ಕೇರಳದಲ್ಲಿ ಮುಂಗಾರು ಆಗಮನ ಮತ್ತಷ್ಟು ವಿಳಂಬ..ಜೂನ್ ಮೊದಲ ವಾರ ಮುಂಗಾರು ಪ್ರವೇಶ..!
ಪ್ರತಿ ವರ್ಷ ಜೂನ್ ಮೊದಲ ವಾರದಲ್ಲಿ ನೈಋತ್ಯ ಮುಂಗಾರು ಕೇರಳಕ್ಕೆ ಪ್ರವೇಶ ಪಡೆಯುತ್ತೆ. ಆದರೆ ಈ ಬಾರಿ ವಾಡಿಕೆಗೂ ಮೊದಲೇ ಅಂದರೆ ಮೇ 26ರಿಂದಲೇ ಮುಂಗಾರು ಭಾರತ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭವಿಷ್ಯ ನುಡಿದಿತ್ತು. ಆದರೆ ಇದೀಗ ಈ ಭವಿಷ್ಯ ತಲೆಕೆಳಗಾಗಿದ್ದು ಮುಂಗಾರು ಮಾರುತಗಳು ಇನ್ನೂ ಕೇರಳ ಪ್ರವೇಶಿಸಿಲ್ಲ ಎನ್ನಲಾಗಿದೆ.

ಮುಂಗಾರು ಮೊದಲು ಕೇರಳವನ್ನು ತಲುಪಿ, ಅಲ್ಲಿಂದ ಮುಂದಿನ ಒಂದು ವಾರದಲ್ಲಿ ದಕ್ಷಿಣ ರಾಜ್ಯಗಳ ಮೂಲಕ ಉತ್ತರ ಭಾರತದ ರಾಜ್ಯಗಳನ್ನು ತಲುಪುತ್ತದೆ. ಭಾರತದ ವಾರ್ಷಿಕ ಸುಮಾರು ಶೇ.70 ರಷ್ಟು ಮಳೆ ಇದೇ ಮುಂಗಾರಿನಿಂದ ಬರುವುದರಿಂದ. ಮುಂಗಾರು ಆಗಮನ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ಸದ್ಯಕ್ಕೆ ದೊರಕಿರುವ ಹವಾಮಾನ ಮುನ್ಸೂಚನೆ ಪ್ರಕಾರ, ಜೂನ್ ಮೊದಲ ವಾರದಲ್ಲಿ ಮುಂಗಾರು ಕೇರಳಕ್ಕೆ ಅಧಿಕೃತಪ್ರವೇಶ ಪಡೆಯಲಿದೆ ಎನ್ನಲಾಗಿದೆ. ಸದ್ಯ ಕರ್ನಾಟಕ, ಕೇರಳ ಸೇರಿದಂತೆ ದಕ್ಷಿಣ ಭಾರತದಲ್ಲಿ ಸೂರ್ಯನ ಪ್ರಖರತೆ ಮಿತಿಮೀರಿದ್ದು, ಮಳೆಗಾಲ ಯಾವಾಗ ಆರಂಭಗೊಳ್ಳುತ್ತೆ ಎಂದು ಈ ಭಾಗದ ಜನತೆ ಕಾಯುತ್ತಿದ್ದಾರೆ.
ಇದನ್ನೂ ಓದಿ : ಬಕ್ರೀದ್‌ಗೆ ಮುಸ್ಲಿಂ ಸಮುದಾಯದ ಮಹತ್ವದ ನಿರ್ಧಾರ : ಸ್ವಯಂಪ್ರೇರಿತ ಗೋಹತ್ಯೆ ನಿಷೇಧ ಘೋಷಣೆ!
ಸದ್ಯ ಕೇರಳದ ವಿವಿಧೆಡೆ ಭಾರೀ ಮಳೆಯಾಗುತ್ತಿದೆ. ಅಲ್ಲಲ್ಲಿ ಯೆಲ್ಲೋ ಅಲರ್ಟ್ ಕೂಡ ಘೋಷಣೆಯಾಗಿದೆ. ಆದರೆ ಹವಾಮಾನ ಇಲಾಖೆ ಮುಂಗಾರು ಆಗಮನವಾಗಿದೆ ಎಂದು ಘೋಷಿಸಲು ಕೇರಳ ವ್ಯಾಪ್ತಿಯಲ್ಲಿ ಗುರುತಿಸಲಾದ 14 ಹವಾಮಾನ ಕೇಂದ್ರಗಳಲ್ಲಿ ಕನಿಷ್ಠ ಶೇ. 60 ಕೇಂದ್ರಗಳು ಸತತ ಎರಡು ದಿನಗಳವರೆಗೆ 2.5 ಮಿ.ಮೀ. ಅಥವಾ ಅದಕ್ಕಿಂತ ಹೆಚ್ಚು ಮಳೆ ದಾಖಲಿಸಬೇಕು. ಇದರೊಂದಿಗೆ ನಿರ್ದಿಷ್ಟ ಗಾಳಿ ಮತ್ತು ಮೋಡದ ಹೊದಿಕೆಯ ಮಿತಿಗಳನ್ನು ಪೂರೈಸಿರಬೇಕು. ಈ ಮಾನದಂಡಗಳನ್ನು ಪೂರೈಸಲು ಸದ್ಯದ ಕೇರಳದ ಹವಾಮಾನ ಪರಿಸ್ಥಿತಿ ವಿಫಲವಾದ ಹಿನ್ನೆಲೆಯಲ್ಲಿ ಮುಂಗಾರಿನ ಆಗಮನವಾಗಿಲ್ಲ ಎಂದು ಐಎಂಡಿ ಹೇಳಿದೆ.