಅಧಿಕೃತ ವೆಬ್‌ಸೈಟ್‌ಗೆ ತೆರಳಿ ಫಲಿತಾಂಶವನ್ನು ಪರೀಕ್ಷಿಸಬಹುದಾಗಿದೆ.
ಆರ್‌ಆರ್‌ಬಿಯು ಎನ್‌ಟಿಪಿಸಿ ನೇಮಕಾತಿಯ ಮೂಲಕ ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್, ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ ಮತ್ತು ಟ್ರೈನ್ ಕ್ಲರ್ಕ್ ಹುದ್ದೆಗಳಿಗೆ ಪರೀಕ್ಷೆ ನಡೆಸಿತ್ತು.
ಈ ಹುದ್ದೆಗಳಿಗೆ ಪದವಿ ಮತ್ತು ಪದವಿಪೂರ್ವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು. ಈ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ – 1) ಯನ್ನು ಜೂನ್ 5 ರಿಂದ ಜೂನ್ 24, 2025 ರವರೆಗೆ ದೇಶಾದ್ಯಂತ ನಡೆಸಿತ್ತು.
ಅಧಿಕೃತ ಮಾಹಿತಿಯ ಪ್ರಕಾರ ಈ ಹುದ್ದೆಗೆ ಆರು ದಶಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಸಿಬಿಟಿ – 1 ಎಮ್‌ಸಿಕ್ಯೂ ಪರೀಕ್ಷೆಯಾಗಿದ್ದು ಇದರಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಸಿಬಿಟಿ – 2 ಪರೀಕ್ಷೆಗೆ ಹಾಜಾರಾಗಲು ಅರ್ಹರಾಗಿರುತ್ತಾರೆ. ನಂತರ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಭಾರತೀಯ ರೈಲ್ವೆಯಲ್ಲಿ ಅಂತಿಮ ನೇಮಕಾತಿಯನ್ನು ಪಡೆಯಲು ಅಭ್ಯರ್ಥಿಗಳು ಎಲ್ಲಾ ಹಂತಗಳಲ್ಲಿ ಉತ್ತೀರ್ಣರಾಗಿಲೇಬೇಕು.
ಇದನ್ನೂ ಓದಿ: ಬರೋಬ್ಬರಿ 61,000 ಅಭ್ಯರ್ಥಿಗಳಿಗೆ ಉದ್ಯೋಗ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ
ಆರ್‌ಆರ್‌ಬಿ ಎನ್‌ಟಿಪಿಸಿ 2025 ಫಲಿತಾಂಶ ಪರಿಶೀಲಿಸುವುದು ಹೇಗೆ?
– ಮೊದಲು ಆರ್‌ಆರ್‌ಬಿಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
– ಅಲ್ಲಿ ‘RRB NTPC CBT-1 ಫಲಿತಾಂಶ 2025’ ಮೇಲೆ ಕ್ಲಿಕ್ಕಿಸಿ.
– ಫಲಿತಾಂಶದ ಪಿಡಿಎಫ್ ತೆರೆದುಕೊಳ್ಳತ್ತದೆ. ಅಲ್ಲಿ Ctrl+F ಬಳಸಿ ನಿಮ್ಮ ರೋಲ್ ನಂಬರ್ ಅನ್ನು ಹುಡುಕಿ.
– ಆ ಪಿಡಿಎಫ್‌ನಲ್ಲಿ ನಿಮ್ಮ ರೋಲ್ ನಂ. ಕಾಣಿಸಿಕೊಂಡರೆ, ನೀವು ಸಿಬಿಟಿ – 2 ಕ್ಕೆ ಅರ್ಹತ ಪಡೆದಿದ್ದೀರಿ ಎಂದು ಅರ್ಥ.
– ಭವಿಷ್ಯದ ಉಲ್ಲೇಖಕ್ಕಾಗಿ ಪಿಡಿಎಫ್ ಅನ್ನು ಡೌನ್‌ಲೋಡ್ ಮಾಡಿಕೊಂಡು, ಸೇವ್ ಮಾಡಿಟ್ಟುಕೊಳ್ಳಿ.



