ಜ್ಯೋತಿಷಿ ಕಮಲಾಕರ್ ಭಟ್ ಜಾತಿ ‘ಭಟ್’ ಅಲ್ಲವೇ ಅಲ್ಲ! ಹಾಗಿದ್ರೆ ಯಾವ ಜಾತಿ ಈ ಜ್ಯೋತಿಷಿ?

Astrologer Kamalakar Bhats caste: ಸಮಾಜಕ್ಕೆ ಧರ್ಮದ ಬೋಧನೆ ಮಾಡುತ್ತಾ, ಅಕ್ರಮ ಸಂಬಂಧದಲ್ಲಿ ತೊಡಗಿ ಕೊಲೆಗೆ ಪ್ರಚೋದನೆ ನೀಡಿದ ಈ ಗುರೂಜಿಯ ಮುಖವಾಡ ಒಂದೊಂದಾಗಿ ಕಳಚುತ್ತಿರುವುದು ಸಿದ್ದಾಪುರ ಹಾಗೂ ಶಿವಮೊಗ್ಗ ಭಾಗದ ಜನರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.‌

Astrologer Kamalakar Bhats caste:

Astrologer Kamalakar Bhats caste: ಸಿದ್ದಾಪುರದ ವಸಂತ ನಾಯ್ಕ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಅಲಿಯಾಸ್ ಕಮಲಾಕರ್ ಗುರೂಜಿಯ ಬಗ್ಗೆ ಈಗ ಬೆಚ್ಚಿಬೀಳಿಸುವ ಮಾಹಿತಿಗಳು ಹೊರಬರುತ್ತಿವೆ. ಜನರ ಭವಿಷ್ಯ ಹೇಳುತ್ತಾ ಕೋಟಿಗಟ್ಟಲೆ ಆಸ್ತಿ ಮಾಡಿದ್ದ ಈತ, ಸಮಾಜದಲ್ಲಿ ಗೌರವ ಪಡೆಯಲು ತನ್ನ ಮೂಲ ಗುರುತನ್ನೇ ಬದಲಾಯಿಸಿಕೊಂಡಿದ್ದನೇ ಎಂಬ ಸಂಶಯ ಈಗ ದಟ್ಟವಾಗಿದೆ.

ಪೊಲೀಸ್ ತನಿಖೆಯ ವೇಳೆ ಕಮಲಾಕರ್ ಭಟ್ ಮೂಲತಃ ಸಿದ್ದಾಪುರ ತಾಲೂಕಿನ ಹೆಮ್ಮನಬೈಲ್ ಗ್ರಾಮದವನು ಎಂದು ತಿಳಿದುಬಂದಿದೆ. ಆದರೆ, ಈತನ ಅಸಲಿ ಹೆಸರು ‘ಕಮಲಾಕರ್ ಹೆಗಡೆ’ ಎಂಬ ಚರ್ಚೆಗಳು ಈಗ ಜೋರಾಗಿವೆ. ಜ್ಯೋತಿಷ್ಯ ವೃತ್ತಿಯಲ್ಲಿ ಭಟ್ ಎಂಬ ಹೆಸರಿದ್ದರೆ ಜನ ಸುಲಭವಾಗಿ ನಂಬುತ್ತಾರೆ ಎಂಬ ಕಾರಣಕ್ಕೆ ಈತ ತನ್ನ ಹೆಸರಿನ ಮುಂದಿದ್ದ ‘ಹೆಗಡೆ’ಯನ್ನು ತೆಗೆದು ‘ಭಟ್’ ಎಂದು ಬದಲಾಯಿಸಿಕೊಂಡಿದ್ದ ಎನ್ನಲಾಗುತ್ತಿದೆ.

ಕೇವಲ ಹೆಸರಷ್ಟೇ ಅಲ್ಲದೆ, ತನ್ನ ನಡೆ ನುಡಿ ಹಾಗೂ ವೇಷಭೂಷಣಗಳ ಮೂಲಕ ತಾನೊಬ್ಬ ಶ್ರೇಷ್ಠ ಜ್ಯೋತಿಷಿ ಎಂದು ಬಿಂಬಿಸಿಕೊಂಡಿದ್ದ ಈತ, ದೂರದ ಊರುಗಳ ಜನರನ್ನು ನಂಬಿಸಿ ಐಷಾರಾಮಿ ಜೀವನ ನಡೆಸುತ್ತಿದ್ದ. ಅಕ್ರಮ ಸಂಬಂಧ ಮತ್ತು ಕೊಲೆ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಈತನ ಈ ‘ಜಾತಿ ಬದಲಾವಣೆ’ಯ ಆಯಾಮವು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಸಮಾಜಕ್ಕೆ ಧರ್ಮದ ಬೋಧನೆ ಮಾಡುತ್ತಾ, ಅಕ್ರಮ ಸಂಬಂಧದಲ್ಲಿ ತೊಡಗಿ ಕೊಲೆಗೆ ಪ್ರಚೋದನೆ ನೀಡಿದ ಈ ಗುರೂಜಿಯ ಮುಖವಾಡ ಒಂದೊಂದಾಗಿ ಕಳಚುತ್ತಿರುವುದು ಸಿದ್ದಾಪುರ ಹಾಗೂ ಶಿವಮೊಗ್ಗ ಭಾಗದ ಜನರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.‌

ಖ್ಯಾತ ಟಿವಿ ಜ್ಯೋತಿಷಿ ಕಮಲಾಕರ್‌ ಭಟ್‌ ಬಂಧನ; ಅಕ್ರಮ ಸಂಬಂಧದ ದೂರು ನೀಡಿದ್ದಕ್ಕೆ ಕೊಲೆ ಸಂಚು ಮಾಡಿದ್ರಾ ಗುರೂಜಿ?

ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಎರಡು ಮಕ್ಕಳ ತಾಯಿಯಾದ ಸುಚಿತ್ರಾ ನಡುವಿನ ಅಕ್ರಮ ಸಂಬಂಧವೇ ಈ ಇಡೀ ರಕ್ತಪಾತಕ್ಕೆ ಮೂಲ ಕಾರಣವಾಗಿದೆ. ಬೆಂಗಳೂರಿನಲ್ಲಿ ಕೆಲಸಕ್ಕೆಂದು ಸೇರಿದ ಸುಚಿತ್ರಾ, ಅಲ್ಲಿ ಜ್ಯೋತಿಷಿಯ ಪರಿಚಯ ಮಾಡಿಕೊಂಡು ನಂತರ ಲವ್ವಿಡವ್ವಿಯಲ್ಲಿ ತೊಡಗಿದ್ದಳು. ಇವರಿಬ್ಬರ ಸಂಬಂಧ ಯಾವ ಮಟ್ಟಕ್ಕೆ ಹೋಗಿತ್ತೆಂದರೆ, ಜ್ಯೋತಿಷಿ ಆಕೆಗಾಗಿ ಶಿವಮೊಗ್ಗದಲ್ಲಿ ಪ್ರತ್ಯೇಕ ಮನೆಯನ್ನು ಬಾಡಿಗೆಗೆ ಕೊಡಿಸಿ ಸಕಲ ಐಷಾರಾಮಿ ಸೌಲಭ್ಯಗಳನ್ನು ಒದಗಿಸಿದ್ದ ಎಂದು ತಿಳಿದುಬಂದಿದೆ.

ಪತ್ನಿಯ ಈ ಅಕ್ರಮ ಸಂಬಂಧದ ಬಗ್ಗೆ ಸುಚಿತ್ರಾ ಪತಿ ಮಹೇಶ್‌ಗೆ ಮಾಹಿತಿ ಸಿಕ್ಕಾಗ ಮನೆಯಲ್ಲಿ ದೊಡ್ಡ ಜಗಳ ನಡೆದಿತ್ತು. ತನ್ನ ಸುಖಕ್ಕಾಗಿ ಪತಿ ಮತ್ತು ಸಂಸಾರವನ್ನು ಮರೆತಿದ್ದ ಸುಚಿತ್ರಾ, ಜ್ಯೋತಿಷಿಯ ಜೊತೆಗೂಡಿ ಪತಿಯನ್ನೇ ಸಂಚಿನ ಮೂಲಕ ಮಟ್ಟಹಾಕಲು ಸ್ಕೆಚ್ ಹಾಕಿದ್ದಳು. ಇದೇ ವಿಚಾರವಾಗಿ ಸಿದ್ದಾಪುರದಲ್ಲಿ ಗಲಾಟೆ ನಡೆದಾಗ, ಮಹೇಶ್‌ನನ್ನು ರಕ್ಷಿಸಲು ಬಂದ ಆತನ ಸಹೋದರ ವಸಂತ ನಾಯ್ಕ್ ಅಕ್ರಮ ಸಂಬಂಧದ ಈ ಕಿಚ್ಚಿಗೆ ಬಲಿಯಾಗಬೇಕಾಯಿತು.

Scroll to Top