“ಅರ್ಧ ಚಡ್ಡಿ ಹಾಕಿಕೊಂಡು ಹೆಂಡತಿ ಮಾಡ್ತಿದ್ದ ರೀಲ್ಸ್ ನೋಡಲು ಆಗ್ತಿರಲಿಲ್ಲ”: ಸುಚಿತ್ರಾ ಕರಾಳ ಮುಖ ಬಿಚ್ಚಿಟ್ಟ ಪತಿ ಮಹೇಶ್!

Suchitra Naik-Astrologer Kamalakar Bhat relationship:: ಶಿವಮೊಗ್ಗ: ಸಿದ್ದಾಪುರದ ವಸಂತ ನಾಯ್ಕ್ ಕೊಲೆ ಪ್ರಕರಣದ ಎ1 ಆರೋಪಿ ಸುಚಿತ್ರಾ ನಾಯ್ಕ್ ಅವರ ವರ್ತನೆಯ ಬಗ್ಗೆ ಆಕೆಯ ಪತಿ ಮಹೇಶ್ ನಾಯ್ಕ್ ಸ್ಫೋಟಕ ಸತ್ಯಗಳನ್ನು ಹೊರಹಾಕಿದ್ದಾರೆ. “ಸಮಾಜ ಸೇವಕ” ಎಂದು ಕರೆಸಿಕೊಳ್ಳುತ್ತಿದ್ದ ಜ್ಯೋತಿಷಿ ಕಮಲಾಕರ್ ಭಟ್‌ನ ಮೋಜಿನ ಬದುಕಿಗೆ ಮರುಳಾಗಿದ್ದ ಸುಚಿತ್ರಾ, ತನ್ನ ಸಂಸಾರವನ್ನೇ ಸ್ಮಶಾನ ಮಾಡಿದ್ದಾಳೆ ಎಂದು ಅವರು ಆಸ್ಪತ್ರೆಯ ಮಂಚದ ಮೇಲಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೀಲ್ಸ್ ಹುಚ್ಚು ಮತ್ತು ಮೋಜಿನ ಲಹರಿ:

ಸುಚಿತ್ರಾ ಸಾಮಾಜಿಕ ಜಾಲತಾಣಗಳಲ್ಲಿ ಅತಿಯಾಗಿ ತೊಡಗಿಸಿಕೊಂಡಿದ್ದಳು. “ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಆಕೆ ಮಾಡುತ್ತಿದ್ದ ವಿಡಿಯೋಗಳನ್ನು ನೋಡಲು ನಮಗೆ ಅಸಹ್ಯವಾಗುತ್ತಿತ್ತು. ಅರ್ಧ ಚಡ್ಡಿ ಹಾಕಿಕೊಂಡು ವಿಡಿಯೋ ಮಾಡುವುದು, ಟೇಬಲ್ ಮೇಲೆ ಹಣದ ಕಂತೆ ಇಟ್ಟುಕೊಂಡು ಪ್ರದರ್ಶನ ಮಾಡುವುದೇ ಆಕೆಯ ಕೆಲಸವಾಗಿತ್ತು. ಮೋಜಿನ ಬದುಕಿಗಾಗಿ ತನ್ನ ಮಕ್ಕಳನ್ನೇ ಆಕೆ ಮರೆತಿದ್ದಳು,” ಎಂದು ಮಹೇಶ್ ಅಳಲು ತೋಡಿಕೊಂಡಿದ್ದಾರೆ.

ಜ್ಯೋತಿಷಿಯ ಹಣದ ಬಲ:

ಈ ಎಲ್ಲ ಮೋಜಿನ ಜೀವನಕ್ಕೆ ಜ್ಯೋತಿಷಿ ಕಮಲಾಕರ್ ಭಟ್ ಬೆನ್ನೆಲುಬಾಗಿ ನಿಂತಿದ್ದ ಎನ್ನಲಾಗಿದೆ. ಸುಚಿತ್ರಾಗೆ ದುಬಾರಿ ಕಾರುಗಳು, ಬೈಕುಗಳು ಮತ್ತು ಲಕ್ಷಾಂತರ ಹಣವನ್ನು ಜ್ಯೋತಿಷಿಯೇ ಒದಗಿಸುತ್ತಿದ್ದ. “ಸ್ವಾಮೀಜಿ ಹಣ ಕೊಡುತ್ತಿದ್ದ ಎಂಬ ಕಾರಣಕ್ಕೆ ಆಕೆ ಇಷ್ಟೆಲ್ಲಾ ಆಟವಾಡುತ್ತಿದ್ದಳು. ಆತನ ಜೊತೆಗಿನ ಅಕ್ರಮ ಸಂಬಂಧಕ್ಕೆ ನಮ್ಮ ಮಗಳೇ ಅಡ್ಡಿಯಾಗಿದ್ದಳು,” ಎಂದು ಮಹೇಶ್ ಆರೋಪಿಸಿದ್ದಾರೆ.

ಜ್ಯೋತಿಷಿ ಕಮಲಾಕರ್‌ ಭಟ್‌ ಜೊತೆ 5 ತಿಂಗಳಿಂದ ನನ್ನ ಪತ್ನಿಯ ಅಕ್ರಮ ಸಂಬಂಧ; ಸಿದ್ದಾಪುರದ ಮಹೇಶ್‌ ನಾಯ್ಕ್‌ ಹೇಳಿದ್ದಿಷ್ಟು

“ಸಾಯಿಸಿಯಾದರೂ ಮಗಳನ್ನ ಕರೆದೊಯ್ಯುವೆ ಎಂದಿದ್ದಳು”:

ದಾಳಿಯ ದಿವಸದ ಭೀಕರತೆಯನ್ನು ನೆನೆದ ಮಹೇಶ್, “ಅವರು ಬಂದಿದ್ದು ನನ್ನನ್ನಲ್ಲ, ನನ್ನ ಮಗಳನ್ನು ಟಾರ್ಗೆಟ್ ಮಾಡಿ. ‘ನಿನ್ನನ್ನು ಸಾಯಿಸಿಯಾದರೂ ಮಗಳನ್ನ ಜ್ಯೋತಿಷಿ ಬಳಿ ಕರೆದೊಯ್ಯುತ್ತೇನೆ’ ಎಂದು ಸುಚಿತ್ರಾ ಕಿರುಚಿದ್ದಳು. ನಾನು ಮಗಳನ್ನು ರಕ್ಷಿಸಲು ಹೋದಾಗ ನಮ್ಮ ಅಣ್ಣ ವಸಂತ ನಾಯ್ಕ್ ಅಡ್ಡ ಬಂದರು. ಕ್ರೂರಿಗಳು ಆತನ ಎದೆಗೆ ಚಾಕು ಚುಚ್ಚಿ ಸಾಯಿಸಿದರು,” ಎಂದು ಕಣ್ಣೀರು ಹಾಕಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories